ಮನೆ ಕಟ್ಟುವವರ ಜೇಬಿಗೆ ಕತ್ತರಿ

ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಕಬ್ಬಿಣ್ಣ, ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.
ಮೊಬೈಲ್ನಲ್ಲಿ ಮಾತನಾಡುತ್ತಾ ಮ್ಯಾನ್ಹೋಲ್ಗೆ ಬಿದ್ದ ಮಹಿಳೆ: ವಿಡಿಯೋ ವೈರಲ್
ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿರುವ ಕಾರಣ ದೇಶಿಯ ಸಿಮೆಂಟ್ ಕಂಪನಿಗಳು ಸಿಮೆಂಟ್ ಬೆಲೆಯನ್ನುಹೆಚ್ಚಿಸಿವೆ.
ಕಬ್ಬಿಣ್ಣ ದರ ಕೆಜಿಗೆ 90 ರೂ. ದಾಟಿದ್ದು, ಸಿಮೆಂಟ್ ದರ 50 ಕೆಜಿ ಪ್ಯಾಕ್ ಗೆ ಬರೋಬ್ಬರಿ 430 ರೂ. ತಲುಪಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಹಣಕಾಸು ಸೇವಾ ಸಂಸ್ಥೆ ಕ್ರಿಸಿಲ್ ಹೇಳಿದೆ.
ಸಿಮೆಂಟ್ ದರದಲ್ಲಿ ಸಾಗಣೆ ವೆಚ್ಚವೇ ಶೇ. 50 ರಷ್ಟು ಇರುವ ಕಾರಣ ಡೀಸೆಲ್ ದರ ಏರಿಕೆ ಸಹಜವಾಗಿಯೇ ಪರಿಣಾಮ ಬೀರಲಿದೆ. ಹೀಗಾಗಿ ಕಂಪನಿಗಳು ಪ್ರತಿ ಚೀಲದ ಬೆಲೆಯಲ್ಲಿ ಹೆಚ್ಚಳ ಮಾಡಿದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ಹೇಳಿದೆ. ಈಗಾಗಲೇ ಪ್ರತಿ ಚೀಲ ಸಿಮೆಂಟ್ ಬೆಲೆ430 ರೂ.ವರೆಗೆ ತಲುಪಿದ್ದು, ಶೀಘ್ರವೇ 450 ರೂ. ಗಡಿ ದಾಟುವ ಸಾಧ್ಯತೆ ಇದೆ.