Belagavi News In Kannada | News Belgaum

ಅಲ್ಪಸಂಖ್ಯಾತರು ಮುಗ್ಧ ಜನರು, ಅಮಾಯಕರು: ಆನಂದ್ ಸಿಂಗ್

ಅಲ್ಪಸಂಖ್ಯಾತರ ಅಮಾಯಕತನವನ್ನು ಬಳಸಿಕೊಂಡು ಜಾತಿ ವಿಷ ಬೀಜ ಬಿತ್ತಿ ಪ್ರಚೋದನೆ ಮಾಡುತ್ತಾರೆ ಎಂದು ಬಿಜೆಪಿ ಶಾಸಕ ಆನಂದ್ ಸಿಂಗ್ ಅಲ್ಪಸಂಖ್ಯಾತರ ಪರ ಬ್ಯಾಟ್ ಬೀಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು ಮುಗ್ಧ ಜನರು. ಅಮಾಯಕರು ಇರೋರಲ್ಲಿ, ಕೆಲ ಬುದ್ದಿವಂತ ಲೀಡರ್‍ಗಳಿದ್ದಾರೆ. ಅವರೆಲ್ಲಾ ಇವರನ್ನು ಕಂಟ್ರೋಲ್ ಮಾಡುತ್ತಾರೆ. ಈ ಹಿಂದೆ ಸಿಎಎ ಎನ್‍ಆರ್‍ಸಿ ಬಗ್ಗೆ ಪ್ರತಿಭಟನೆಗೆ ಕರೆದಿದ್ದರು. ನಾನು ಅವರನ್ನು ಕೇಳಿದೆ ಎಲ್ಲಿಗೆ ಹೋಗಿದ್ರಿ ಅಂತ. ಅದಕ್ಕೆ ಅವರು ಹೇಳಿದರು ಅದೇನೋ ಕರೆದಿದ್ದರು ಸರ್ ಹೋಗಿದ್ದೇವು ಅಂದರು. ಅವರು ಅಮಾಯಕರಿದ್ದಾರೆ, ಅಂತಹ ಟೈಮಲ್ಲಿ ಕೆಲವರು ಪ್ರಚೋದನೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಲ ನಾಯಕರು ಪ್ರಚೋದನೆ ಮಾಡುವುದು ಓಟ್ ಬ್ಯಾಂಕ್ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ನಾನು ಕಾಮನ್ ಮ್ಯಾನ್ ಆಗಿ ಹೇಳ್ತೀನಿ ಅವರು ಅಮಾಯಕರು. ಅವರ ಅಮಾಯಕತನವನ್ನು ಬಳಸಿಕೊಂಡು ಜಾತಿ ವಿಷ ಬೀಜ ಬಿತ್ತಿ ಪ್ರಚೋದನೆ ಮಾಡುತ್ತಾರೆ. ಅವರ ತಲೆ ತಿಕ್ಕುವ ಕೆಲಸ ನಡೀತಾ ಇದ್ದು, ಅದು ಕಾಂಗ್ರೆಸ್ ಪಕ್ಷದಿಂದ ನಡೀತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಯಾರೇ ಆಗಿರಲಿ ಅಂಬೇಡ್ಕರ್ ಅವರು ಸಮಾನತೆಯ ಸಂವಿಧಾನ ಬರೆದುಕೊಟ್ಟಿದ್ದಾರೆ. ಆ ಸಂವಿಧಾನದ ವಿರುದ್ಧ ಯಾರೂ ಹೋಗಲ್ಲ. ಮೈನಾರಿಟೀಸ್‍ನಲ್ಲಿಯೂ ವಿದ್ಯಾವಂತರಿದ್ದಾರೆ. ಅಮಾಯಕರನ್ನು ಹಿಡಿದುಕೊಂಡು ಗಲಭೆ ಮಾಡುತ್ತಾರೆ, ಮೊನ್ನೆ ಹುಬ್ಬಳ್ಳಿಯಲ್ಲಿಯೂ ಅದೇ ಆಗಿದೆ ಎಂದರು.