Belagavi News In Kannada | News Belgaum

COVID ಸೋಂಕಿಗೆ ಒಳಗಾಗಿದ್ದ 30% ಜನರಲ್ಲಿ ಕಂಡು ಬರುತ್ತಿದೆ ಆತಂಕಕಾರಿ ಸಮಸ್ಯೆಗಳು!

ಅಮೇರಿಕಾನಲ್ಲಿ ನಡೆಸಿದ ಅಧ್ಯಯನದ ಪ್ರಕಾರ, COVID-19 ಸೋಂಕಿಗೆ ಒಳಗಾದ ಶೇಕಡಾ 30 ರಷ್ಟು ಜನರು COVID ನಂತರವೂ ಚಿತ್ರ ವಿಚಿತ್ರ ಸಮಸ್ಯೆಗಳಿಂದ ಬಳಲುತ್ತಿದ್ದು ಇದು SARS-CoV-2 ಸೋಂಕಿನಿಂದ ಗುಣಮುಖರಾದ ನಂತರವೂ ಹಲವಾರು ತಿಂಗಳುಗಳವರೆಗೆ ಆರೋಗ್ಯದ ಕುರಿತ ಸಮಸ್ಯೆಗಳನ್ನು ಎದುರಿಸುತ್ತಿದ್ದು, USನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ (UCLA) ಯ ಸಂಶೋಧಕರು ಮಧುಮೇಹ ಮತ್ತು ಇತರ ಸಮಸ್ಯೆ ಹೊಂದಿರುವ ಜನರು ಹೆಚ್ಚಾಗಿ ಕೋವಿಡ್-19 (PASC) ನ ನಂತರದ ತೀವ್ರ ಪರಿಣಾಮಗಳನ್ನು ಎದುರಿಸುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದ್ದಾರೆ.

ಜರ್ನಲ್ ಆಫ್ ಜನರಲ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಕೋವಿಡ್ ಖಾಯಿಲೆಯಿಂದ ಗುಣಮುಖವಾದ ತಿಂಗಳುಗಳ ಬಳಿಕ ಬೇರೆ ರೀತಿಯ ಕಾಯಿಲೆಗಳಿಗೆ ಒಳಗಾಗುವ ಸಂಭವ ಇದೆ ಎಂದು ಕಂಡುಹಿಡಿದಿದೆ.

ಈ ಒಂದು COVID ಅಧ್ಯಯನದಲ್ಲಿ ಭಾಗವಹಿಸಿದ್ದ 309 ಜನರಲ್ಲಿ, ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳಲ್ಲಿ ಆಯಾಸ ಮತ್ತು ಉಸಿರಾಟದ ತೊಂದರೆ (ಕ್ರಮವಾಗಿ ಶೇಕಡಾ 31 ಮತ್ತು ಶೇಕಡಾ 15) ಜನರಲ್ಲಿ ಕಂಡು ಬಂದಿದೆ.
“ಈ ಅಧ್ಯಯನವು ಕೋವಿಡ್ ಕಾಯಿಲೆಯ ಗುಣಮುಖವಾದ ನಂತರದ ಪರಿಣಾಮಗಳನ್ನ ಅರ್ಥಮಾಡಿಕೊಳ್ಳಲು ಮತ್ತು ವೈರಸ್ ರೂಪಾಂತರದ ನಂತರ COVID ರೋಗಲಕ್ಷಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ.” ಎಂದು ಯುಸಿಎಲ್‌ಎಯಲ್ಲಿ ಆರೋಗ್ಯ ವಿಜ್ಞಾನ ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಸನ್ ಯೂ ಹೇಳಿದರು.