Belagavi News In Kannada | News Belgaum

ವಿಮೆ ಹಣ ಸಿಗುತ್ತೆ ಎಂಬ ಕಾರಣಕ್ಕೆ ತನ್ನ ಕಾರಿಗೆ ತಾನೆ ಬೆಂಕಿ ಇಟ್ಟ ಖತರ್ನಾಕ್ ಬಿಜೆಪಿ ಮುಖಂಡ

ಪತ್ನಿಗೆ ಚಿನ್ನಾಭರಣ ಕೊಡಿಸಲು ತನ್ನ ಕಾರಿಗೆ ತಾನೆ ಬೆಂಕಿ ಇಟ್ಟ ಘಟನೆ ನಡೆದಿದೆ.ತಮಿಳುನಾಡು ತಿರುವಳ್ಳೂರು ಜಿಲ್ಲೆಯ ಬಿಜೆಪಿ ಘಟಕದ ಕಾರ್ಯದರ್ಶಿ ಸತೀಶ್ ಎಂಬಾತ ನಡೆಸಿದ ಕೃತ್ಯ ಇದು

ತನ್ನ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಂದು ತಮಿಳುನಾಡು ಪೊಲೀಸರಿಗೆ ಸತೀಶ್ ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲೀಸರು ಸತೀಶ್ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿಲ್ಲ ಖುದ್ದು ಆತನೇ ಬೆಂಕಿ ಹಚ್ಚಿ ಸುಳ್ಳು ದೂರು ನೀಡಿದ್ದಾನೆಂದು ತನಿಖೆ ವೇಳೆ ತಿಳಿದುಬಂದಿದೆ. ನಂತರ ಸತೀಶ್ ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪತ್ನಿ ಚಿನ್ನಾಭರಣಕ್ಕಾಗಿ ಬಹುದಿನಗಳಿಂದ ಪೀಡಿಸುತ್ತಿದ್ದಳು .

ಹಣವಿಲ್ಲದ ಕಾರಣ ಪ್ಲಾನ್ ಮಾಡಿ ಮನೆ ಮುಂದೆ ನಿಲ್ಲಿಸಿದ ತನ್ನ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ . ಕಾರು ಸುಟ್ಟ ಬಳಿಕ ಅದರಿಂದ ಸಿಗುವ ಇನ್ಸ್ಯೂರೆನ್ಸ್ ನಿಂದ ಪತ್ನಿಗೆ ಚಿನ್ನಾಭರಣ ಕೊಡಿಸಬಹುದೆಂದು ಪ್ಲಾನ್ ಮಾಡಿದ್ದ .ಸದ್ಯ ಸತೀಶ್ ಪೊಲೀಸರ ಅತಿಥಿಯಾಗಿದ್ದಾನೆ .