Belagavi News In Kannada | News Belgaum

ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಶಿವಾಪುರ (ಹ ) ಗ್ರಾಮೀಣರಿಗೆ ಉತ್ತಮ ಆರ್ಥಿಕ ಸೌಲಭ್ಯ

ಮೂಡಲಗಿ ತಾಲೂಕಿನ ಶಿವಾಪುರ (ಹ ) ಗ್ರಾಮದ ಶ್ರೀ ಬಸವೇಶ್ವರ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಶಿವಾಪುರ (ಹ ) ಗ್ರಾಮೀಣರಿಗೆ ಉತ್ತಮ ಆರ್ಥಿಕ ಸೌಲಭ್ಯ ಒದಗಿಸುತ್ತಿರುವ ನಮ್ಮ ಸಹಕಾರಿಯು 2022 ರ ಮಾರ್ಚ್ ಅಂತ್ಯಕ್ಕೆ ರೂ 15,27,948/ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಬಸವರಾಜ್ ಸಾಯನ್ನವರ ತಿಳಿಸಿದರು.

ಸಹಕಾರಿ ಸಭಾಭವನದಲ್ಲಿ ಪ್ರಗತಿ ಕುರಿತು ಪತ್ರಿಕಾಗೋಷ್ಠಿ ಕರೆದಿದ್ದ ವೇಳೆ ಮಾತನಾಡಿದ ಅವರು ಸದ್ಯ ಸಹಕಾರಿಯು ರೂ 15,45,580/ ಲಕ್ಷ ಶೇರು ಬಂಡವಾಳ, ರೂ – 43,45,387/ ಲಕ್ಷ ಒಟ್ಟು ನಿದಿಗಳು, ರೂ 6,29,45,095 ಠೇವುಗಳು,ರೂ 1,59,42,247/ ಕೋಟಿ ಗುಂಥಾ ವನೆಗಳು, ರೂ 4,78,48,955/ ಕೋಟಿ ಸಾಲಗಳು, ರೂ 7,19,32,244/ ಕೋಟಿ ದುಡಿಯುವ ಬಂಡವಾಳ, ರೂ 15,27,948/ ಲಕ್ಷ ಸಂಘದ ಒಟ್ಟು

ಲಾಭಾಂಶ ಹೊಂದಿದೆ ಎಂದು ತಿಳಿಸಿದರು, ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಶೈಲ್ ಕಂಬಾರ ಮಾತನಾಡಿ ನಮ್ಮ ಸಹಕಾರಿಯು ಮೂಡಲಗಿ ತಾಲೂಕಿನ ಬಿಸನಕೊಪ್ಪ ಗ್ರಾಮದಲ್ಲಿ ಒಂದು ಶಾಖೆ ಹೊಂದಿದ್ದು ಅತೀ ಶೀಘ್ರದಲ್ಲಿ ಇನ್ನೊಂದು ಶಾಖೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು, ಪತ್ರಿಕಾಗೋಷ್ಟಿಯಲ್ಲಿ ಸಂಘದ ನಿರ್ದೇಶಕರಾದ ಶಿವಬಸು ಜುಂಜರವಾಡ,

 

ಕೆಂಪಣ್ಣ ಮುಧೋಳ್, ಅಲ್ಲಪ್ಪ ಬೆಳಗಲಿ, ಪ್ರಕಾಶ್ ಮುಧೋಳ್, ಬಾಳಗೌಡ ಪಾಟೀಲ, ಶ್ರೀಮತಿ ಇಂದ್ರವ್ವ್ ಶಿವನಗೌಡ ಪಾಟೀಲ, ಶ್ರೀ ಮತಿ ಮಾನಂದ ನಡಕಡ್ಡಿ, ಶ್ರೀ ಮತಿ ಯಲ್ಲವ್ವ ನಡಗಡ್ಡಿ,, ಶ್ರೀಶೈಲ್ ಮೇಲನಾಡ, ಗಣಪತಿ ಸಂಗಾನಟ್ಟಿ, ಹಾಗೂ ಗೌರವ ಸಲಹೆ ಗಾರರಾದ ಕುಮಾರ್ ಕಂಬಾರ, ಕೆಂಪಣ್ಣ ಬ ಮುಧೋಳ, ಹಾಗೂ ಪ್ರಧಾನ್ ವ್ಯವಸ್ಥಾಪಕರಾದ ಮಲ್ಲಪ್ಪ ನಡಗಡ್ಡಿಶಾಖಾ ವ್ಯವಸ್ಥಾಪಕರಾದ ಶಿವಬಸು ಜುಂಜರವಾಡ ಬ್ಯಾಂಕಿನ ಸಿಬ್ಬಂದಿಗಳಾದ ವೀರಪ್ಪ ಕಂಬಾರ, ಭರತ್ ಸಾಯನ್ನವರ, ಮಹೇಶ್ ಗೌಡಣ್ಣವರ, ಮಹಾದೇವ ಡವಳೇಶ್ವರ್
ಇನ್ನಿತರು ಉಪಸ್ಥಿತರಿದ್ದರು.