Belagavi News In Kannada | News Belgaum

ಕಿಡಿಗೇಡಿ ಮುಸ್ಲಿಮರ ಮನೆ ಮೇಲೆ ಬುಲ್ಡೋಜರ್ ದಾಳಿ ಮಾಡಿ: ಮಂಡ್ಯದಲ್ಲಿ ವಿಶೇಷ ಪೂಜೆ

ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಆರಂಭವಾಗಿದ್ದ ಬುಲ್ಡೋಜರ್ ರಾಜಕೀಯ ಸಕ್ಕರೆನಾಡು ಮಂಡ್ಯಕ್ಕೂ ಕಾಲಿಟ್ಟಿದೆ. ಮಂಡ್ಯ ನಗರದ ಶಕ್ತಿದೇವತೆ ಕಾಳಿಕಾಂಬ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಬುಲ್ಡೋಜರ್​ಗೆ ಪೂಜೆ ಸಲ್ಲಿಸಿದ್ದಾರೆ.

ಹಿಂದೂ-ಮುಸ್ಲಿಂಗಳು ಅಣ್ಣ-ತಮ್ಮಂದಿರ ರೀತಿ ಇದ್ದೇವೆ. ಈ ಭಾರತ ದೇಶದಲ್ಲಿ ನಾವೆಲ್ಲರೂ ಒಂದಾಗಿರಬೇಕು. ಮಧ್ಯಪ್ರದೇಶ-ಉತ್ತರ ಪ್ರದೇಶ ಮುಖ್ಯಮಂತ್ರಿಗಳ ರೀತಿಯೇ ನಮ್ಮ ಸಿಎಂ ಆಗಬೇಕು ಎಂದು ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ಬುಲ್ಡೋಜರ್​ಗೆ ಪೂಜೆ ಸಲ್ಲಿಸಿ, ಈಡುಗಾಯಿ ಒಡೆದಿದ್ದಾರೆ. ಜಹಾಂಗೀರ್ ಪೂರಿಯಲ್ಲಿ ನಡೆದ ಬುಲ್ಡೋಜರ್ ಕಾರ್ಯಕ್ರಮದ ರೀತಿಯೇ ನಮ್ಮ ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆ ನಡೆಯಬೇಕು

ನಾವು ಹಾಗೂ ಮುಸ್ಲಿಮರು ಅಣ್ಣ-ತಮ್ಮಂದಿರು ಇದ್ದಾಗೆ. ನಮ್ಮ ಎತ್ತುಗಳಿಗೆ ಲಾಳ ಹಾಕುವವರು, ನಮ್ಮ ಸೈಕಲ್​ಗೆ ಪಂಚರ್ ಹಾಕುವವರು ಅವರೇ. ಹಿಂದೂ-ಮುಸ್ಲಿಮರ ಅನ್ಯೋನ್ಯತೆಯನ್ನ ತಡೆಯಲಾಗದೇ ಕೆಲವು ಮುಸ್ಲಿಂ ಕಿಡಿಗೇಡಿಗಳು, ದುಷ್ಕರ್ಮಿಗಳು ಕಿಡಿ ಹಚ್ಚಿದ್ದಾರೆ. ಅಂತಹ ಕಿಡಿಗೇಡಿಗಳ ಮನೆ ಮೇಲೆ ನಮ್ಮ ಕರ್ನಾಟಕದಲ್ಲೂ ಬುಲ್ಡೋಜರ್ ದಾಳಿ ಮಾಡಬೇಕು.

ಕರ್ನಾಟಕದ ಸಿಎಂ ಬುಲ್ಡೋಜರ್ ಬಸವಣ್ಣ ಆದರೆ ಮಾತ್ರ, ಕರ್ನಾಟಕದಲ್ಲಿ ಹಿಂದೂಗಳು ತಲೆ ಎತ್ತಬಹುದು. ಹನುಮ ಜಯಂತಿ, ರಾಮನವಮಿ, ಸಂತೋಷದಿಂದ ಆಚರಣೆ ಮಾಡಬಹುದು. ತಕ್ಷಣವೇ ಕಿಡಿಗೇಡಿ ಮುಸ್ಲಿಮರ ಮನೆ ಮೇಲೆ ಬುಲ್ಡೋಜರ್ ದಾಳಿ ಮಾಡಿ ಎಂದು ಗೃಹ ಸಚಿವ ಹಾಗೂ ಸಿಎಂಗೆ ಮನವಿ ಮಾಡಿದ್ದಾರೆ.