Belagavi News In Kannada | News Belgaum

ಹುಟ್ಟುಹಬ್ಬದ ದಿನವೇ ಬೈಕ್​ ಅಪಘಾತದಲ್ಲಿ ಉಸಿರು ಚೆಲ್ಲಿದ ಯುವಕ

ಹುಟ್ಟುಹಬ್ಬದ ದಿನವೇ ರಸ್ತೆ ಅಪಘಾತದಲ್ಲಿ ಯುವಕ ಸಾವನ್ನಪ್ಪಿರುವ ಘಟನೆ ಹೆಜಮಾಡಿ ಟೋಲ್​ಗೇಟ್​ ಬಳಿ ನಡೆದಿದೆ.

ಮಲ್ಪೆ ಕೊಡವೂರು ನಿವಾಸಿ ಮಹೇಶ್ ಮೃತ ದುರ್ದೈವಿ.

ಮಹೇಶ್ ತಮ್ಮ ಹುಟ್ಟುಹಬ್ಬದ ದಿನ ಶುಭಕಾರ್ಯವೊಂದರಲ್ಲಿ ಭಾಗಿಯಾಗಿ ಮಂಗಳೂರಿನಿಂದ ಮಲ್ಪೆಗೆ ವಾಪಾಸ್​ ಆಗುತ್ತಿದ್ದರು. ಈ ವೇಳೆ ಹೆಜಮಾಡಿ ಟೋಲ್​ಗೇಟ್​ ಬಳಿ ಹೆದ್ದಾರಿ ಮಧ್ಯೆ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್​ಗೆ ಮಹೇಶ್​ ಬೈಕ್​ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ಮಹೇಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.