11ನೇ ವಯಸ್ಸಲ್ಲೇ ಕಂಗನಾ ರಣಾವತ್ ಮೇಲೆ ದೌರ್ಜನ್ಯ: ಕರಾಳ ಸತ್ಯ ಬಿಚ್ಚಿಟ್ಟ ಬಿಟೌನ್ ಬೆಡಗಿ

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಲಾಕ್ ಅಪ್ ರಿಯಾಲಿಟಿ ಶೋ ನಾನಾ ಮುಖಗಳನ್ನು ತೆರೆದಿಡುತ್ತಿದೆ. ತಮ್ಮ ಮೇಲೆ ಆದ ದೌರ್ಜನ್ಯ, ತಮಗಾದ ಅನ್ಯಾಯ, ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳು ಹೀಗೆ ಒಂದೊಂದೇ ವಿಷಯಗಳು ಈ ಶೋನಿಂದಾಗಿ ಆಚೆ ಬರುತ್ತಿವೆ.
ಪೂನಂ ಪಾಂಡೆ, ಮನ್ವರ್ ಫರೂಕಿ ಸೇರಿದಂತೆ ಅನೇಕ ಕಲಾವಿದರು ತಮ್ಮ ಮೇಲೆ ಆದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಈಗ ಸ್ವತಃ ಕಂಗನಾ ರಣಾವತ್ ಅವರೇ ತಮ್ಮ 11ನೇ ವಯಸ್ಸಿನಲ್ಲಿ ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಇಂತಹ ಅನುಭವಗಳನ್ನು ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೆ, ದೌರ್ಜನ್ಯ ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ.
ನಿನ್ನೆ ನಡೆದ ಎಪಿಸೋಡ್ ನಲ್ಲಿ ಮನ್ವರ್ ಫರೂಕಿ ತಮ್ಮ ಮೇಲೆ ಚಿಕ್ಕ ವಯಸ್ಸಿನಲ್ಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದರು. ಆ ಹಿಂಸೆಯ ರೂಪವನ್ನು ಹೇಳಿಕೊಂಡರು. ಮೊದ ಮೊದಲು ಅದೇನು ಅಂತ ತಿಳಿಯುತ್ತಲೇ ಇರಲಿಲ್ಲ. ದೊಡ್ಡವನಾದ ಮೇಲೆ ಅದರ ಬಗ್ಗೆ ಅರಿವಾಯಿತು. ಸಿಡಿದೆದ್ದೆ ಸುಮ್ಮನಾದರು ಎಂದು ಹೇಳಿಕೊಂಡರು. ಈ ಸಮಯದಲ್ಲಿ ತಮ್ಮ ಮೇಲೂ ನಡೆದ ಲೈಂಗಿಕ ದೌರ್ಜನ್ಯದ ನರಕವನ್ನು ಬಿಚ್ಚಿಟ್ಟರು ಕಂಗನಾ
ಆಗ ಕಂಗನಾ ಅವರಿಗೆ 11ರ ವಯಸ್ಸು. ಅವರಿಗಿಂತ ಮೂರ್ನಾಲ್ಕು ವರ್ಷ ಜಾಸ್ತಿ ಇದ್ದ ಹುಡುಗನು ಕಂಗಾನ ಅವರ ಬಟ್ಟೆಬಿಚ್ಚಿಸುತ್ತಿದ್ದನಂತೆ. ಅವನು ಹಾಗೆ ಮಾಡುತ್ತಿದ್ದಾನೆ ಎಂದು ಆಗ ಅರಿಯದ ವಯಸ್ಸು. ಅವನಿಗೆ ಲೈಂಗಿಕ ಸಮಸ್ಯೆ ಇರಬೇಕು ಎಂದು ಆಮೇಲೆ ಅವರಿಗೆ ಗೊತ್ತಾಯಿತಂತೆ. ಈ ವಿಷಯವನ್ನು ಶೋನಲ್ಲಿ ಕಂಗನಾ ಹೇಳಿಕೊಂಡರು.