ಹುಬ್ಬಳ್ಳಿ ಗಲಭೆಯಲ್ಲಿ ಇಬ್ಬರು ಪೊಲೀಸರ ಹತ್ಯೆಗೆ ಯತ್ನ: ಕೂದಲೆಳೆಯ ಅಂತರದಲ್ಲಿ ಬಚಾವ್

ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಇಬ್ಬರ ಪೊಲೀಸರ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಕೂದಲೆಳೆಯ ಅಂತರದಲ್ಲಿ ಕಾನ್ಸ್ಟೇಬಲ್ಗಳು ಬಚಾವಾಗಿದ್ದಾರೆ.
ಗಲಭೆಕೋರರು ದಡ್ಡಿ ಹನುಮಂತ ದೇವಸ್ಥಾನದ ಬಳಿ ಕಬಾಸ್ ಪೇಟೆ ಠಾಣೆಯ ಕಾನ್ಸ್ಟೇಬಲ್ಗಳಾದ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರೆಡ್ಡಿ ಎಂಬುವವರನ್ನು ತಡೆದು ಸೈಜುಗಲ್ಲು ಎತ್ತಿಹಾಕಿ ಹತ್ಯೆ ಮಾಡಲು ಯತ್ನಿಸಿದ್ದರು. 10 ರಿಂದ 15 ಜನ ಗಲಭೆಕೋರರು ಸುತ್ತುವರಿದು ಕೊಲ್ಲಲು ಯತ್ನಿಸಿದ್ದರು.
ಕಾನ್ಸ್ಟೇಬಲ್ಗಳು ಬೈಕ್ ಅಲ್ಲಿಯೇ ಬಿಟ್ಟು ಗಲಭೆಕೋರರಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ದೂರು ಸಹ ದಾಖಲಿಸಿದ್ದಾರೆ.