Belagavi News In Kannada | News Belgaum

ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಪ್ರಿನ್ಸಿಪಾಲ್ ರೋಮ್ಯಾನ್ಸ್ -ಗ್ರಾಮಸ್ಥರು ಆಕ್ರೋಶ

ಶಾಲೆಯ ಪ್ರಾಂಶುಪಾಲರು ಶಿಕ್ಷಕಿ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪರಿಣಾಮ ಪ್ರಾಂಶುಪಾಲರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.

ಛತ್ತೀಸ್‍ಗಢದಲ್ಲಿ ಸರ್ಕಾರಿ ಸಾಲೆಯಲ್ಲಿ ಪ್ರಾಂಶುಪಾಲ ತನ್ನ ಲೈಂಗಿಕ ಆಸೆಯನ್ನು ಈಡೆರಿಸಿಕೊಳ್ಳಲು ಶಾಲೆಯಲ್ಲಿದ ಇತರ ಶಿಕ್ಷಕಿಯರನ್ನು ಬಳಸಿಕೊಳ್ಳುತ್ತಿರುವುದು ಗ್ರಾಮಸ್ಥರಿಗೆ ತಿಳಿದುಬಂದಿದೆ. ಈ ಕುರಿತು ಸ್ಥಳಿಯರೆ ಪ್ರಾಂಶುಪಾಲ ರಾಸಲೀಲೆಯನ್ನು ಸೆರೆ ಹಿಡಿದಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಹರಿ ಬಿಟ್ಟಿದ್ದಾರೆ. ವಿಷಯ ತಿಳಿದ ಶಾಲೆಯ ಆಡಳಿತ ಪ್ರಾಂಶುಪಾಲನ ವಿರುದ್ಧ ಕ್ರಮ ತೆಗೆದುಕೊಂಡಿದ್ದು, ಶಾಲೆಯಿಂದ ಅಮಾನತು ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಶಾಲೆಯ ಪ್ರಾಂಶುಪಾಲರನ್ನು ಆಡಳಿತವು ಅಮಾನತುಗೊಳಿಸಿದೆ.

ನಡೆದಿದ್ದೇನು?
ಈ ಅಸಂಬಂಧ ಘಟನೆ ಛತ್ತೀಸ್‍ಗಢದ ಕಂಕೇರ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲನಿಗೆ ಮದುವೆಯಾಗಿದ್ದರೂ ಸಹ ಶಾಲೆಯಲಿ ಶಿಕ್ಷಕಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ. ತನ್ನ ಕಾಮಚೇಷ್ಟೆ ನಡೆಸಲು ಶಾಲೆಯ ಕೊಠಡಿಯನ್ನೆ ಬಳಸಿಕೊಳ್ಳುತ್ತಿದ್ದ. ಈ ಹಿನ್ನೆಲೆ ಪ್ರಾಂಶುಪಾಲನನ್ನು ನೇರವಾಗಿ ಹಿಡಿಯಬೇಕೆಂದು ಗ್ರಾಮದ ಜನರು ನಿರ್ಧರಿಸಿದ್ದಾರೆ.

ಈ ಹಿನ್ನೆಲೆ ಪ್ರಾಂಶುಪಾಲ ಶಿಕ್ಷಕಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ನಡೆಸುತ್ತಿದ್ದಾಗ ಅವರಿಗೆ ಗೊತ್ತಾಗದಂತೆ ಗ್ರಾಮಸ್ಥರು ವೀಡಿಯೋ ಮಾಡಿದ್ದಾರೆ. ನಂತರ ಈ ವೀಡಿಯೋವನ್ನು ಶಾಲೆಯ ಆಡಳಿತ ಮಂಡಳಿಗೆ ಕೊಟ್ಟಿದ್ದು, ಪ್ರಾಂಶುಪಾಲರನ್ನು ಅಮಾನತ್ತು ಮಾಡಿಸಿದ್ದಾರೆ.

ಪ್ರಾಂಶುಪಾಲ ಮತ್ತು ಶಿಕ್ಷಕಿ ನಡುವೆ ಕೊರೊನಾ ಸಮಯದಲ್ಲಿ ಅನೈತಿಕ ಸಂಬಂಧ ಬೆಳೆದಿತ್ತು. ಅವರ ಖಾಸಗಿ ವಿಚಾರಕ್ಕೆ ಶಾಲೆಯ ಆವರಣ ಬಳಸಿಕೊಳ್ಳುತ್ತಿರುವುದು ಸರಿಯಲ್ಲವೆಂದು ಎಂದು ದೂರಿನಲ್ಲಿ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು. ವೀಡಿಯೋ ರೆಕಾರ್ಡ್ ಮಾಡಿದ ಮೇಲೆ ಪ್ರಾಂಶುಪಾಲರಿಗೆ ಈ ವೀಡಿಯೋ ತೋರಿಸಿದಾಗ ರೆಕಾರ್ಡ್ ಮಾಡಿದವರಿಗೆ ಹಣದ ಆಮಿಷವನ್ನು ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.