Belagavi News In Kannada | News Belgaum

ಬೆಳಗಾವಿ ನಗರಗಳಲ್ಲಿ ವಿವಿಧಡೆ ಹನುಮಜಯಂತಿ ಆಚರಿಸಲಾಯಿತು

ಬೆಳಗಾವಿ ನಗರಗಳಲ್ಲಿ ವಿವಿಧಡೆ ಹನುಮಜಯಂತಿ ಆಚರಿಸಲಾಯಿತು
ಬೆಳಗಾವಿ: ಹನುಮಾನ್ ಜಯಂತಿ ಪ್ರಯುಕ್ತ ಬೆಳಗಾವಿ ನಗರದ ವಿವಿಧೆಡೆ ವಿಶೇಷ ಪೂಜೆ ಭಕ್ತರಿಗೆ ಮಹಾಪ್ರಸಾದ ವಿತರಣೆ
ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಹನುಮಾನ್ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಗಿತ್ತು

ಬೆಳಗಾವಿ ಹಾಗೂ ಸುತ್ತಮುತ್ತಲಿನ ಪರಿಸರದ ಹನುಮಾನ ಮಂದಿರ ಹನುಮಾನ್ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹನುಮ ಜಯಂತಿ ಪ್ರಯುಕ್ತ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ದೇವಸ್ಥಾನಗಳಲ್ಲಿ ಮಾವಿನ ತಳ್ಳಿರು ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು
ಈ ವೇಳೆ ಸುಮಂಗಲಿಯರು ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ತೂಗಿದರು ಈ ವೇಳೆ ಜೋಗುಳ ಪದಗಳನ್ನು ಹಾಡುವ ಮೂಲಕ ಹನುಮ ಜಯಂತಿ ಆಚರಣೆ ಮೆರಗು ತಂದರು ನಗರದ ಮಾರುತಿ ಮಂದಿರ ಅಂಜನೇಯ ಮಂದಿರ ಹನುಮಾನ ಮಂದಿರ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಆಶ್ರಯ ಕಾಲೋನಿ ಪೊಲೀಸ್ ಕಾಲನಿ ಹನುಮಾನ ಮಂದಿರ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು
ಪೂಜಾ ನಂತರ ನೆರೆದಿದ್ದ ಭಕ್ತರಿಗೆ ಮಹಾಪ್ರಸಾದವನ್ನು ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಸಾವಿರಾರು ಭಕ್ತರು ಮಹಾಪ್ರಸಾದ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡರು ಹನುಮಾನ ಕೃಪೆಗೆ ಪಾತ್ರರಾದರು