Belagavi News In Kannada | News Belgaum

ಪುತ್ರನಿಗೆ ಈಜು ಕಲಿಸಲು ಹೋದ ತಂದೆ – ಇಬ್ಬರು ನೀರು ಪಾಲು

ಬಾವಿಯಲ್ಲಿ ಪುತ್ರನಿಗೆ ಈಜು ಕಲಿಸಲು ಹೋದ ತಂದೆ ಹಾಗೂ ಮಗ ನೀರು ಪಾಲಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ತಾಲೂಕಿನ ಬಗದೂರಿ ಗ್ರಾಮದಲ್ಲಿ ನಡೆದಿದೆ.

42 ವರ್ಷದ ತಂದೆ ಸೂರ್ಯಕಾಂತ್ ಚಂದ್ರಾಶಾ ಹಾಗೂ 16 ವರ್ಷದ ಮಗ ಅಭಿಷೇಕ್ ದುರಂತ ಸಾವನ್ನಪ್ಪಿದ್ದಾರೆ. ಬಾವಿಯಲ್ಲಿ ಅಭಿಷೇಕ್ ನಿಗೆ ಈಜು ಕಲಿಸಲು ಹೋಗಿದ್ದರು. ಈ ವೇಳೆ ಸೂರ್ಯಕಾಂತ್ ಮೊದಲು ಮಗ ಅಭಿಷೇಕ್‍ನನ್ನು ನೀರಿಗೆ ಇಳಿಸಿದ್ದು, ಆತ ಬಾವಿಯ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಈ ಹಿನ್ನೆಲೆ ಸೂರ್ಯಕಾಂತ್, ಅಭಿಷೇಕ್‍ನನ್ನು ರಕ್ಷಣೆ ಮಾಡಲು ಮುಂದಾಗಿದ್ದಾನೆ.

ಅಭಿಷೇಕ್ ರಕ್ಷಣೆಗೆ ಮುಂದಾದಾಗ ಸೂರ್ಯಕಾಂತ್ ಸಹ ಕೆಸರಿನಲ್ಲಿ ಸಿಲಕು ಮೇಲೆ ಬರಲಾಗದೆ ಇಬ್ಬರು ದುರಂತವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುಡಬಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.