ನಂದೇಶ್ವರ ಗ್ರಾಮದಲ್ಲಿ ಹನುಮಾನ ರಥೋತ್ಸವ

ಅಥಣಿ: ನಂದೇಶ್ವರ ಗ್ರಾಮದ ಶ್ರೀ ಹನುಮಾನ ದೇವರ ರಥೋತ್ಸವ ಹಾಗೂ ಶ್ರೀ ಬಸವೇಶ್ವರ ದೇವರ ಉಚಾಯಿ ಕಾರ್ಯಕ್ರಮ ದಿ. ೨೩ ರಂದು ಶನಿವಾರ ಜರುಗಲಿದೆ. ಅಂದು ಮುಂಜಾನೆ ಹನುಮಾನ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ನೈವೇದ್ಯ ಅರ್ಪಣೆ ಕಾರ್ಯಕ್ರಮ ಜರುಗಲಿದೆ.
ಸಂಜೆ ರಥೋತ್ಸವ ಕಾರ್ಯಕ್ರಮ ನಂತರ ರಾತ್ರಿ ೧೦.೩೦ ಗಂಟೆಗೆ ಸ್ಥಳೀಯ ಶ್ರೀ ಹನುಮಾನ ನಾಟ್ಯ ಸಂಘ ಇವರಿಂದ ‘ಸತಿ ಸಂಸಾರದ ಜ್ಯೋತಿ’ ಎಂಬ ನಾಟಕ ಪ್ರದರ್ಶನವಾಗಲಿದೆ ಎಂದು ಶ್ರೀ ಹನುಮಾನ ರಥೋತ್ಸವ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.