Belagavi News In Kannada | News Belgaum

ವರುಣಾರ್ಭಟಕ್ಕೆ ನೆಲಕ್ಕುರಳಿದ ಮರ: ನೂರಾರು ದ್ವಿಚಕ್ರ ವಾಹನ ಜಖಂ

ಬೆಳಗಾವಿ: ಮಳೆ ಅವಾಂತರದಿಂದ ಬೃಹತ್ತಾಕಾರದ ಮರ ನೆಲಕ್ಕುರಳಿದ್ದು,  ನೂರಾರು ದ್ವಿಚಕ್ರ ವಾಹನ ಜಖಂಗೊಂಡಿರುವ  ಘಟನೆ ಸಿವಿಲ್ ಆಸ್ಪತ್ರೆ ರಸ್ತೆಯಲ್ಲಿ ನಡೆದಿದೆ.

ಮಧ್ಯಾಹ್ನ 3 ಗಂಟೆಗೆ ಗುಡುಗು ಸಮೇತ ಧಾರಕಾರ ಮಳೆ ಸುರಿದಿದ್ದು ಕೆಲಕಾಲ ಸಂಚಾರ ಅಸ್ಥವ್ಯಸ್ಥಗೊಂಡಿದೆ. ಈ ವೇಳೆ ವೇಗವಾಗಿ ಬಿರುಗಾಳಿ ಬಿಸಿದರಿಂದ ಬೃಹತ್ತಾಕಾರದ ಮರವು ಧರೆಗುರುಳಿದೆ.  ಈ ದುರಂತದಿಂದ  ಪಾರ್ಕಿಂಗ್‍ನಲ್ಲಿದ್ದ ನೂರಾರು ಬೈಕ್‌ ಗಳು ಮರದ ಕೆಳಗಡೆ ಸಿಲುಕಿ ಜಖಂಗೊಂಡಿವೆ. ಪಾರ್ಕಿಂಗ್‌ ಸಾರ್ವಜನಿಕರು ಇಲ್ಲದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಎರಡು ಮರಗಳು ರಸ್ತೆ ಮೇಲೆ ಮುಗಚ್ಚಿದ್ದು,  ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ./////