ಎಪಿಎಂಸಿ ಪೊಲೀಸ್ ಠಾಣೆ ಎದುರು ಮುಸ್ಲಿಂ ಮುಖಂಡರ ಪ್ರತಿಭಟನೆ

ಬೆಳಗಾವಿ: ಆಜಂನಗರದ ಮುಖ್ಯ ರಸ್ತೆಯಲ್ಲಿರುವ ಸಣ್ಣ ಅಂಗಡಿಗಳನ್ನು ಬಂದ್ ಮಾಡಿರುವ ಎಪಿಎಂಸಿ ಪೊಲೀಸ್ ಸಿಬ್ಬಂದಿ ಕ್ರಮ ಖಂಡಿಸಿ ಮುಸ್ಲಿಂ ಮುಖಂಡರು ಎಪಿಎಂಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮುಸ್ಲಿಂ ಮುಖಂಡ ಅಕ್ಬರ ಬಾಗವಾನ್ ಮಾತನಾಡಿ, ನಾವು ಪ್ರತಿ ಸಂದರ್ಭದಲ್ಲಿಯೂ ಪೊಲೀಸರಿಗೆ ಸಹಕಾರ ನೀಡುತ್ತಾ ಬರಲಾಗುತ್ತಿದೆ. ಆದರೆ ಏಕಾಏಕಿ ಸಣ್ಣ ಅಂಗಡಿಗಳನ್ನು ಬಂದ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳ ಕ್ರಮ ಸರಿಯಿಲ್ಲ. ಶೀಘ್ರವೇ ಅಂಗಡಿ ಬಂದ ಮಾಡಿದ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೀಗ ರಂಜಾನ ಹಬ್ಬ ಇರುವ ಹಿನ್ನಲೆಯಲ್ಲಿ ಕೆಲ ಪೊಲೀಸ ಸಿಬ್ಬಂದಿ ಬಂದು ನಮಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.ಇದನ್ನು ಪ್ರಶ್ನಿಸಲು ಹೋದ ಮುಸ್ಲಿಂ ಸಮಾಜ ಮುಖಂಡರ ಮಾತಿಗೂ ಗೌರವ ನೀಡುತ್ತಿಲ್ಲ. ಶೀಘ್ರವೇ ಆಜಂನಗರದ ಮುಖ್ಯ ರಸ್ತೆಯಲ್ಲಿರುವ ಸಣ್ಣ ಅಂಗಡಿಕಾರರಿಗೆ ಪೊಲೀಸ್ ಸಿಬ್ಬಂದಿಗಳಿಂದ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊನೆಗೆ ಪೊಲೀಸ್ ಹಿರಿಯ ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಅನೇಕ ಸಂಖ್ಯೆಯಲ್ಲಿ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು