Belagavi News In Kannada | News Belgaum

1 ಕೋಟಿ ರೂಪಾಯಿ ನಗದು ಸುಲಿಗೆ: ಅಂತರ್ ರಾಜ್ಯ ಹೆದ್ದಾರಿ ದರೋಡೆಕೋರರ ಬಂಧನ

ಒಂದು ಕೋಟಿ ರೂಪಾಯಿ ನಗದು ದರೋಡೆ ಮಾಡಿದ್ದ ಅಂತರ್ ರಾಜ್ಯ ಹೆದ್ದಾರಿ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮಾರ್ಚ್​11ರಂದು ಎನ್ ಹೆಚ್ -48 ಸರ್ವಿಸ್ ರಸ್ತೆ ಬಳಿ ಕಾರು ಅಡ್ಡಗಟ್ಟಿ ನಾಲ್ವರ ಮೇಲೆ ಹಲ್ಲೆ ನಡೆಸಿ 1ಕೋಟಿ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು.

ಕಳೆದ ಒಂದೂವರೆ ತಿಂಗಳಿನಿಂದಲೂ ಕಾರ್ಯಾಚರಣೆ ನಡೆಸಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು 10 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳಿಂದ ಒಂಬತ್ತು ಲಕ್ಷ ಹಣ ಹಾಗೂ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.