Belagavi News In Kannada | News Belgaum

ಶಿವಯೊಗಿಗಳ ಲಿಂಗೈಕ್ಯ ಶತಮಾನೋತ್ಸವ ಮತ್ತು ಬಸವ ಮಹಾಪುರಾಣ

ಅಥಣಿ: ಇಲ್ಲಿಯ ಗಚ್ಚಿನಮಠದ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ನಿಮಿತ್ಯ ಸೋಮವಾರ 18 ರಂದು ಸಂಜೆ ಬಸವ ಮಹಾಪುರಾಣ ಕಾರ್ಯಕ್ರಮದ ಭವ್ಯ ಉದ್ಘಾಟನೆಯ ಅಂಗವಾಗಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಜನ್ಮಸ್ಥಳವಾದ ನದಿ ಇಂಗಳಗಾವಯಿಂದ ಭಕ್ತರು ಬಸವ ಬುತ್ತಿಯನ್ನ ತರುವ ಜತೆಗೆ ಮುರುಘೇಂದ್ರ ಶಿವಯೋಗಿಗಳ ಮತ್ತು ಬಸವೇಶ್ವರ ಭಾವಚಿತ್ರಗಳ ಮೆರವಣಿಗೆ ಸಮಾರಂಭವು ಜರುಗಿತು.
ಈ ವೇಳೆ ಮಾತನಾಡಿದ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಇದು ತಾಲೂಕಿನ ಭಕ್ತರ ಹೃದಯವೈಶಾಲ್ಯತೆಯ ಪ್ರತೀಕವಾಗಿದೆ ಅಪ್ಪ ಮುರುಘೇಂದ್ರ ಶಿವಯೋಗಿಗಳು ಪ್ರತಿ ಮನೆ, ಮನಸ್ಸುಗಳಲ್ಲಿದ್ದಾಗೆ ಹೀಗಾಗಿ ಭಕ್ತರ ಭಕ್ತಿ ಅಪಾರವಾಗಿದೆ ಅವರ ಸೇವೆಗೆ ಅನಂತ ಶರಣು-ಶರಣಾರ್ಥಿಗಳೆಂದರು. ಇದು ಐತಿಹಾಸಿಕ ಕಾರ್ಯಕ್ರಮವಾಗಿರುವದರಿಂದ ಎಲ್ಲ ಗ್ರಾಮಗಳ ಭಕ್ತರು ಇಲ್ಲಿ ಬರುತ್ತಿದ್ದಾರೆ ಒಂದು ತಿಂಗಳವರೆಗೆ ವಿಶ್ವಗುರು ಬಸವಣ್ಣನವರ ಕುರಿತು ಬಸವ ಪುರಾಣ ಹಮ್ಮಿಕೊಳ್ಳಲಾಗಿದೆ ಈ ಆಧ್ಯಾತ್ಮಿಕ ಹಬ್ಬದಲ್ಲಿ ಪಾಲ್ಗೋಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದರು.
ನದಿ ಇಂಗಳಗಾವಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಮುರುಘೇಂದ್ರ ಶಿವಯೋಗಿಗಳ ಜನ್ಮಸ್ಥಳವಾಗಿರುವ ನದಿಇಂಗಳಗಾವಿಯಿಂದ ಭಕ್ತರು ಈ ಶತಮಾನೋತ್ಸವದಲ್ಲಿ ಪಾಲ್ಗೋಂಡು ತಮ್ಮ ಭಕ್ತಿಯ ಸೇವೆಯನ್ನ ಸಮರ್ಪಿಸಿದ್ದಾರೆ ಇದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.
  ನದಿ ಇಂಗಳಗಾವಿಯ ಸಮಸ್ತ ಭಕ್ತರು,ಸುಮಂಗಲಿಯರು ಬಸವ ಬುತ್ತಿಯನ್ನ ತಮ್ಮ ತಲೆಯ ಮೇಲೆ ಹೊತ್ತುಕೊಂಡು ಪಾದಯಾತ್ರೆಯಲ್ಲಿ ಪಾಲ್ಗೋಂಡಿದ್ದರು.
ವಿದ್ಯಾಪೀಠದ ಶಾಲಾ ಆವರಣದ ವರೆಗೆ ಸಕಲ ವಾದ್ಯವೃಂದಗಳೊಂದಿಗೆ ಕಿಲು ಕುದುರೆ, ಜಾನಪದ ಕಲಾತಂಡಗಳು, ಝಾಂಜ ಪತಾಕಗಳ ವೈಭವದೊಂದಿಗೆ ಮೆರವಣಿಗೆ ಸಾಗಿತು.
ಈ ವೇಳೆ ಹಲ್ಯಾಳದ ಗುರುಸಿದ್ದ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಸಿದ್ದಬಸವ ಕಬೀರ ಸ್ವಾಮೀಜಿ, ವಿರೇಶ್ವರ ದೇವರು, ಸಿದ್ದಲಿಂಗ ದೇವರು, ಮಲ್ಲಿಕಾರ್ಜುನ ದೇವರು, ಆನಂದ ದೇವರು, ಬಸವರಾಜ ದೇವರು, ಮಹಾದೇವ ಮಹಾರಾಜರು, ಗಣ್ಯರಾದ ಚಿದಾನಂದ ಸವದಿ,ಗಜಾನನ ಮಂಗಸೂಳಿ, ಸಂತೋಷ ಸಾವಡಕರ, ಮಹಾಂತೇಶ ಠಕಣ್ಣವರ, ರಾಮನಗೌಡ ಪಾಟೀಲ. ಶಿವರುದ್ರಪ್ಪ ಘುಳಪ್ಪನವರ, ಧರೆಪ್ಪ ಠಕಣ್ಣವರ, ಸೇರಿದಂತೆ ಎಲ್ಲ ಪುರಸಭೆ ಸದಸ್ಯರು, ಗ್ರಾಮಸ್ಥರು,ಹಿರಿಯರು, ಮಹಿಳಾ ಕಾರ್ಯಕರ್ತರಾದ ಶಿಲ್ಪಾ ತೂದಲಬಾಗಿ. ಗೀತಾ ತೋರಿ, ರೋಹಿಣಿ ಯಾದವಾಡ, ಹಲವರು ಗಣ್ಯರು ಪಾಲ್ಗೋಂಡಿದ್ದರು.
ಪೋಟೊ ಶಿರ್ಷಿಕೆ:(೧೮ಅಥಣಿ೧) ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಬಸವಣ್ಣವರ,ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರದ  ಮತ್ತು ಬಸವ ಬುತ್ತಿಯ ಭವ್ಯ ಮೆರವಣಿಗೆಯ ದೃಶ್ಯ.
ಅಥಣಿ: ಇಲ್ಲಿಯ ಗಚ್ಚಿನಮಠದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ನಿಮಿತ್ಯ ಸೋಮವಾರ ೧೮ರಂದು ಸಂಜೆ ಬಸವ ಮಹಾಪುರಾಣ ಕಾರ್ಯಕ್ರಮದ ಭವ್ಯ ಉದ್ಘಾಟನೆಯ ಅಂಗವಾಗಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಮುರುಘೇಂದ್ರ ಶಿವಯೋಗಿಗಳ ಜನ್ಮಸ್ಥಳವಾದ ನದಿ ಇಂಗಳಗಾವಿಯಿAದ ಭಕ್ತರು ಬಸವ ಬುತ್ತಿಯನ್ನ ತರುವ ಜತೆಗೆ ಮುರುಘೇಂದ್ರ ಶಿವಯೋಗಿಗಳ ಮತ್ತು ಬಸವೇಶ್ವರ ಭಾವಚಿತ್ರಗಳ ಮೆರವಣಿಗೆ ಸಮಾರಂಭವು ಜರುಗಿತು.
   ಈ ವೇಳೆ ಮಾತನಾಡಿದ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಇದು ತಾಲೂಕಿನ ಭಕ್ತರ ಹೃದಯವೈಶಾಲ್ಯತೆಯ ಪ್ರತೀಕವಾಗಿದೆ ಅಪ್ಪ ಮುರುಘೇಂದ್ರ ಶಿವಯೋಗಿಗಳು ಪ್ರತಿ ಮನೆ,ಮನಸ್ಸುಗಳಲ್ಲಿದ್ದಾಗೆ ಹೀಗಾಗಿ ಭಕ್ತರ ಭಕ್ತಿ ಅಪಾರವಾಗಿದೆ ಅವರ ಸೇವೆಗೆ ಅನಂತ ಶರಣು
ಶರಣಾರ್ಥಿಗಳೆಂದರು. ಇದು ಐತಿಹಾಸಿಕ ಕಾರ್ಯಕ್ರಮವಾಗಿರುವದರಿಂದ ಎಲ್ಲ ಗ್ರಾಮಗಳ ಭಕ್ತರು ಇಲ್ಲಿ ಬರುತ್ತಿದ್ದಾರೆ ಒಂದು ತಿಂಗಳವರೆಗೆ ವಿಶ್ವಗುರು ಬಸವಣ್ಣನವರ ಕುರಿತು ಬಸವ ಪುರಾಣ ಹಮ್ಮಿಕೊಳ್ಳಲಾಗಿದೆ ಈ ಆಧ್ಯಾತ್ಮಿಕ ಹಬ್ಬದಲ್ಲಿ ಪಾಲ್ಗೋಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದರು.
    ನದಿ ಇಂಗಳಗಾವಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಮುರುಘೇಂದ್ರ ಶಿವಯೋಗಿಗಳ ಜನ್ಮಸ್ಥಳವಾಗಿರುವ ನದಿಇಂಗಳಗಾವಿಯಿAದ ಭಕ್ತರು ಈ ಶತಮಾನೋತ್ಸವದಲ್ಲಿ ಪಾಲ್ಗೋಂಡು ತಮ್ಮ ಭಕ್ತಿಯ ಸೇವೆಯನ್ನ ಸಮರ್ಪಿಸಿದ್ದಾರೆ ಇದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.
  ನದಿ ಇಂಗಳಗಾವಿಯ ಸಮಸ್ತ ಭಕ್ತರು,ಸುಮಂಗಲಿಯರು ಬಸವ ಬುತ್ತಿಯನ್ನ ತಮ್ಮ ತಲೆಯ ಮೇಲೆ ಹೊತ್ತುಕೊಂಡು ಪಾದಯಾತ್ರೆಯಲ್ಲಿ ಪಾಲ್ಗೋಂಡಿದ್ದರು.
ವಿದ್ಯಾಪೀಠದ ಶಾಲಾ ಆವರಣದ ವರೆಗೆ ಸಕಲ ವಾದ್ಯವೃಂದಗಳೊAದಿಗೆ ಕಿಲು ಕುದುರೆ,ಜಾನಪದ ಕಲಾತಂಡಗಳು,ಝಾAಜ ಪತಾಕಗಳ ವೈಭವದೊಂದಿಗೆ ಮೆರವಣಿಗೆ ಸಾಗಿತು.
    ಈ ವೇಳೆ ಹಲ್ಯಾಳದ ಗುರುಸಿದ್ದ ಸ್ವಾಮೀಜಿ,ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ,ಸಿದ್ದಬಸವ ಕಬೀರ ಸ್ವಾಮೀಜಿ,ವಿರೇಶ್ವರ ದೇವರು,ಸಿದ್ದಲಿಂಗ ದೇವರು,ಮಲ್ಲಿಕಾರ್ಜುನ ದೇವರು,ಆನಂದ ದೇವರು,ಬಸವರಾಜ ದೇವರು,ಮಹಾದೇವ, ಮಹಾರಾಜರು,
ಮಾಜಿ ಶಾಸಕ ಶಹಜಹಾನ ಡೊಂಗರಗಾಂವ,ಗಣ್ಯರಾದ ಚಿದಾನಂದ ಸವದಿ,ಗಜಾನನ ಮಂಗಸೂಳಿ, ನ್ಯಾಯವಾದಿ ಕೆ ಎ ವಣಜೋಳ, ಶಿವು ದಿವಾನಮಳ,ರಮೇಶ ಸಿಂದಗಿರಾಮನಗೌಡ ಪಾಟೀಲ,
 ಸಾವಡಕರ,ಕಲ್ಲೇಶ ಮಡ್ಡಿ
 ಸೇರಿದಂತೆ ಎಲ್ಲ ಪುರಸಭೆ ಸದಸ್ಯರು,ಗ್ರಾಮಸ್ಥರು,ಹಿರಿಯರು,ಮಹಿಳಾ ಕಾರ್ಯಕರ್ತರಾದ ಶಿಲ್ಪಾ ತೋದಲಬಾಗಿ,ಗೀತಾ ತೋರಿ ಸೇರಿದಂತೆ ಇನ್ನೂ ಅನೇಕರು ಪಾಲ್ಗೋಂಡಿದ್ದರು.