Belagavi News In Kannada | News Belgaum

ಮಳೆ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವ ಕೆ.ಸಿ. ನಾರಾಯಣಗೌಡ

ಜಿಲ್ಲೆಯ ಕೆ.ಆರ್​​ ಪೇಟೆ ತಾಲೂಕಿನ ವಿವಿಧ ಭಾಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗಿದ್ದು, ಭಾರೀ ಬೆಳೆ ಹಾನಿಯಾಗಿದೆ.

ಕೆ.ಆರ್​​ ಪೇಟೆ ತಾಲೂಕಿನ ಮಡುವಿನಕೋಡಿ, ಅಕ್ಕಿಹೆಬ್ಬಾಳು, ಸೋಮನಾಥಪುರ, ಸಾಕ್ಷಿಬೀಡು ಗ್ರಾಮದ ಮಳೆಹಾನಿ ಪ್ರದೇಶಗಳಿಗೆ ಯುವಸಬಲೀಕರಣ ಸಚಿವ ಕೆ.ಸಿ. ನಾರಾಯಣಗೌಡ ಭೇಟಿ ನೀಡಿದ್ದಾರೆ.

ಭಾರೀ ಮಳೆಗೆ ಹಾನಿ ಪ್ರದೇಶಗಳನ್ನು ಪರಿಶೀಲನೆ ನಡೆಸಿದ ಸಚಿವ ನಾರಾಯಣ ಗೌಡ ನೊಂದ ಸಂತ್ರಸ್ತರಿಗೆ ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ. ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆ ಕಳೆದುಕೊಂಡಿದ್ದ ಸುಬ್ಬರಾಮಯ್ಯ ಎಂಬುವರಿಗೆ ಸ್ಥಳದಲ್ಲೇ 75 ಸಾವಿರದ ಚೆಕ್, 10 ಸಾವಿರ ನಗದು ಪರಿಹಾರ ನೀಡಿದ್ದಾರೆ.