Belagavi News In Kannada | News Belgaum

“ಭಾರತದ ಭವಿಷ್ಯ ಗ್ರಾಮಗಳಲ್ಲಿ ಅಡಗಿದೆ”- ಮಹಾತ್ಮಾ ಗಾಂಧೀಜಿ

ಭಾರತ ದೇಶ ಬಹುತೇಕ ಗ್ರಾಮಗಳಿಂದ ಕೂಡಿದ್ದು ಕೃಷಿ ಪ್ರಧಾನ ರಾಷ್ಟ್ರವಾಗಿದೆ.ದೇಶದ ಅಭಿsÀವೃದ್ಧಿಯು ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಯನ್ನು ಒಳಗೊಂಡಿದೆ. ಗ್ರಾಮ ಸ್ವರಾಜ್ಯದಲ್ಲಿ ರಾಮರಾಜ್ಯದ ಕನಸು ಸಾಕಾರಗೊಳ್ಳುತ್ತಿದೆ. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಶ್ರಮಿಸುತ್ತಿದೆ.

ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ಜಲ ಜೀವನ ಮಿಷನ್ ಅಡಿ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ವಸತಿ ರಹಿತರಿಗೆ ಸೂರು ಕಲ್ಪಿಸಲು ಹಲವಾರು ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಗ್ರಾಮಗಳನ್ನು ಸ್ವಚ್ಛ ಸುಂದರ ಪರಿಸರವನ್ನಾಗಿಸಲು ಸ್ವಚ್ಛ ಭಾರತ ಮಿಷನ್‍ನಡಿ ಮನೆ ಮನೆಗೂ ಶೌಚಾಲಯ, ಸಮುದಾಯ ಶೌಚಾಲಯಗಳನ್ನು ಹಾಗೂ ತ್ಯಾಜ್ಯ ವಿಲೇವಾರಿಗಾಗಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಮತ್ತು ದ್ರವ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗುತ್ತ್ತಿದೆ. ಕೇಂದ್ರ ಹಣಕಾಸು ಆಯೋಗದ ಅನುದಾನದಲ್ಲಿ ಗ್ರಾಮೀಣ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಗ್ರಾಮೀಣ ಮಹಿಳೆಯರನ್ನು ಸಶಕ್ತಿಕರಣಗೊಳಿಸಲು ಸಂಜೀವಿನಿಯಡಿ ಆರ್ಥಿಕ ಉತ್ತೇಜನವನ್ನು ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯು 500 ಗ್ರಾಮ ಪಂಚಾಯತಿಗಳನ್ನು 14 ತಾಲೂಕಗಳನ್ನು ಒಳಗೊಂಡ ರಾಜ್ಯದ ದೊಡ್ಡ ಜಿಲ್ಲೆಯಾಗಿದ್ದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಜೀವನೊಪಾಯಕ್ಕಾಗಿ ವಾರ್ಷಿಕವಾಗಿ ಪ್ರತಿ ನೊಂದಾಯಿತ ಕುಟುಂಬಕ್ಕೆ 100 ದಿನಗಳ ಅಕುಶಲ ಕೂಲಿಯನ್ನು ನೀಡುವುದರ ಜೊತೆಗೆ ನೆಲ-ಜಲ-ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಜಲಶಕ್ತಿ ಅಭಿಯಾನದಡಿ ಹೊಸ ಕೆರೆಗಳ ನಿರ್ಮಾಣ, ಕ್ಷೇತ್ರ ಬದು, ಕೃಷಿಹೊಂಡ, ಬಚ್ಚಲು ಗುಂಡಿ, ಸಮಗ್ರ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಏತೆಚ್ಚವಾಗಿ ಹಮ್ಮಿಕೊಳ್ಳವುದರ ಜೊತೆಗೆ ಪರಿಸರ ಸಂರಕ್ಷಣೆಗಾಗಿ ಕೋಟಿ ವೃಕ್ಷ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

 

ರೈತರ ಅನುಕೂಲಕ್ಕಾಗಿ ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ ಮತ್ತು ಗ್ರಾಮ ಪಂಚಾಯತಿಯಿಂದ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಜನ-ಜಾನುವಾರು ಹಾಗೂ ಕೃಷಿ ಉತ್ಪನ್ನಗಳ ಸಾಗಾಟಕ್ಕಾಗಿ ಏತೆಚ್ಚವಾಗಿ ತೋಟಪಟ್ಟಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಮುಂದುವರೆದು ಸರಕಾರಿ ಶಾಲೆಗಳ ಸಮಗ್ರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಒತ್ತುನೀಡಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಆಟದ ಮೈದಾನ, ಕಂಪೌಂಡ, ಅಡುಗೆ-ಊಟದ ಕೋಣೆ, ಫೇವರ್ಸ ಅಳವಡಿಕೆ ಮಾಡಲಾಗುತ್ತಿದೆ.

ಸ್ವಾತಂತ್ರ್ಯದ 75ನೇ ಮಹೋತ್ಸವದ ಸವಿನೆನಪಿಗಾಗಿ ಅಮೃತಗ್ರಾಮ ಪಂಚಾಯತಿ ಯೋಜನೆಯನ್ನು ಜಾರಿಗೆಗೊಳಿಸಿದ್ದು ಬೆಳಗಾವಿ ಜಿಲ್ಲೆಯಲ್ಲಿ 65 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಸದರಿ ಗ್ರಾಮಗಳಲ್ಲಿ ಸೋಲಾರ ಬೀದಿ ದೀಪಗಳು, ಚರಂಡಿ, ರಸ್ತೆ, ಶುದ್ಧ ಕುಡಿಯುವ ನೀರಿನ ಪೂರೈಕೆ , ಡಿಜಿಟಲ್ ಗ್ರಂಥಾಲಯ, ಅಮೃತ ಉದ್ಯಾನವನದಂತಹÀ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಮಾದರಿ ಗ್ರಾಮ ಪಂಚಾಯತಗಳನ್ನಾಗಿ ಮಾಡಲಾಗುತ್ತಿದೆ.

ಮಹಾತ್ಮಾ ಗಾಂಧಿಜೀಯವರ ಗ್ರಾಮ ಸ್ವರಾಜ್ಯದ ಪರೀಕಲ್ಪನೆಯಂತೆ, ಸಂವಿದಾನದ 73ನೇ ತಿದ್ದುಪಡಿಯ ಆಶಯದಂತೆ ಗ್ರಾಮೀಣ ಪ್ರದೇಶದ ಸರ್ವತೋಮುಖ ಸುಸ್ಥಿರ ಅಭಿವೃದ್ಧಿಗಾಗಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಜನಪರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜನಪ್ರತಿನಿಧಿಗಳ ನೇತೃತ್ವದಲ್ಲಿ ಹಾಗೂ ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ತಳಮಟ್ಟದ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಅಭ್ಯುಧಯವಾಗುತ್ತಿರುವ ಸುಸಂಧರ್ಭದಲ್ಲಿ 3 ಹಂತದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಬೆಳಗಾವಿ ಜಿಲ್ಲೆಯ ಸಮಸ್ತ ಗ್ರಾಮೀಣ ಪ್ರದೇಶದ ಜನತೆಗೆ ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯತ ಬೆಳಗಾವಿ