Belagavi News In Kannada | News Belgaum

ನಾಗರೀಕರ ಮತ್ತು ವಿದ್ಯಾರ್ಥಿಗಳ ದಂತ ಆರೋಗ್ಯ ರಕ್ಷಣಗೆ ವಿಶ್ವನಾಥ ಕತ್ತಿ ದಂತ ವಿದ್ಯಾಯಾಲಯದಿಂದ ಅನೇಕ ಮಹತ್ತರ ಶಿಬಿರಗಳು

 

 

ಬೆಳಗಾವಿ-ಎ.16- ಕೆ.ಎಲ್.ಇ ವಿಶ್ವವಿದ್ಯಾಲಯದ ವಿಶ್ವನಾಥಕತ್ತಿ ದಂತ ಮಹಾವಿದ್ಯಾಲಯವು ನಾಗರೀಕರ ಬಾಯಿ ಆರೋಗ್ಯ ರಕ್ಷಣೆಗೆ ಕಾಳಜಿವಹಿಸಿ ಅನೇಕ ಕಾರ್ಯಕ್ರಮ ರೋಪಿಸಿದೆ. ಇಂದಿನ ಯಾಂತ್ರಿಕ ಜೀವನದ ಅಧುನಿಕ ಯುಗದಲ್ಲಿ ಹಾಗೊ ಜೇವನ ಶೈಲಿಯ ಬದಲಾವಣೆಯಿಂದ ಮತ್ತು ದುಬಾರಿ ಚಿಕಿತ್ಸಾ ವೆಚ್ಚಗಳ ಕಾರಣ ಆರೋಗ್ಯದ ಕಡೆ ಗಮನ ಕೊಡುತ್ತಿರುವುದು ಕಡಿಮೆ ಆಗುತ್ತಿದೆ ಇದನ್ನೆಲ್ಲ ಗಮನಿಸಿದ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ರಾಷ್ಟ್ರೀಯ ಓರಲ್ ಹೆಲ್ತ್ ಮಿಷನ್ ಮಾರ್ಗಸೊಚಿಗಳ ಪ್ರಕಾರ ಸಾರ್ವೆಜನಿಕರ ಆರೋಗ್ಯ ವೃದ್ದಿಗೆ ಹಲವಾರು ಕರ್ಯಕ್ರಮಗಳನ್ನ ಹಮ್ಮಿಕೊಂದಿದೆ.

 

ಇದರ ಅಂಗವಾಗಿ ಒಂದು ತಿಂಗಳ ಪೋರ್ಣವಿಶ್ವ ಬಾಯಿ ಆರೋಗ್ಯ ಜಾಗೃತ ಕಾರ್ಯಕ್ರಮವನ್ನ ಕಳೆದ ತಿಂಗಳು ಉದ್ಘಾಟಿಸಿದ ನಂತರ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ನೇತೃತ್ವದಲ್ಲಿ ಇತ್ತೀಚೆಗೆ ನಗರದ ಹಲವಾರು ಕಡೆ ಪೊರ್ಣ ಉಚಿತವಾಗಿ ನಡೆಸಿದ ಆರೋಗ್ಯ ಶಿಬಿರ, ಜಾಗೃತಿ ಶಿಬಿರ ಹಾಗೊ ಆರೋಗ್ಯ ಶಿಕ್ಷಣದ ವಿವರ ಹೀಗಿದೆ.

ಉದ್ಯಮ್‍ಬಾಗ್‍ದಲ್ಲಿರುವ ವೆಗಾ ಆಟೋ ಆಕ್ಸೆಸರಿಸ್ ಇದರ ಉದ್ಯೋಗಿಗಳಿಗೆ ಬಾಯಿ ಆರೋಗ್ಯ ಶಿಕ್ಷಣ ಮತ್ತು ದಂತ ತಪಾಸಣ ಶಿಬಿರವನ್ನ ನಡೆಸಲಾಯಿತು.

 

ಓರಲ್ ಪೆಥಾಲಜಿ ವಿಭಾಗದ ಸಹಯೋಗದೊಂದಿಗೆ ಬೆಳಗಾವಿಯ ಗಾಂಧಿ ನಗರದ ಶೈಖ್ ಉಲ್ ಇಸ್ಲಾಂ ಟ್ರಸ್ಟ್‍ನಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ತಪಾಸಣ ಶಿಬಿರವನ್ನ ನಡೆಸಲಾಯಿತು.

ಕಾಕತಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಬಾಯಿ ಆರೋಗ್ಯ ಶಿಕ್ಷಣ ಮತ್ತು ದಂತ ತಪಾಸಣ ಶಿಬಿರವನ್ನ ನಡೆಸಲಯಿತು.

 

ವಿದ್ಯಾಲಯದ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟೀವ್ ಡೆಂಟಿಸ್ಟ್ರಿ ವಿಭಾಗ, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ ಮತ್ತು ಆರ್ಥೋಡಾಂಟಿಕ್ಸ್ ವಿಭಾಗಗಳ ಸಹಯೋಗದಲ್ಲಿ ಅಂಕೊರ್ ಶಾಲೆ, ಕಂಟೋನ್ಮೇಂಟ್ ಶಾಲೆ ಮತ್ತು ಸ್ನೇಹಾಲಯದ ಮಾನಸಿಕ ವಿಕಲಚೇತನ ಮಕ್ಕಳ ಸ್ಪರ್ಶ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಬಾಯಿ ಆರೋಗ್ಯ ಶಿಕ್ಷಣ ಮತ್ತು ಉಚಿತ ದಂತ ತಪಾಸಣೆಯನ್ನ ನಡೆಸಲಾಯಿತು.

 

ಬೆಳಗಾವಿಯ ಸಂಜೀವಿನಿ ಫೌಂಡೇಶನ್‍ನಲ್ಲಿ ವಯೋಸಹಜ ನಾಗರೀಕರಿಗೆ ಬಾಯಿಯ ಆರೋಗ್ಯ ಶಿಕ್ಷಣವನ್ನ ನೀಡುವುದರ ಜೋತೆಗೆ ಉಚಿತ ದಂತ ತಪಾಸಣೆಯನ್ನ ಮಾಡಲಾಯಿತು.

ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಸಹಯೋಗದಲ್ಲಿ ಬಾಳೆಕುಂದ್ರಿ ಗ್ರಾಮದಲ್ಲಿ ಉಚಿತ ದಂತ ತಪಾಸಣೆ ಶಿಬಿರ ಮತ್ತು ಚಿಕಿತ್ಸಾ ಶಿಬಿರವನ್ನ ನಡೆಸಲಾಯಿತು.

 

ಅಸ್ಟೆ ಗ್ರಾಮದಲ್ಲಿ ಉಚಿತ ದಂತ ತಪಸಣ ಶಿಬಿರವನ್ನ ನಡೆಸಲಾಯಿತು.

ಜಿ ಹೊಸೊರಿನಲ್ಲಿ ದಂತ ತಪಾಸಣ ಮತ್ತು ರಕ್ತ ತಪಸಣ ಶಿಬಿರವನ್ನ ನಡೆಸಲಾಯಿತು

ಬೆಳಗಾವಿಯ ಲವ್ ಡೇಲ್ ಸೆಂಟ್ರಲ್ ಸ್ಕೊಲ್‍ನಲ್ಲಿ ಬಾಯಿಯ ಆರೋಗ್ಯಕರ ಬಾಯಿ ಸ್ಪರ್ಧೆಯನ್ನು ನಡೆಸಲಾಯಿತು

ಗಜಪತಿಯ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಮಾಧ್ಯಮಿಕ ಕನ್ನಡ ಶಾಲೆಯಲ್ಲಿ ದಂತ ತಪಾಸಣಾ ಶಿಬಿರವನ್ನ ನಡೆಸಲಾಯಿತು

 

ಚಿಕಿತ್ಸೆಗೆ ಹಾಗೊ ತಪಾಸಣೆಗೆ ಅಧುನಿಕ ಸೌಲಭ್ಯ ಹೊಂದಿರುವ ಮೊಬೈಲ್ ಡೆಂಡಲ್ ಕ್ಲಿನಿಕ್ ಬಳಸಲಾಯಿತು

ಮುಂಬರುವ ದಿನಗಳಲ್ಲಿ ಇನ್ನೊ ಹೆಚ್ಚಿನ ಆರೋಗ್ಯ ಕಾರ್ಯಕ್ರಮಗಳನ್ನ ವಿದ್ಯಾಲಯ ನಡೆಸಲಿದ್ದು ಸಾರ್ವಜನಿಕರು ಮತ್ತು ಶಾಲೆಯ ಮಕ್ಕಳು ಇದರ ಉಪಯೋಗ ಪಡೆದು ಬಾಯಿ ಆರೋಗ್ಯವನ್ನ ಕಾಪಾಡಿಕೊಳ್ಳಲು ಪ್ರಾಂಶುಪಾಲರಾದ ಡಾ.ಅಲ್ಕಾ ಕಾಳೆ ತಿಳಿಸಿದ್ದಾರೆ.