Belagavi News In Kannada | News Belgaum

ನಮ್ಮ ಬಾಹುಬಲಿ: ಗಿಡಮರಗಳಿಗೆ ನೀರುಣಿಸುವ ನಿತ್ಯದ ಕಾಯಕ.. ಕರಿಘಟ್ಟ ಬೆಟ್ಟದ ಕಾಡಿಗೆ ಇವರೇ ಪೋಷಕ.. !

ಹೆಸರು ರಮೇಶ್​.. ಮೂಲತಃ ಶ್ರೀರಂಗಪಟ್ಟಣದ ಪರಿಸರ ಪ್ರೇಮಿ.. ಕಾಲೇಜು ದಿನಗಳಿಂದಲೂ ತಮ್ಮನ್ನ ತಾವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.. ದಿನಗಳು ಉರುಳಿದಂತೆ ಪರಿಸರ ಕಾಳಜಿ ಹೆಚ್ಚಾಗ್ತಾ ಹೋಯ್ತು.. ಆ ನಿಟ್ಟಿನಲ್ಲಿ ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದಲ್ಲಿರುವ ಗಿಡ-ಮರಗಳಿಗೆ ಸದಾ ನೀರುಣಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ.. ನೀರಿನ ಕ್ಯಾನ್​ ಗಳಲ್ಲಿ ಹೊಳೆ ನೀರನ್ನ ತುಂಬಿಸಿಕೊಂಡು, ತಮ್ಮದೇ ಗೂಡ್ಸ್ ಆಟೋ ಮೂಲಕ ಬೆಟ್ಟಕ್ಕೆ ಹೋಗಿ ಗಿಡಗಳಿಗೆ ನೀರುಣಿಸುತ್ತಿದ್ದಾರೆ.. ಅಷ್ಟೇ ಅಲ್ಲದೇ, ವರ್ಷಕ್ಕೆ 200 ರಿಂದ 300 ಗಿಡಗಳನ್ನ ಬೆಟ್ಟದಲ್ಲಿ ನೆಡುತ್ತಿದ್ದಾರೆ. ಜನರಲ್ಲಿ, ವಿದ್ಯಾರ್ಥಿಗಳಲ್ಲಿ, ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.. ರಸ್ತೆ ಬದಿಗಳಲ್ಲಿ, ಶಾಲಾ ಆವರಣದಲ್ಲಿ ಗಿಡಗಳನ್ನ ನೆಟ್ಟು ಪೋಷಿಸುತ್ತಿದ್ದಾರೆ.. ಈವರೆಗೆ ರಮೇಶ್​ ಅವರು ನೆಟ್ಟಿರುವ ಎಷ್ಟೋ ಗಿಡಗಳು ಮರವಾಗಿ ಜನಸಾಮಾನ್ಯರಿಗೆ ನೆರಳಾಗಿ ನಿಂತಿವೆ.. ಆ ಪರಿಸರ ಪ್ರೇಮಿ ರಮೇಶ್​ ಅವರೇ ಇಂದಿನ ನಮ್ಮ ಬಾಹುಬಲಿ..