Belagavi News In Kannada | News Belgaum

ಪಾರ್ಟಿಗೆ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಬಾರ್ ಬೌನ್ಸರ್

ಸ್ನೇಹಿತರೊಂದಿಗೆ ಪಾರ್ಟಿಗೆ ಬಂದಿದ್ದ 30 ವರ್ಷದ ವ್ಯಕ್ತಿ ಮೇಲೆ ಬಾರ್ ಸಿಬ್ಬಂದಿ(ಬೌನ್ಸರ್) ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ನೋಯ್ಡಾದ ಗಾರ್ಡನ್ ಗ್ಯಾಲೇರಿಯಾ ಮಾಲ್‍ನಲ್ಲಿ ನಡೆದಿದೆ.

ಬಿಹಾರದ ಛಾಪ್ರಾ ಜಿಲ್ಲೆಯ ಹಸನ್‍ಪುರ ಗ್ರಾಮದ ಬ್ರಿಜೇಶ್ ರೈ ಎಂಬ ವ್ಯಕ್ತಿ ತನ್ನ ಸಹೋದ್ಯೋಗಿಗಳೊಂದಿಗೆ ಪಾರ್ಟಿ ಮಾಡಲು ಮಾಲ್‍ನಲ್ಲಿರುವ ಬಾರ್‌ಗೆ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಹೋಗಿದ್ದರು. ಈ ವೇಳೆ ಬೌನ್ಸರ್ ಹಾಗೂ ಪಾರ್ಟಿಗೆ ಬಂದಿದ್ದವರ ನಡುವೆ ಜಗಳವಾಗಿದೆ. ಗಲಾಟೆಯಲ್ಲಿ ಬ್ರಿಜೇಶ್ ರೈ ಗಂಭೀರವಾಗಿ ಗಾಯಗೊಂಡಿದ್ದರು. ಹಾಗಾಗಿ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಸದ್ಯ ಬಾರ್ ಸಿಬ್ಬಂದಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಆತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ರಣವಿಜಯ್ ಸಿಂಗ್ ಹೇಳಿದ್ದಾರೆ. ಮೇಲೆ ಹಲ್ಲೆ ಆರೋಪ – ಜಿಗ್ನೇಶ್