Belagavi News In Kannada | News Belgaum

ಹಿಜಬ್ ಹೋರಾಟಗಾರ್ತಿಯರು ಸೆಕೆಂಡ್ ಪಿಯುಸಿ ಪರೀಕ್ಷೆ ಬರೆಯೋದು ಡೌಟ್

ರಾಜ್ಯಾದ್ಯಂತ ಶುಕ್ರವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದೆ. ಹಿಜಬ್ ಹೋರಾಟದ ವಿಚಾರಕ್ಕೆ ನಾಳೆ ಆರಂಭವಾಗಲಿರುವ ಪರೀಕ್ಷೆಗಳು ಭಾರೀ ನಿರೀಕ್ಷೆಗೆ ಕಾರಣವಾಗಿದೆ. ಶೈಕ್ಷಣಿಕ ಜೀವನದ ಮಹತ್ವದ ಘಟ್ಟ ಆಗಿರುವುದರಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಬ್ ತೆಗೆದು ಕ್ಲಾಸಿಗೆ ಬಂದು ಪರೀಕ್ಷೆ ಬರೆಯುತ್ತಾರಾ ಎಂಬುದು ಕುತೂಹಲದ ಪ್ರಶ್ನೆ.

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ ಆಗುತ್ತಿದೆ. ಎಲ್ಲಾ ಜಿಲ್ಲೆಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಡುವೆ ಹಿಜಬ್ ಹೋರಾಟಗಾರ್ತಿಯರು ಪರೀಕ್ಷೆ ಬರೆಯುತ್ತಾರಾ? ಹೈ ಕೋರ್ಟ್ ತೀರ್ಪಿನಂತೆ ಹಿಜಬ್ ತೆಗೆದು ಪರೀಕ್ಷೆಗೆ ಹಾಜರಾಗುತ್ತಾರೆ ಎಂಬ ಕುತೂಹಲಗಳು ಇವೆ. ಉಡುಪಿಯ ಆರು ಜನ ಹಿಜಬ್ ಹೋರಾಟಗಾರ್ತಿಯರ ಪೈಕಿ ನಾಲ್ವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು. ಕಾಮರ್ಸ್ ವಿಭಾಗದ ಪರೀಕ್ಷೆಗಳು ನಾಳೆ ನಡೆಯಲಿದ್ದು ನಾಲ್ವರ ಪೈಕಿ ಇಬ್ಬರಿಗೆ ಪರೀಕ್ಷೆ ಇದೆ.

ಉಡುಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಕ್ಕಿಗಾಗಿ ಡಿಸೆಂಬರ್ ಕಡೆಯ ವಾರದಿಂದ ಬಹಿರಂಗ ಹೋರಾಟ ನಡೆಸಿದ್ದರು. ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ಹಿಜಬ್ ಗೆ ಅವಕಾಶ ಇಲ್ಲ ಎಂಬ ಮಹತ್ವದ ತೀರ್ಪು ಹೊರಬಿದ್ದಿತ್ತು. ಆನಂತರ ಆರು ವಿದ್ಯಾರ್ಥಿಗಳು ತರಗತಿಗೆ ಪೂರ್ವಭಾವಿ ಪರೀಕ್ಷೆಗಳಿಗೆ ಹಾಜರಾಗಿರಲಿಲ್ಲ. ಆರರ ಪೈಕಿ ಇಬ್ಬರು ಪ್ರಥಮ ಪಿಯು ಪರೀಕ್ಷೆಗೆ ಬಂದಿರಲಿಲ್ಲ. ಹೀಗಾಗಿ ನಾಳೆಯಿಂದ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಗೂ ನಾಲ್ವರು ವಿದ್ಯಾರ್ಥಿಗಳು ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.