Belagavi News In Kannada | News Belgaum

ಶತಾಯುಷಿ ಶ್ರೀಮತಿ. ಪಾರ್ವತೆಮ್ಮ ರಾ. ಹಿರೇಮಠ ಶಿವಾಧೀನ

ಬೆಳಗಾವಿ ಏ.,18-ಖಾನಾಪೂರ ತಾಲೂಕಿನ ಹಿರೇಮುನವಳ್ಳಿ ಗ್ರಾಮದ ಶ್ರೀಮತಿ. ಪಾರ್ವತೆಮ್ಮ ರಾಚಯ್ಯ ಹಿರೇಮಠ ಇವರು ಸೋಮವಾರ ಸಾಯಂಕಾಲ 7-34 ಗಂಟೆಗೆ ಶಿವಾಧಿನರಾದರು.
ಇವರು 101 ವರ್ಷಗಳ ಕಾಲ ಹಾಗೂ ಶತಾಯುಷಿಗಳಾಗಿ ಸಾವನಪ್ಪಿದ್ದು, ಹಿರೇಮಠರ ಪರಿವಾರಕ್ಕೆ ತುಂಬ ದುಃಖವನ್ನುಂಟು ಮಾಡಿದೆ.
ಇವರುಹಿರೇಮುನವಳ್ಳಿ ಗ್ರಾಮಕ್ಕೆ ಹಿರಿಯರಾಗಿದ್ದು ಜನಾನುರಾಗಿಗಳಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಅವರ ಪುತ್ರರು ಹಾಗೂ ಅವರ ಪುತ್ರಿಯರು ಹಾಗೂ ಸೊಸೆಯಂದಿರು , ಮೊಮ್ಮಕ್ಕಳು ಹಾಗೂ ಎಲ್ಲಾ ಬಂಧು ಬಳಗದವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಅವರ ಅಂತಿಮ ಸಂಸ್ಕಾರವನ್ನು ಸ್ವಗ್ರಾಮದಲ್ಲಿ ಮಂಗಳವಾರ ಮುಂಜಾನೆ 11.00 ಗಂಟೆಗೆ ನೇರವೇರಿಸಲಿದ್ದಾರೆ.