Belagavi News In Kannada | News Belgaum

ಪ್ರಕಟಣೆಗಳು

ಅಮೃತಗ್ರಾಮ ಪಂಚಾಯತಿ ಯೋಜನೆಯಡಿ 65 ಗ್ರಾ.ಪಂ. ಆಯ್ಕೆ: ಸಿಇಓ 

ಬೆಳಗಾವಿ,ಏ.25: ಸ್ವಾತಂತ್ರ್ಯದ 75ನೇ ಮಹೋತ್ಸವದ ಸವಿನೆನಪಿಗಾಗಿ ಅಮೃತಗ್ರಾಮ ಪಂಚಾಯತಿ ಯೋಜನೆಯನ್ನು ಜಾರಿಗೆಗೊಳಿಸಿದ್ದು ಬೆಳಗಾವಿ ಜಿಲ್ಲೆಯಲ್ಲಿ 65 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಸದರಿ ಗ್ರಾಮಗಳಲ್ಲಿ ಸೋಲಾರ ಬೀದಿ ದೀಪಗಳು, ಚರಂಡಿ, ರಸ್ತೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಡಿಜಿಟಲ್ ಗ್ರಂಥಾಲಯ, ಅಮೃತ ಉದ್ಯಾನವನದಂತಹÀ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಮಾದರಿ ಗ್ರಾಮ ಪಂಚಾಯತಗಳನ್ನಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ಹೇಳಿದ್ದಾರೆ.
ಭಾರತ ದೇಶ ಬಹುತೇಕ ಗ್ರಾಮಗಳಿಂದ ಕೂಡಿದ್ದು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ದೇಶದ ಅಭಿsÀವೃದ್ಧಿಯು ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಯನ್ನು ಒಳಗೊಂಡಿದೆ. ಗ್ರಾಮ ಸ್ವರಾಜ್ಯದಲ್ಲಿ ರಾಮರಾಜ್ಯದ ಕನಸು ಸಾಕಾರಗೊಳ್ಳುತ್ತಿದೆ. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ಜಲ ಜೀವನ ಮಿಷನ್ ಅಡಿ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ವಸತಿ ರಹಿತರಿಗೆ ಸೂರು ಕಲ್ಪಿಸಲು ಹಲವಾರು ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಗ್ರಾಮಗಳನ್ನು ಸ್ವಚ್ಛ ಸುಂದರ ಪರಿಸರವನ್ನಾಗಿಸಲು ಸ್ವಚ್ಛ ಭಾರತ ಮಿಷನ್‍ನಡಿ ಮನೆ ಮನೆಗೂ ಶೌಚಾಲಯ, ಸಮುದಾಯ ಶೌಚಾಲಯಗಳನ್ನು ಹಾಗೂ ತ್ಯಾಜ್ಯ ವಿಲೇವಾರಿಗಾಗಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಮತ್ತು ದ್ರವ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗುತ್ತ್ತಿದೆ. ಕೇಂದ್ರ ಹಣಕಾಸು ಆಯೋಗದ ಅನುದಾನದಲ್ಲಿ ಗ್ರಾಮೀಣ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಗ್ರಾಮೀಣ ಮಹಿಳೆಯರನ್ನು ಸಶಕ್ತಿಕರಣಗೊಳಿಸಲು ಸಂಜೀವಿನಿಯಡಿ ಆರ್ಥಿಕ ಉತ್ತೇಜನವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯು 500 ಗ್ರಾಮ ಪಂಚಾಯತಿಗಳನ್ನು 14 ತಾಲೂಕಗಳನ್ನು ಒಳಗೊಂಡ ರಾಜ್ಯದ ದೊಡ್ಡ ಜಿಲ್ಲೆಯಾಗಿದ್ದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಜೀವನೊಪಾಯಕ್ಕಾಗಿ ವಾರ್ಷಿಕವಾಗಿ ಪ್ರತಿ ನೊಂದಾಯಿತ ಕುಟುಂಬಕ್ಕೆ 100 ದಿನಗಳ ಅಕುಶಲ ಕೂಲಿಯನ್ನು ನೀಡುವುದರ ಜೊತೆಗೆ ನೆಲ-ಜಲ-ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಜಲಶಕ್ತಿ ಅಭಿಯಾನದಡಿ ಹೊಸ ಕೆರೆಗಳ ನಿರ್ಮಾಣ, ಕ್ಷೇತ್ರ ಬದು, ಕೃಷಿಹೊಂಡ, ಬಚ್ಚಲು ಗುಂಡಿ, ಸಮಗ್ರ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಏತೆಚ್ಚವಾಗಿ ಹಮ್ಮಿಕೊಳ್ಳವುದರ ಜೊತೆಗೆ ಪರಿಸರ ಸಂರಕ್ಷಣೆಗಾಗಿ ಕೋಟಿ ವೃಕ್ಷ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರೈತರ ಅನುಕೂಲಕ್ಕಾಗಿ ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ ಮತ್ತು ಗ್ರಾಮ ಪಂಚಾಯತಿಯಿಂದ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಜನ-ಜಾನುವಾರು ಹಾಗೂ ಕೃಷಿ ಉತ್ಪನ್ನಗಳ ಸಾಗಾಟಕ್ಕಾಗಿ ಏತೆಚ್ಚವಾಗಿ ತೋಟಪಟ್ಟಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಮುಂದುವರೆದು ಸರಕಾರಿ ಶಾಲೆಗಳ ಸಮಗ್ರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಒತ್ತುನೀಡಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಆಟದ ಮೈದಾನ, ಕಂಪೌಂಡ, ಅಡುಗೆ-ಊಟದ ಕೋಣೆ, ಫೇವರ್ಸ ಅಳವಡಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯದ 75ನೇ ಮಹೋತ್ಸವದ ಸವಿನೆನಪಿಗಾಗಿ ಅಮೃತಗ್ರಾಮ ಪಂಚಾಯತಿ ಯೋಜನೆಯನ್ನು ಜಾರಿಗೆಗೊಳಿಸಿದ್ದು ಬೆಳಗಾವಿ ಜಿಲ್ಲೆಯಲ್ಲಿ 65 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಸದರಿ ಗ್ರಾಮಗಳಲ್ಲಿ ಸೋಲಾರ ಬೀದಿ ದೀಪಗಳು, ಚರಂಡಿ, ರಸ್ತೆ, ಶುದ್ಧ ಕುಡಿಯುವ ನೀರಿನ ಪೂರೈಕೆ , ಡಿಜಿಟಲ್ ಗ್ರಂಥಾಲಯ, ಅಮೃತ ಉದ್ಯಾನವನದಂತಹÀ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಮಾದರಿ ಗ್ರಾಮ ಪಂಚಾಯತಗಳನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಹಾತ್ಮಾ ಗಾಂಧಿಜೀಯವರ ಗ್ರಾಮ ಸ್ವರಾಜ್ಯದ ಪರೀಕಲ್ಪನೆಯಂತೆ, ಸಂವಿದಾನದ 73ನೇ ತಿದ್ದುಪಡಿಯ ಆಶಯದಂತೆ ಗ್ರಾಮೀಣ ಪ್ರದೇಶದ ಸರ್ವತೋಮುಖ ಸುಸ್ಥಿರ ಅಭಿವೃದ್ಧಿಗಾಗಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಜನಪರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜನಪ್ರತಿನಿಧಿಗಳ ನೇತೃತ್ವದಲ್ಲಿ ಹಾಗೂ ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಕಸಾಪ ಪರೀಕ್ಷೆ ಫಲಿತಾಂಶ ಪ್ರಕಟ

ಬೆಳಗಾವಿ,ಏ.25: ಕನ್ನಡ ಸಾಹಿತ್ಯ ಪರಿಷತ್ತು 2021-2022 ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ, ಕಾವಾ, ಜಾಣ, ಮತ್ತು ರತ್ನ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಫಲಿತಾಂಶ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಫಲಕ ಹಾಗೂ ವೆಬ್‍ಸೈಟ್ ತಾಣ ತಿತಿತಿ,ಞಚಿsಚಿಠಿಚಿ.iಟಿ ನಲ್ಲಿಯೂ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಶೀಘ್ರದಲ್ಲಿಯೇ ಎಲ್ಲಾ ಅಭ್ಯರ್ಥಿಗಳಿಗೆ ಕಳುಹಿಸಿಕೊಡಲಾಗುವುದು,
ಮರು ಮೌಲ್ಯಮಾಪನ ಹಾಗೂ ಮರು ಎಣ ಕೆಗೆ ಅಂಕಪಟ್ಟಿಗಳನ್ನು ಕುಳಹಿಸಿದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಅರ್ಜಿ ಸಲ್ಲಿಸಬೇಕು, ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ದೂರವಾಣ ,26623584 ಇವರನ್ನು ಸಂಪರ್ಕಿಸಬಹದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.////

 

ಶ್ರೀ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ: ಏ.25 ರಿಂದ ಪುನರಾರಂಭ

ಬೆಳಗಾವಿ,ಏ.25 ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಾಗೂ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿಗಳ ಕಚೇರಿ ವತಿಯಿಂದ ನಗರದ ಶ್ರೀನಗರದಲ್ಲಿ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯವರು ನಡೆಸುತ್ತಿರುವ ಶ್ರೀ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೆಮ ಕೇಂದ್ರವನ್ನು ಕೋವಿಡ್-19 ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿರ್ದೇಶಕರ ಆದೇಶದಂತೆ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯು ಕಡಿಮೆ ಆಗುತ್ತಿರುವುದರಿಂದ ಏಪ್ರಿಲ್ 25ರಿಂದ ಕೇಂದ್ರ ಪುನರ್ ಆರಂಭಿಸಲಾಗಿದೆ.
ಎಲ್ಲ ಹಿರಿಯ ನಾಗರಿಕರು ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಬೆಳಗಾವಿ,ಏ.25: ಬೆಳಗಾವಿ ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ದತಿ ನಿμÉೀಧ ಕುರಿತು ನಡೆದ “ಬೀದಿ ನಾಟಕ ಜಾಗೃತಿ ಕಾರ್ಯಕ್ರಮ” ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಉದ್ಘಾಟಿಸಿದರು.
ಬೆಳಗಾವಿ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ್ ಸಿಂಧಿಹಟ್ಟಿ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಸಹಾಯಕ ಕಾರ್ಮಿಕ ಆಯುಕ್ತರಾದ ಎಂ.ಬಿ.ಅನ್ಸಾರಿ, ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ, ಕಾರ್ಮಿಕ ಅಧಿಕಾರಿ ತರುನ್ನುಮ ಬಂಗಾಲಿ, ಹಿರಿಯ ಕಾರ್ಮಿಕ ನಿರೀಕ್ಷಕರು ಅಡಿವೇಪ್ಪ ಗಡಾದ, ಹಿರಿಯ ಕಾರ್ಮಿಕ ನಿರೀಕ್ಷಕರು ಸಂಜೀವ ಭೋಸಲೆ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರಾದ ರಮೇಶ ಕೆಸರೂರ ಉಪಸ್ಥಿತರಿದ್ದರು. ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಜ್ಯೋತಿ ಎಂ. ಕಾಂತೆ ಕಾರ್ಯಕ್ರಮ ನಿರೂಪಿಸಿದರು.////
*

2025ರೊಳಗೆ ಜಿಲ್ಲೆ ಮಲೇರಿಯಾ ಮುಕ್ತ ಮಾಡಲು ಯತ್ನ: ಡಾ. ಎಮ್.ಎಸ್.ಪಲ್ಲೇದ

 

ಬೆಳಗಾವಿ, ಏ.25: ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಇಲ್ಲದಿರುವದರಿಂದ ಂPI-0 ಸಾಧನೆಯಾಗಿದ್ದು ಇದೇ ದಿವಸವಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮಲೇರಿಯಾ ನಿರ್ಮೂಲನೆ ಚೌಕಟ್ಟಿನಲ್ಲಿ ಂPI-1 ತಲುಪಿದ್ದಕ್ಕಾಗಿ ಪ್ರಶಂಸಾ ಪತ್ರ ನೀಡಿದೆ. ಇದೇ ನಿಟ್ಟಿನಲ್ಲಿ 2025 ರವರಗೆ ಪ್ರಕರಣಗಳು ಆಗದಂತೆ ಮನೆ ಭೇಟಿಮಾಡಿ ಶೀಘ್ರ ಪತ್ತೆ ಮಾಡುವುದು ಅತೀ ಮುಖ್ಯವೆಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ. ಎಮ್.ಎಸ್.ಪಲ್ಲೇದ ಹೇಳಿದರು.

ವಿಶ್ವ ಮಲೇರಿಯಾ ದಿನದ ಅಂಗವಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಹಾಗೂ ಕೆ ಎಲ್ ಇ ಚಾರಿಟೇಬಲ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶಹಾಪುರನಾಥ ಪೈ ವೃತ್ತದಿಂದ ಯಳ್ಳೂರ ಕೆ ಎಲ್ ಇ ಚಾರಿಟೇಬಲ್ ಆಸ್ಪತ್ರೆಯವರೆಗೆ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಲೇರಿಯಾವನ್ನು ನಿಯಂತ್ರಿಸುವ ಮತ್ತು ಅಂತಿಮವಾಗಿ ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನದ ಬಗ್ಗೆ ಜಾಗೃತಿ ಮೂಡಿಸಲು ಎಪ್ರೀಲ್ 25 ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಲೇರಿಯಾವು ಮಾರಣಾಂತಿಕ ಖಾಯಿಲೆಯಾಗಿದ್ದು ಅದು ಪ್ಲಾಸ್ಮೋಡಿಯಮ್ ಪರಾವಲಂಬಿಯಿಂದ ಉಂಟಾಗುತ್ತದೆ. ಮಲೇರಿಯಾ ತಡೆಗಟ್ಟುವಿಕೆ & ಕಾಳಜಿಯ ಮಾಲಿಕತ್ವವನ್ನು ತೆಗೆದುಕೊಳ್ಳಲು ಸಮುದಾಯಗಳಿಗೆ ಅಧಿಕಾರ ನೀಡುವ ಉದ್ದೇಶದೊಂದಿಗೆ ಇದು ತಳಮಟ್ಟದ ಅಭಿಯಾನವಾಗಿದೆ ಎಂದು ತಿಳಿಸಿದರು.
ಮಲೇರಿಯಾ ರೋಗವನ್ನು ತಡೆಗಟ್ಟಲು & ಕಡಿಮೆ ಮಾಡಲು ಮುಖ್ಯಮಾರ್ಗವೆಂದರೆ ಸೊಳ್ಳೆಗಳ ನಿಯಂತ್ರಣ, ಇದು ಕೀಟನಾಶಕ ಲೇಪನ ಸೊಳ್ಳೆಪರದೆಗಳು ಮತ್ತು ಕೀಟನಾಶಕ ಸಿಂಪಡಣೆ, ಹಾಗೂ ಲಾರ್ವಾಹಾರಿ ಮೀನುಗಳನ್ನು ನಿಂತ ನೀರಿನ ತಾಣಗಳಲ್ಲಿ ಬಿಡುವುದರ ಮುಖಾಂತರ ಲಾರ್ವಾಗಳನ್ನು ನಾಶ ಮಾಡುವುದು ಎಂದು ಕೆ ಎಲ್ ಇ ಚಾರಿಟೇಬಲ್ ಆಸ್ಪತ್ರೆಯ ರ್ದೇಶಕರಾದ ಡಾ.ಎಸ್.ಸಿ.ಧಾರವಾಡ ಹೇಳಿದರು.
ಜಾಗೃತಿ ಜಾಥಾದಲ್ಲಿ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.////

 

ವಿಶ್ವ ಮಲೇರಿಯಾ ಜಾಗೃತಿ ದಿನಾಚರಣೆ

 

ಬೆಳಗಾವಿ, ಏ.25: ವಿಶ್ವ ಮಲೇರಿಯಾ ದಿನಾಚರಣೆಯ ಅಂಗವಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಖಾನಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಗೊಳ್ಳಲಾಯಿತು. “ನವೀನ ವಿಧಾನಗಳನ್ನು ಬಳಸೋಣ-ಮಲೇರಿಯಾ ಕಡಿಮೆ ಮಾಡಿ ಜೀವ ಉಳಿಸೋಣ” ಮತ್ತು ಮಲೇರಿಯಾ ನಿರ್ಮೂಲನೆ ನನ್ನಿಂದಲೇ ಪ್ರಾರಂಭ ಎಂದು ಹಲವಾರು ವಾಕ್ಯಗಳನ್ನು ಜನರಿಗೆ ಮನಮುಟ್ಟವ ಹಾಗೇ ಘೋಷಣೆ ವಾಕ್ಯಗಳನ್ನು ಘೋಸಿಸುತ್ತಾ ಖಾನಾಪೂರ ಮುಖ್ಯ ರಸ್ತೆಗಳಲ್ಲಿ & ಪ್ರಮುಖ ಬೀದಿಗಳಲ್ಲಿ ಘೋಷವಾಕ್ಯವನ್ನು ಮುಳಿಗಿಸಿ, ಡೊಳ್ಳುಕುಣ ತಾ, ಸಕಲವಾಧ್ಯಗಳೊಂದಿಗೆ ಜನಪದಕಲಾ ತಂಡದವರೊಂದಿಗೆ ಜಿಲ್ಲಾ ಮಟ್ಟದ ವಿಶ್ವಮಲೇರಿಯಾ ದಿನಾಚರಣೆಯನ್ನು ಖಾನಾಪೂರ ತಾಲೂಕಾ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕಾರ್ಯಕ್ರಮದ ಅಧ್ಯಕ್ಷ್ಯತೆ ವಹಿಸಿ ಮಾತನಾಡಿ ಮಲೇರಿಯಾವನ್ನು ಆರೋಗ್ಯಕ್ಷೇಮ ಕೇಂದ್ರದಲ್ಲಿ ಪತ್ತೆಹಚ್ಚುವ ಕಾರ್ಯ ನೆಡಯಬೇಕು. ನಮ್ಮ ಜಿಲ್ಲೆಯಲ್ಲಿ ಪ್ರಸ್ತುತವಾಗಿ ಮಲೇರಿಯಾ ಪ್ರಕರಣಗಳು ಕಡಿಮೆಯಾಗಲು ನಮ್ಮ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಪ್ರಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಮಲೇರಿಯಾ ನಿರ್ಮೂಲನೆ ಮಾಡುವ ಕಾರ್ಯವನ್ನು ಹೆಚ್ಚಾಗಿ ಇನ್ನು ಎಲ್ಲರೂ ಪ್ರತಿಯೊಬ್ಬರು ಮಲೇರಿಯಾ ನಿವಾರಣಾ ಗುರಿ ಸಾಧನೆ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗೋಣ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ವಿಶ್ವ ಮಲೇರಿಯಾ ದಿನಾಚರಣೆಯ ನಿಮಿತ್ಯ ಮಾತನಾಡಿ ಗ್ರಾಮಮಟ್ಟದಲ್ಲಿ ಮಲೇರಿಯಾ ಪತ್ತೆಹಚ್ಚುವ ಕೆಲಸ ಮಾಡೋಣ, ಜ್ಜರ, ತಲೆನೋವು, ಚಳಿಜ್ಜರ, ಆಯಾಸ,ಸುಸ್ತು ಕಂಡುಬಂದ ಸಂದರ್ಭದಲ್ಲಿ ನಿರ್ಲಕ್ಷ ಮಾಡದೆ ವೈದ್ಯರ ಸಲಹೆ ಮೇರೆಗೆ ರಕ್ತಲೇಪನಗಳನ್ನು ತೆಗೆದು ಪರೀಕ್ಷೆ ಗೊಳಿಸುವ ಕಾರ್ಯಮಾಡಬೇಕು. ಇವರೆಗೆ ನಮ್ಮ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಂಡು ಬಂದಿರುವದಿಲ್ಲ, ಹೊರ ರಾಜ್ಯಗಳಿಂದ ಬಂದ ವಲಸೆ ಬಂದವರಲ್ಲಿ ಮಾತ್ರ ಮಲೇರಿಯಾ ಪ್ರಕರಣಗಳು ಕಂಡು ಬಂದಿದೆ. ಆದರೆ ಅವರಿಗೆ ಮಲೇರಿಯಾ ನಿರ್ಮೂಲನೆ ಹಂತದಲ್ಲಿರುವ ಕಾರಣ ತಪಾಸಣೆ ಮಾಡಿ ಸೂಕ್ತವಾದ ಆರೋಗ್ಯ ಚಿಕಿತ್ಸೆಯನ್ನು ನೀಡುವ ಕಾರ್ಯ ಸಂಪೂರ್ಣವಾಗಿ ನೆಡೆಯುತ್ತಿದೆ ಎಂದು ಹೇಳಿದರು.
ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ ಗ್ರಾಮಮಟ್ಟದವರಿಗೂ ಆರೋಗ್ಯದ ಬಗ್ಗೆ ಕಾಳಜಿವಹಿಸೋಣ ಲಾರ್ವಾಹಾರಿ ಮೀನುಮರಿ ಉತ್ಪಾದನಾ ತೊಟ್ಟಿ ನಿರ್ಮಿಸಿ ಬೆಳಸುವ ಕಾರ್ಯವನ್ನು ಕೈಗೊಳ್ಳಲು ಪಂಚಾಯತಿಯವರಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡಾ.ಎಮ್,ಎಸ್,ಪಲ್ಲೇದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ಪ್ರಭಾರ ಜಿಲ್ಲಾ ಆರೋಗ್ಯ&ಕು,ಕ ಅಧಿಕಾರಿಗಳಾದ ಡಾ.ಈಶ್ವರಪ್ಪ.ಗಡಾದ, ಹಾಗೂ ಡಾ.ಎಮ್.ವ್ಹಿ.ಕಿವಡಸನ್ನವರ ಕುಟುಂಬಕಲ್ಯಾಣ ಅಧಿಕಾರಿಗಳು, ಡಾ.ಡುಮ್ಮಗೋಳ ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳು, ಡಾ.ಅನಿಲ.ಕೋರಬು ಕ್ಷಯರೋಗ ನಿಯಂತ್ರಣಾಧಿಕಾರಿಗಳು, ಡಾ.ಸಂಜು.ಎನ್,ನಾಂದ್ರೆ ತಾಲೂಕಾ ಆರೋಗ್ಯಾಧಿಕಾರಿಗಳು ಖಾನಾಪೂರ ಹಾಗೂ ಇತರೆ ಇಲಾಖಾ ಅಧಿಕಾರಿಗಳು, ಆರೋಗ್ಯಸಿಬ್ಬಂದಿಗಳು ಗಣ್ಯಮಾನ್ಯರು ಉಪಸ್ಥಿತರಿದ್ದು ವಿಶ್ವ ಮಲೆರಿಯಾ ದಿನಾಚರಣೆ ಯಶಸ್ವಿಗೊಳಿಸಿದರು.///