Belagavi News In Kannada | News Belgaum

ಚಾಕು ತೋರಿಸಿಯೇ ಇಲ್ಲ, ನಾನು ಹೆದರಿ ಓಡಿಹೋಗಿದ್ದೆ?- ನಬೀಸಾಬ್

ಶ್ರೀರಾಮಸೇನೆ ಕಾರ್ಯಕರ್ತರು ತೆಂಗಿನಕಾಯಿ ಒಡೆಯುತ್ತಾ ಬಂದಿದ್ದರು. ನಂತರ ನಮ್ಮ ಅಂಗಡಿಗೆ ಬಂದು ಕಲ್ಲಂಗಡಿ ಒಡೆಯೋಕೆ ಶುರು ಮಾಡಿದರು ಎಂದು ಅಂಗಡಿ ಮಾಲೀಕ‌ ನಬೀಸಾಬ್ ಪ್ರತಿಕ್ರಿಯೆ ನೀಡಿದ್ದಾರೆ.

ಕಲ್ಲಂಗಡಿ ಗಲಾಟೆ ವಿಚಾರವಾಗಿ ಪ್ರತಿದೂರು ದಾಖಲಾಗಿರುವ ಕುರಿತು ಮಾತನಾಡಿದ ನಬೀಸಾಬ್​, ಪಟ್ ಪಟ್ ಅಂತ ಕಲ್ಲಂಗಡಿ ಒಡೆಯೋಕೆ ಶುರು ಮಾಡಿದ್ರು. ಈ ಸಂದರ್ಭ ನಾನು ಸುಮ್ಮನೆ ಸರಿದು ಬಿಟ್ಟೆ‌. ಕಲ್ಲಂಗಡಿ ಮೇಲೆ ಉಗುಳಿ ಕೊಡುತ್ತಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಅವರು ಬೇಕಾದ್ದು ಹೇಳಬಹುದು. ಅಲ್ಲಿ ಜನರಿದ್ದಾರೆ, ಬೇರೆ-ಬೇರೆ ವ್ಯಾಪಾರಿಗಳೂ ಅಲ್ಲಿದ್ದಾರೆ, ಅವರನ್ನೆಲ್ಲ ಬೇಕಾದರೆ ಕೇಳಲಿ.

ಚಾಕು ತೋರಿಸಿಯೇ ಇಲ್ಲ, ನಾನ್ಯಾಕೆ ಹೆದರಿಸಲಿ? ಆಗ ನಾನು ಹೆದರಿ ಓಡಿಹೋಗಿದ್ದೆ. ಕಲ್ಲಂಗಡಿ ಒಡೆಯೋಕೆ ಶುರು ಮಾಡಿದ ಮೇಲೆ ಓಡಿ ಹೋಗಿದ್ದೆ ಎಂದಿದ್ದಾರೆ.