Belagavi News In Kannada | News Belgaum

ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೇರಳ ಮೂಲದ ಮೊಹಮ್ಮದ್‌ ರನನ್ ಬಂಧಿತ ಆರೋಪಿ. ಈತ ಡಾರ್ಕ್ ವೆಬ್ ಸೈಟ್​ನ ವಿಕ್ರೆಮ್ ವೆಬ್ ಮೂಲಕ ಡ್ರಗ್ಸ್ ಬುಕ್ ಮಾಡ್ತಿದ್ದ. ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ಡ್ರಗ್ಸ್ ತರಿಸುತ್ತಿದ್ದ. ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಹಾಗೂ ಪರಿಚಿತರಿಗೆ ಮಾರಾಟ ಮಾಡುತ್ತಿದ್ದ. ಒಂದು ಗ್ರಾಂ ಡ್ರಗ್ಸ್​ ಅನ್ನು 8 ರಿಂದ 10 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ.

ಬಂಧಿತನಿಂದ 6.5 ಲಕ್ಷ ಮೌಲ್ಯದ 5 ಗ್ರಾಮ್​ ಎಂಡಿಎಂಎ ಕ್ರಿಸ್ಟಲ್, 49 ಗ್ರಾಮ್ ತೂಕದ 90 ಎಕ್ಸಟಸಿ ಮಾತ್ರೆ ಹಾಗೂ 40 ಗ್ರಾಮ್​ ಚರಸ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.