Belagavi News In Kannada | News Belgaum

ಸ್ಟ್ರಾಂಗ್‌ ಗೃಹ ಸಚಿವರು ಬೇಕೆಂದು ಜಾಹೀರಾತು ನೀಡಲಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವ್ಯಂಗ್ಯ

ವಿಜಯಪುರ: ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್‌ ಗೃಹ ಸಚಿವರು ಬೇಕಾಗಿದ್ದಾರೆ. ಸ್ಟ್ರಾಂಗ್‌ ಗೃಹ ಸಚಿವರು ಬೇಕೆಂದು ಜಾಹೀರಾತು ನೀಡಲಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವ್ಯಂಗ್ಯವಾಡಿದ್ದಾರೆ.

 

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್‌, ‘ ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್‌ ಗೃಹ ಸಚಿವರು ಬೇಕಾಗಿದ್ದಾರೆ. ಸ್ಟ್ರಾಂಗ್‌ ಗೃಹ ಸಚಿವರು ಬೇಕೆಂದು ಜಾಹೀರಾತು ನೀಡಲಿ. ಎಲ್ಲೂ ಗಲಾಟೆ ಆಗ್ತಿಲ್ಲ, ರಾಜ್ಯದಲ್ಲೂ ಮಾತ್ರ ಗಲಾಟೆ ಆಗ್ತಿದೆ. ಎಲ್ಲೆಲ್ಲಿ ವೀಕ್‌ ಇದೆಯೋ ಅಲ್ಲಲ್ಲಿ ಗಲಾಟೆಯಾಗುತ್ತಿದೆ. ಹೀಗಾಗಿ ರಾಜ್ಯಕ್ಕೆ ಸ್ಟ್ರಾಂಗ್‌ ಗೃಹ ಸಚಿವರು ಬೇಕಾಗಿದ್ದಾರೆ ‘ ಎಂದಿದ್ದಾರೆ.