Belagavi News In Kannada | News Belgaum

ಭರತೇಶ ಶಿಕ್ಷಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಭರತೇಶ ಸೆಂಟ್ರಲ್ ಸ್ಕೂಲ್, ಹಲಗಾ ಮರು ನಾಮಕರಣ

 

ಬೆಳಗಾವಿ-  20 ನೆಯ ಎಪ್ರಿಲ್ 2022 ರ ಸಂಜೆ 5 ಗಂಟೆಗೆ ಭರತೇಶ ಶಿಕ್ಷಣ ಸಂಸ್ಥೆ, ಬೆಳಗಾವಿ ಇದರ ವಜ್ರ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಭರತೇಶ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಸ್ಕೂಲ್, ಹಲಗಾ ಇದರ ಹೆಸರನ್ನು “ಶ್ರೀಮತಿ ಸರೋಜಿನಿ ಜಿನದತ್ತ ದೇಸಾಯಿ ಸೆಂಟ್ರಲ್ ಸ್ಕೂಲ್” ಎಂದು ಮರು ನಾಮಕರಣ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರಕದ ಮಾಜಿ ಮಂತ್ರಿಗಳು, ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕøತರಾದ ಡಾ. ಎಂ ವೀರಪ್ಪ ಮೊಯ್ಲಿಯವರು ಉದ್ಘಾಟಿಸಲಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಅಭಯ ಪಾಟೀಲ, ಬೆಳಗಾವಿ ಗ್ರಾಮೀಣ ಶಾಸಕರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಚಿಕ್ಕೋಡಿ – ಸದಲಗಾ ಕ್ಷೇತ್ರದ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ, ನಿಕಟಪೂರ್ವ ಶಾಸಕರಾದ ಶ್ರೀ ಸಂಜಯ ಪಾಟೀಲ ಅವರು ಉಪಸ್ಥಿತರಿರಲಿದ್ದಾರೆ.

 

ಒಂದು ಪ್ರೌಢಶಾಲೆಯಿಂದ 1962 ರಲ್ಲಿ ಪ್ರಾರಂಭವಾದ ಭರತೇಶ ಶಿಕ್ಷಣ ಸಂಸ್ಥೆ ಇಂದು ತನ್ನ 19 ಅಂಗ ಸಂಸ್ಥೆಗಳಿಂದ ಬೆಳೆದು ನಿಂತಿದೆ. 8000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಂದ ಹಾಗೂ 800 ಜನ ಸಿಬ್ಬಂದಿಗಳಿಂದ ಸಂಸ್ಥೆ ಇಂದು ಕಾರ್ಯ ನಿರ್ವಹಿಸುತ್ತಿದೆ. ವಜ್ರ ಮಹೋತ್ಸವದ ಕಾರ್ಯಕ್ರಮಗಳು ಈ ವರ್ಷಪೂರ್ತಿ ನಡೆಯಲಿವೆ. ಅವುಗಳಲ್ಲಿ ಭರತೇಶ ಹೋಮಿಯೊಪಥಿ ಮೆಡಿಕಲ್ ಕಾಲೇಜನ್ನು ಕುಡಚಿಯ ಭವ್ಯ ಕಟ್ಟಡಕ್ಕೆ ಸ್ಥಳಾಂತರಿಸುವುದು,

 

 

ವಿಶೇಷ ಕಾರ್ಯ ನಿರ್ವಹಿಸಿದ ಮಹನೀಯರನ್ನು ಗುರುತಿಸಿ ಸನ್ಮಾನಿಸುವುದು, 2 ಹಳ್ಳಿಗಳನ್ನು ಸುಧಾರಿಸುವುದಕ್ಕಾಗಿ ದತ್ತು ತೆಗೆದುಕೊಳ್ಳುವುದು ಹೀಗೆ ಹಲವು ವಿವಿಧ ಕಾರ್ಯಕ್ರಮಗಳು ಅದರಲ್ಲಿ ಸೇರಿವೆ. ಶ್ರೀಮತಿ ಜೆ.ಆರ್ ದೊಡ್ಡಣವರ ಭರತೇಶ ಹೈಸ್ಕೂಲ್, ಹಲಗಾ ಈ ಸಂಸ್ಥೆಯ ಸ್ವರ್ಣ ಮಹೋತ್ಸವವನ್ನು ಕೂಡ ಈ ವರ್ಷ ಆಚರಿಸಲಾಗುವುದು.

ಭರತೇಶ ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಶ್ರೀ. ಭೂಷನ ಮಿರ್ಜಿ, ಕಾರ್ಯದರ್ಶಿಗಳಾದ ಶ್ರೀ ಶ್ರೀಪಾಲ ಖೆಮಲಾಪುರೆ, ಸಹ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಉಪಾಧ್ಯೆ, ಟ್ರಸ್ಟಿಗಳಾದ ಶ್ರೀ ವಿನೋದ ದೊಡ್ಡಣ್ಣವರ, ವಸಂತ ಕೊಡಚವಾಡ, ಅಶೋಕ ಧನವಡೆ, ಶರದ್ ಪಾಟೀಲ ಹಾಗೂ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.