Belagavi News In Kannada | News Belgaum

ಸಾವಿರಾರು ಯುವಕರಿಗೆ ರುದ್ರಾಕ್ಷಿ ದೀಕ್ಷೆ ನೀಡುವ ಸಂಕಲ್ಪ

ಆಮಂತ್ರಣ ಪತ್ರಕೆ ಬಿಡುಗಡೆ ಮಾಡಿ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ದೇವರು ಮಾಹಿತಿ

ಆಮಂತ್ರಣ ಪತ್ರಕೆ ಬಿಡುಗಡೆ ಮಾಡಿ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ದೇವರು ಮಾಹಿತಿ

ಅಥಣಿ: ಶ್ರೀ ಶಂಕರ ಸ್ವಾಮೀಜಿ ಅವರ ಅಮೃತ  ಮಹೋತ್ಸವ ಹಾಗೂ ನಿರಂಜನ ಚರಪಟ್ಟಾಧಿಕಾರ ಸಮಾರಂಭ  ಅಂಗವಾಗಿ ಮೇ 1 ರಿಂದ 4 ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ನಾಡಿನ 300 ಕ್ಕೂ ಹೆಚ್ಚು ಪೂಜ್ಯರು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಯುವ ಜನೋತ್ಸವದ ಅಂಗವಾಗಿ 5 ಸಾವಿರ ಕ್ಕೂ ಹೆಚ್ಚು ಯುವಕರಿಗೆ ರುದ್ರಾಕ್ಷಿ ದೀಕ್ಷೆ ನೀಡಿ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತ ದೇವರು ಹೇಳಿದರು.
ಸಮೀಪದ ಸತ್ತಿ ಗ್ರಾಮದ ಶ್ರೀ ಬಾಳಕೃಷ್ಣ ಮಹಾರಾಜ ಸಭಾಭವನದಲ್ಲಿ ಶುಕ್ರವಾರ ಆಮಂತ್ರಣ ಪತ್ರಿಕೆ ಬಿಡುಗಡೆಮಾಡಿ ಅವರು ಮಾತನಾಡಿ ಮೇ 1 ರಂದು ಮುಂಜಾನೆ  10 ಗಂಟೆಗೆ ಸಾವಯವ ಕೃಷಿ ಸಮ್ಮೇಳನ ಜರುಗಲಿದೆ. ಅದೇ ದಿನ ಸಂಜೆ 6 ಗಂಟೆಗೆ ಶ್ರೀ ಶಂಕರ ಮಹಾಸ್ವಾಮಿಗಳವರ ಅಮೃತ ಮಹೋತ್ವವ ಕಾರ್ಯಕ್ರಮ ಜರುಗಲಿದೆ. ದಿ. 2 ರಂದು ಸೋಮವಾರ ಮುಂ 10 ಗಂಟೆಗೆ ಮಹಿಳಾ ಸಮಾವೇಶ ಜರುಗಲಿದೆ. ಅದೇದಿನ ಸಂಜೆ 6 ಗಂಟೆಗೆ ಯುವ ಜನೋತ್ಸವ ಹಾಗೂ ರುದ್ರಾಕ್ಷಿ ದೀಕ್ಷಾ ಕಾರ್ಯಕ್ರಮ ಜರುಗಲಿದೆ.  ದಿ. 3 ರಂದು ಮಂಗಳವಾರ ಮುಂ 10 ಗಂಟೆಗೆ ಶ್ರೀ ಮುರುಘೇಂದ್ರ ಸ್ವಾಮೀಜಿ ವಿದ್ಯಾವರ್ಧಕ ಸಂಸ್ಥೆಯ ಜರತ ಮಹೋತ್ಸವ ಹಾಗೂ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ. ಅಂದು ಸಂಜೆ 6 ಗಂಟೆಗೆ ಬಸವ ಜಯಂತಿ ಕಾರ್ಯಕ್ರಮ ಜರುಗಲಿದೆ.  ದಿ. 4 ರಂದು ಬುಧವಾರ ಮುಂ. 10 ಗಂಟೆಗೆ ಶೂನ್ಯಸಿಂಹಾಸನಾರೋಹಣ ಹಾಗೂ ಸಂಜೆ 6 ಗಂಟೆಗೆ ಚಿನ್ಮಾನುಗ್ರಹ ದೀಕ್ಷೆ ಹಾಗೂ ಷಟಸ್ಥಲ ಬ್ರಹ್ಮೋಪದೇಶ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಅವರು ಹೇಳಿದರು.
 ಈ ಸಂದರ್ಭದಲ್ಲಿ ಶ್ರೀ ಗುರು ದೇವರು, ಜಿ.ಪಂ. ಮಾಜಿ ಸದಸ್ಯ ಶ್ರೀಶೈಲ ನಾರಗೊಂಡ, ಶಿವರಾಯ ಯಲಡಗಿ, ತಮ್ಮಣ್ಣೆಪ್ಪ ತೇಲಿ, ಪರಪ್ಪ ರಾಚಪ್ಪನವರ, ಮಲ್ಲಪ್ಪ ಕಂಕಣವಾಡಿ, ಅಶೋಕ ಜಗದೇವ, ಮಲ್ಲಪ್ಪ ಬ್ಯಾಳಗೌಡರ, ಪ್ರಕಾಶ ಭೂಷಣ್ಣವರ, ಮಲ್ಲಪ್ಪ ಹಂಚಿನಾಳ, ಅನಂತಕುಮಾರ ಪಾಟೀಲ, ರಾವಸಾಬ ಮಟ್ಟೆಪ್ಪನವರ, ಬಸವರಾಜ ಜಕ್ಕಪ್ಪನವರ, ಶ್ರೀಶೈಲ ಜಗದೇವ, ಮಹಾದೇವಗೌಡ ಪಾಟೀಲ, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಹಣಮಂತ ಜಗದೇವ, ಶಿವಪುತ್ರ ಬಾಡಗಿ, ಕುಮಾರ ಖನಗೌಡರ, ರಾಮಗೌಡ ಪಾಟೀಲ, ಶಿವು ನಂದೇಶ್ವರ, ಅಲ್ಲಪ್ಪ ದಾನಸೂರ, ಮಹಾಂತೇಶ ಸಿಂಧೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಿಎಚ್‌ಡಿ ಪಡೆದು ಪ್ರಥಮ ಬಾರಿಗೆ ಸತ್ತಿ ಗ್ರಾಮಕ್ಕೆ ಆಗಮಿಸಿದ ಡಾ. ಮಹಾಂತ ದೇವರು ಇವರನ್ನ ಗ್ರಾಮಸ್ಥರು ಗೌರವಿಸಿ ಸತ್ಕರಿಸಿದರು.