Belagavi News In Kannada | News Belgaum

ಬಿಯರ್‌ ಕುಡಿದು ಪಾರ್ಟಿ ಮಾಡಿದ 10 ತರಗತಿ ವಿದ್ಯಾರ್ಥಿಗಳು

ಹೈದರಾಬಾದ್: ಪೋಷಕರು ತಮ್ಮ ಮಕ್ಕಳು ಹಾಸ್ಟೆಲ್‌ನಲ್ಲಿ ಓದಿದರೆ ಚೆನ್ನಾಗಿ ಓದುತ್ತಾರೆ ಎಂಬ ದೃಷ್ಟಿಯಿಂದ ಹಾಸ್ಟಲ್‌ನಲ್ಲಿಟ್ಟು ಓದಿಸುತ್ತಾರೆ. ಆದರೆ, ಇಲ್ಲೊಂದು ಪ್ರಕರಣವೇ ಬೇರೆ ಹಾಸ್ಟೆಲ್‌ನಲ್ಲಿ ಓದುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಬಿಯರ್‌ ಬಾಟಲ್ ತಂದು ಹಾಸ್ಟೆಲ್‌ನಲ್ಲಿ ಕುಡಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

 

ತೆಲಂಗಾಣದ ಮಂಚಿರಾಲ ಜಿಲ್ಲೆಯಲ್ಲಿರುವ ದಂಡೇಪಲ್ಲಿಯ ಹಿಂದುಳಿದ ವರ್ಗಗಳ (ಬಿಸಿಎಮ್‌) ಬಾಲಕರ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿಯೇ ಬಿಯರ್‌ ಕುಡಿಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

 

ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ನಲ್ಲಿ ಕೋಣೆಯಲ್ಲಿ ಪ್ರತಿಯೊಬ್ಬರೂ ಒಂದೊಂದು ಬಿಯರ್‌ ಬಾಟಲ್‌ಗಳನ್ನು ಕುಡಿಯುತ್ತಿರುವ ದೃಶ್ಯ ಕಂಡು ಬಂದಿದೆ. ಇನ್ನೇನು ಬೇಸಿಗೆ ರಜೆಗಳು ಪ್ರಾರಂಭವಾಗಲಿದೆ ಎಂದು ಕಳೆದ ಏಪ್ರಿಲ್‌ 17ರಂದು ಬೀಳ್ಕೊಡುಗೆ ಪಾರ್ಟಿಯನ್ನು ಆಚರಿಸಿಕೊಳ್ಳುತ್ತಿದ್ದ ಹಾಗೂ ಸಂಭ್ರಮದಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಪ್ರತಿಯೊಬ್ಬರಿಗೂ ಬಿಯರ್‌ ಬಾಟಲ್‌ಗಳನ್ನು ಖರೀದಿಸಿ ಹಾಸ್ಟೆಲ್‌ನಲ್ಲಿ ಕುಡಿದು ಪಾರ್ಟಿ ಮಾಡಿದ್ದಾರೆ.

 

ಇನ್ನು ಹಾಸ್ಟೆಲ್‌ ವಾರ್ಡನ್‌ನ ಅನುಮತಿ ಪಡೆದುಕೊಂಡೇ ಈ ಹಾಸ್ಟೆಲ್‌ ಹುಡುಗರು ಪಾರ್ಟಿ ಆಯೋಜಿಸಿದ್ದರು. ಸ್ಥಳೀಯ ಗ್ರಾಮದ ಸ್ನೇಹಿತರಿಂದ ಸಹಾಯ ಪಡೆದುಕೊಂಡು ಹೊರಗಿನಿಂದ ಬಿಯರ್‌ ಬಾಟಲಿಗಳನ್ನು ಖರೀದಿಸಿದ್ದರು.

 

ಹಾಸ್ಟೆಲ್‌ನಲ್ಲಿ ಮೆಸ್‌ನಲ್ಲಿ ತಯಾರಿಸಿದ್ದ ಚಿಕನ್‌ ಬಿರಿಯಾನಿಯನ್ನು ಈ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಕೋಣೆಗೆ ತೆಗೆದುಕೊಂಡು ಹೋಗಿದ್ದರು. ಹೊರಗಿನಿಂದ ತಂದಿದ್ದ ಬಿಯರ್‌ ಕುಡಿಯುತ್ತಾ ಬಿರಿಯಾನಿ ತಿನ್ನುತ್ತಿದ್ದ ಸಂಭ್ರಮದಲ್ಲಿ ದ್ದ ದ್ಯಾರ್ಥಿಗಳು ಸೆಲ್ಫಿ ಪೋಟೊಗಳನ್ನು ತೆಗೆದುಕೊಂಡು ಸ್ನೇಹಿತರೊಂದಿಗೆ ಹಚ್ಚಿಕೊಂಡಿದ್ದರು.

 

ಬಳಿಕ ಅವು ವೈರಲ್ ಆಗಿವೆ.

ತನಿಖೆಗೆ ಆದೇಶ: ವಿದ್ಯಾರ್ಥಿಗಳು ಹಂಚಿಕೊಂಡಿದ್ದ ಬಿಯರ್‌ ಕುಡಿಯುತ್ತಿದ್ದ ದೃಶ್ಯಗಳನ್ನು ಜಿಲ್ಲಾಧಿಕಾರಿಗೆ ಹಾಗೂ ಸ್ಥಳೀಯ ಅಧಿಕಾರಿಗಳ ಅಧಿಕೃತ ಟ್ವಿಟರ್‌ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಿಗೆ ಟ್ಯಾಗ್‌ ಮಾಡಲಾಗಿತ್ತು. ಈ ಪೋಸ್ಟ್‌ಗಳನ್ನು ಗಮನಿಸಿದ ಅಧಿಕಾರಿಗಳು ಈ ಘಟನೆ ಕುರಿತು ಸಂಪೂರ್ಣ ಹಾಸ್ಟೆಲ್‌ ವಾರ್ಡನ್‌ ಸೇರಿದಂತೆ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲು ಸೂಕ್ತ ತನಿಖೆಗೆ ಆದೇಶ ಹೊರಡಿಸಿದ್ದಾರೆ.