Belagavi News In Kannada | News Belgaum

ವಚನ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ಜನವಾಡದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ

ಅಥಣಿ:  ಜನವಾಡ ಅಲ್ಲಮ ಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅನೇಕ ಕೃತಿಗಳನ್ನು ರಚನೆ ಮಾಡಿ ವಚನ ಸಾಹಿತ್ಯಕ್ಷೇತ್ರ ಶ್ರೀಮಂತಗೊಳಿಸಿದ್ದಾರೆ. ಅವರು ಒಳ್ಳೆಯ ವಾಗ್ಮಿಗಳಾಗಿ ಸಂಗೀತಗಾರರಾಗಿ ನಾಡಿನ ತುಂಬೆಲ್ಲ ಬಸವ ತತ್ವಗಳನ್ನು ಪ್ರಸಾರ ಮಾಡುವ ಕಾಯಕ ಮಾಡುತ್ತಿದ್ದಾರೆ. ಅವರು ವಚನ ಸಾಹಿತ್ಯ ಸೇವೆ ಹೀಗೆ ನಿರಂತರವಾಗಿ ಮುಂದುವರೆಯಲೆAದು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಜನವಾಡ ಗ್ರಾಮದ ಝೀರೊಪಾಯಿಂಟ ಹತ್ತಿರದ ನೂತನವಾಗಿ ನಿರ್ಮಾಣವಾದ ಅಲ್ಲಮ ಪ್ರಭು ಆಶ್ರಮದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಾ ಅನೇಕ ವರ್ಷಗಳಿಂದ ಕುಟೀರದಲ್ಲಿ ವಾಸವಿದ್ದು ತೊಂದರೆಗಳಿದ್ದರೂ ಬರೆಯುವ ಕಾಯಕ ಮಾತ್ರ ಶ್ರೀಮಠದ ಪೂಜ್ಯರು ಬಿಟ್ಟಿಲ್ಲ. ವೈಜ್ಞಾನಿಕ ನೆಲೆಯಲ್ಲಿ ಅನೇಕ ಕೃತಿಗಳನ್ನು ಹಾಗೂ ಧ್ವನಿ ಸುರಳಿಗಳನ್ನು ರಚನೆ ಮಾಡಿ ನಾಡಿನ ಸಂಸ್ಕೃತಿ ಶ್ರೀಮಂತಗೊಳಿಸಿದ್ದಾರೆ. ಅವರ ಕಾಯಕ ಪುಸ್ತಕ ರಚನೆ ಸೇವೆ ನಿರಂತರವಾಗಿ ಮುಂದುವರೆಯಲು ಅಲ್ಲಮ ಪ್ರಭು ಆಶ್ರಮದ ಅಭಿವೃದ್ಧಿಗಾಗಿ ಭಕ್ತರು ಶ್ರಮಿಸಬೇಕೆಂದು ಅವರು ಹೇಳಿದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ ಅಲ್ಲಮಪ್ರಭು ಆಶ್ರಮ ಈ ಭಾಗದಲ್ಲಿ ಎಲ್ಲ ಭಕ್ತರ ಜ್ಞಾನ ದಾಹ ತಣಿಸುವ ಕೇಂದ್ರವಾಗಿದೆ. ಸರಳ ಸಜ್ಜನರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸೂತ್ತಲಿನ ಗ್ರಾಮಗಳ ಭಕ್ತರಿಗೆ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಎಲ್ಲ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ, ನದಿ-ಇಂಗಳಗಾAವದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜನವಾಡ ಅಲ್ಲಮ ಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶೇಗುಣಸಿ ವಿರಕ್ತ ಮಠದ ಡಾ. ಮಹಾಂತ ದೇವರು, ಕೋಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ಕೊಪ್ಪಳದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಧಾರವಾಡದ ಶ್ರೀ ಬಸವಾನಂದ ಸ್ವಾಮೀಜಿ, ಜನವಾಡದ ಶ್ರೀ ಪರಮಾನಂದ ಸ್ವಾಮೀಜಿ, ಹೊನವಾಡದ ಶ್ರೀ ಬಾಬುರಾವ ಮಹಾರಾಜ, ಝಿಂಜರವಾಡದ ಶ್ರೀ ಬಸವರಾಜೇಂದ್ರ ದೇವರು, ಮಹಾದೇವ ಧರಿಗೌಡ, ಬಿ.ಆರ್.ಪಾಟೀಲ, ಧರೇಪ್ಪ ಠಕ್ಕಣ್ಣವರ,  ಸಂಗಪ್ಪ ಕುಂದಗೋಳ,
ಮಹೇಶ ಕೋಳಿ, ನಾಗಪ್ಪ ಅಂಬಿ, ಕಲಾವಿದ ಅಂಬಯ್ಯ ನೂಲಿ, ಜಡೆಪ್ಪ ಕುಂಬಾರ, ಅಶೋಕ ಜಗದೇವ, ಬಸವರಾಜ ಭಜರಂಗಿ,  ಮಲ್ಲಪ್ಪ ಹಂಚಿನಾಳ, ಲಕ್ಷö್ಮಣ ಗುರವ, ರಮೇಶ ಅವಟಿ, ಕುಮಾರ ಗುರವ, ಬಸಪ್ಪ ಅವಟಿ, ಪ್ರಕಾಶ ಬ್ಯಾಳಗೌಡರ, ಆನಂದಕುಮಾರ ಪಾಟೀಲ, ದುಂಡಯ್ಯ ಮಠಪತಿ, ಬಸವರಾಜ ಮಡಿವಾಳ , ಸಾಗರ ಮಾಚಕನೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಲ್ಲಮ ಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಬರೆದ ಶರಣರ ವಚನ ವಿವೇಚನೆ ಹಾಗೂ ಬಸವೇಶ್ವರ ವಚನ ವ್ಯಾಖ್ಯಾನ ಭಾಗ -೧ ಕೃತಿಗಳು ಬಿಡುಗಡೆಯಾದವು. ಆಶ್ರಮದ ಭೂದಾನಿಗಳಾದ ಗುರುವ ಬಂಧುಗಳನ್ನು ಶ್ರೀಮಠದಿಂದ ಗೌರವಿಸಿ ಸತ್ಕರಿಸಲಾಯಿತು.