Belagavi News In Kannada | News Belgaum

ಅವಶ್ಯಕತೆ ಎದುರಾದರೆ ಗಡಿ ದಾಟಲು ಸಿದ್ಧ: ಉಗ್ರರಿಗೆ ಸಿಂಗ್ ಎಚ್ಚರಿಕೆ

ದೆಹಲಿ: ಗಡಿಯಲ್ಲಿ ಭಯೋತ್ಪಾದಕರ ನುಸುಳ್ಳುಕ್ಕೆ ಸೂಕ್ಷ್ಮ ಕಾವಲು ಇದೆ. ಅವರು ಕಿಡಿಗೇಡಿತನ ತೊರಿದರೆ ಅವಶ್ಯಕತೆಯಿದ್ದಲ್ಲಿ ಗಡಿ ದಾಟಲು ಭಾರತ ಹಿಂಜರಿಯುವುದಿಲ್ ಉಗ್ರರಿಗೆ  ರಕ್ಷಣಾ ಸಚಿವ  ರಾಜನಾಥ್‌ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಭಾರತದ ಮೇಲೆ ಹೊರಗಿನಿಂದ ದಾಳಿ ನಡೆಸುವ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಲು ನಾವು ಹಿಂಜರಿಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಗುವಾಹಟಿಯಲ್ಲಿ 1971ರ ಬಾಂಗ್ಲಾ ವಿಮೋಚನಾ ಯುದ್ಧದ ಯೋಧರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ನೆಲದಿಂದ ಭಯೋತ್ಪಾದನೆಯನ್ನು ತೊಡೆದುಹಾಕುತ್ತದೆ ಎಂಬ ಸಂದೇಶವನ್ನು ನೀಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಲು ಶ್ರಮಿಸುತ್ತಿದ್ದು, ಈಹೋರಾಟದಲ್ಲಿ ದೇಶವು ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನೆರೆಯ ರಾಷ್ಟ್ರ ಭಾರತಕ್ಕೆ ಭಯೋತ್ಪಾದನೆಯನ್ನು ಕಳುಹಿಸಲು ಬಯಸಿದರೆ, ನಾವು ಗಡಿ ದಾಟಲು ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. “ಬಾಂಗ್ಲಾದೇಶವು ತನ್ನ ನೆರೆಹೊರೆಯವರಿಗೆ ಮಿತ್ರರಾಷ್ಟ್ರವಾಗಿದೆ. ಅಲ್ಲಿಂದ ಯಾವುದೇ ಒಳನುಗ್ಗುವಿಕೆ ಇಲ್ಲ. ಅಲ್ಲಿನ ಗಡಿಭಾಗ ಶಾಂತಿಯುತವಾಗಿದೆ. ಎಂದಿದ್ದಾರೆ.

ಸಮಸ್ಯೆ ಇರುವುದು ಪಶ್ಚಿಮದ ದೇಶಗಳಲ್ಲಿ. ಗಡಿಯಲ್ಲಿ ನಮ್ಮ ಸೈನಿಕರು ಯಾವ ರೀತಿಯ ಕೆಲಸ ಮಾಡುತ್ತಿದ್ದಾರೆಂದು ನಾನು ಬಹಿರಂಗವಾಗಿ ಹೇಳಲಾರೆ. ಆದರೆ ಭಾರತಕ್ಕೆ ಯಾವುದೇ ಹಾನಿಯಾಗಲು ನಾವು ಬಿಡುವುದಿಲ್ಲ,’’ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದರು. ವಿಶ್ವ ಭೂಪಟದಲ್ಲಿ ಭಾರತದ ಚಹರೆ ಈಗಾಗಲೇ ಬದಲಾಗಿದ್ದು, ಭವಿಷ್ಯದಲ್ಲಿ ಯಾವುದೇ ಶಕ್ತಿ ದೇಶವನ್ನು ತಡೆಯಲು ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ರದ್ದುಗೊಳಿಸಲಾಗುವುದು ಎಂದರು. ಮಣಿಪುರ ಮತ್ತು ನಾಗಾಲ್ಯಾಂಡ್‌ನ 15 ಪೊಲೀಸ್ ಠಾಣೆಗಳಲ್ಲಿ ಈ ಕಾನೂನನ್ನು ಈಗಾಗಲೇ ರದ್ದುಗೊಳಿಸಲಾಗಿದೆ ಎಂದರು.