Belagavi News In Kannada | News Belgaum

‘ರಾಮಾಯಣ-ಮಹಾಭಾರತ ಇಂದಿಗೂ ಪ್ರೇರಣೆ ಕೊಡ್ತಿದೆ ಎಂದಾದ್ರೆ ಮುಂದಿನ ಜನರೇಷನ್‌ಗೆ ಯಾಕೆ ಕೊಡಬಾರದು’

ನಾವು ಹೇಳಿರುವುದನ್ನು ಸ್ಪಷ್ಟವಾಗಿ ಹೇಳಿದ್ದೇವೆ, ನೈತಿಕ ಶಿಕ್ಷಣವನ್ನು ಪಠ್ಯದಲ್ಲಿ ತರುತ್ತೇವೆ. ಇದು ಹಿಂದಿನಿಂದ ಇದ್ದಿದ್ದೇ, ಹೊಸದಾಗಿ ಬಿಜೆಪಿ ಸರ್ಕಾರ ತರುತ್ತಿರುವುದಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಪಠ್ಯದಲ್ಲಿ ರಾಮಾಯಣ ಮತ್ತು ಭಗವದ್ಗೀತೆ ಸೇರಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಮನುಷ್ಯನಿಗೆ ಈ ದೇಶದಲ್ಲಿ ಎಲ್ಲವನ್ನು ಕಲಿಸುವುದೇ ಶಿಕ್ಷಣ. ಬರೀ ಕೆಲಸ ಕೊಡಿಸುವುದು ಶಿಕ್ಷಣ ಅಲ್ಲ, ಅದು ಇತ್ತೀಚಿಗೆ ಆಗಿರುವಂತಹದ್ದು. ಮನುಷ್ಯನ ಜೀವನಕ್ಕೆ ಕೊಡುವಂತಹ ಶಿಕ್ಷಣ ತಪ್ಪಿ ಹೋಗಿದೆ. ನಾವು, ನೀವು ಓದುವಾಗ ಮಾರಲ್ ಸೈನ್ಸ್ ಅಂತ ಇತ್ತು. ಇದೀಗ ಅದು ತಪ್ಪಿ ಹೋಗಿದೆ.

ಅದೆಷ್ಟು ವರ್ಷದ ಹಿಂದೆ ರಾಮಾಯಣ, ಮಹಾಭಾರತ ನಡೆದಿತ್ತು ಗೊತ್ತಿಲ್ಲ.ಅದು ಇವತ್ತಿಗೂ ಹಳ್ಳಿಗಳಲ್ಲಿ ಪ್ರೇರಣೆ ಕೊಡುತ್ತಿದೆ ಎನ್ನುವುದಾದರೆ ಮುಂದಿನ ಜನರೇಷನ್‌ಗೆ ಯಾಕೆ ಕೊಡಬಾರದು. ಆ ತರಹದ ನೈತಿಕ ಶಿಕ್ಷಣವನ್ನು ನಾವು ಪಠ್ಯದಲ್ಲಿ ಸೇರಿಸುತ್ತಿದ್ದೇವೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಪಂಚತಂತ್ರದಲ್ಲಿ ಇರುವಂತಹ ನೈತಿಕಕತೆಗಳನ್ನು ನೈತಿಕ ಶಿಕ್ಷಣವಾಗಿ ಕೊಡ್ತೀವಿ ಎಂದರು.