Belagavi News In Kannada | News Belgaum

ಇನಾಮು ಜಮೀನಗಳ ಮಂಜೂರಾತಿ ಅರ್ಜಿ ಸಲ್ಲಿಸಲು ಕಾಲಾವಧಿ ವಿಸ್ತರಣೆ

 

ಬೆಳಗಾವಿ,ಏ.18: ಕರ್ನಾಟಕ ಕೆಲವು ಇನಾಮು ರದ್ದಿಯಾತಿ ಅಧಿನಿಯಮ 1977 ಹಾಗೂ ಕರ್ನಾಟಕ,(ಸಂಡೂರು ಪ್ರದೇಶ) ಇನಾಮುಗಳ ರದಿಯಾತಿ ಅಧಿನಿಯಮ 1976ಕ್ಕೆ ತಿದ್ದುಪಡಿ ತಂದು ಇನಾಮುಗಳ ಜಮೀನುಗಳ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಧಿ ವಿಸ್ತರಿಸಲಾಗಿದೆ.

ಕರ್ನಾಟಕ ಕೆಲವು ಇನಾಮುಗಳು ರದ್ದಿಯಾತಿ ಮತ್ತು ಕಾನುನೂ (ತಿದ್ದುಪಡಿ) ಅಧಿನಿಯಮ 2021 ರನ್ವಯ ಇನಾಮು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಧಿ ವಿಸ್ತರಿಸಿ ಆದೇಶಿಸಲಾಗಿದೆ ಎಂದು ಬೆಳಗಾವಿ ತಹಸೀಲದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.