19 ರಿಂದ ಅಂಕಲಗಿ ಮಹಾಲಕ್ಷ್ಮೀ, ದ್ಯಾಮವ್ವ ದೇವಿ ಜಾತ್ರೆ

ಬೆಳಗಾವಿ: ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಏ. ೧೯ ರಿಂದ ೨೩ರವರೆಗೆ ಅದ್ಧೂರಿಯಿಂದ ನಡೆಯಲಿದೆ.
೧೯ ರಂದು ಬೆಳಗಿನ ಜಾವ ೬ಕ್ಕೆ ಅಭಿಷೇಕ, ಬೆಳಗ್ಗೆ ೯ ಗಂಟೆಗೆ ಕಳಸಾರೋಹಣ ನೆರವೇರಲಿದೆ. ಅಂಕಲಗಿ ಅಡವಿಸಿದ್ದೇಶ್ವರ ಮಠದ ವಿಜಯಕುಮಾರ ಸ್ವಾಮೀಜಿ, ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮರೇಶ್ವರ ಸ್ವಾಮೀಜಿ ಅವರಿಂದ ಕಳಸದ ಪೂಜೆ, ಮಹಾಲಕ್ಷ್ಮೀದೇವಿ ಹಾಗೂ ದ್ಯಾಮವ್ವದೇವಿ ಮೂರ್ತಿ ಪ್ರತಿಷ್ಠಾನೆ ನಡೆಯಲಿದೆ.
ಅದೇ ದಿನ ಊಡಿ ತುಂಬುವ ಕಾರ್ಯಕ್ರಮವಿದೆ. ಸಂಜೆ ೫ ಗಂಟೆಗೆ ದ್ಯಾಮವ್ವ ದೇವಿ ಹೊನ್ನಾಟ, ರಾತ್ರಿ ೧೦ ಗಂಟೆಗೆ ಡೊಳ್ಳಿನ ವಾಲಗಗಳು ಜರುಗಲಿವೆ.
೨೦ ರಂದು ದ್ಯಾಮವ್ವ ದೇವಿ ಹೊನ್ನಾಟ, ಸಂಜೆ ೪ ಗಂಟೆಗೆ ಬೃಹತ್ ಕುಸ್ತಿ ಪಂದ್ಯಾವಳಿ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಮಹಾಲಕ್ಷ್ಮೀದೇವಸ್ಥಾನದಲ್ಲಿ ಡೊಳ್ಳಿನ ಪದಗಳು ನಡೆಯಲಿವೆ.
೨೧ ರಂದು ಮಧ್ಯಾಹ್ನ ೧೨ ಗಂಟೆಗೆ ಸಾಮೂಹಿಕ ವಿವಾಹ ಸಮಾರಂಭ ಶಾಸಕ ರಮೇಶ ಜಾರಕಿಹೊಳಿ ಸಮ್ಮುಖದಲ್ಲಿ ನಡೆಯಲಿದೆ. ನಂತರ ಮಹಾಪ್ರಸಾದ, ಸಂಜೆ ೪ ಗಂಟೆಗೆ ರಥೋತ್ಸವ ನಡೆಯಲಿದೆ. ೨೨ ರಂದು ದೇವಿಗೆ ನೈವೇದ್ಯ, ಮಹಾಪ್ರಸಾದ ಹಾಗೂ ರಾತ್ರಿ ೧೦ ಗಂಟೆಗೆ ನಾಟಕ ಪ್ರದರ್ಶನವಾಗಲಿದೆ.
೨೩ ರಂದು ಮಹಾಲಕ್ಷ್ಮೀದೇವಿ, ದ್ಯಾಮವ್ವದೇವಿಯ ಆರ್ಶೀವಾದ ಹಾಗೂ ದ್ಯಾಮವ್ವ ದೇವಿ ಸೀಮಿಗೆ ಹೋಗುವ ಮೂಲಕ ಜಾತ್ರೆ ತೆರೆಕಾಣಲಿದೆ ಎಂದು ಶ್ರೀ ಮಹಾಲಕ್ಷ್ಮೀ ಹಾಗೂ ಶ್ರೀ ದ್ಯಾಮವ್ವದೇವಿ ಜಾತ್ರಾ ಕಮೀಟಿ ಪ್ರಕಟಣೆ ತಿಳಿಸಿದೆ.