Belagavi News In Kannada | News Belgaum

ಬೆಂಗಳೂರಿನಲ್ಲಿ ಹೃದಯಾಘಾತದಿಂದ ಎಸಿಪಿ ಸಾವು

ಹೃದಯಾಘಾತದಿಂದ ಯಲಹಂಕದ ಸಬ್​ಡಿವಿಷನ್ ಎಸಿಪಿ ಜಯರಾಮ್ ಮೃತಪಟ್ಟಿದ್ದಾರೆ.

1994ರಲ್ಲಿ ಸಬ್ ಇನ್ಸ್​ಪೆಕ್ಟರ್​ ಆಗಿ ಆಯ್ಕೆಯಾಗಿದ್ದ ಜಯರಾಮ್, ಬೆಂಗಳೂರು ಸೇರಿ ಹಲವೆಡೆ ಸೇವೆ ಸಲ್ಲಿಸಿದ್ದರು. ಆದರೆ, ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೋಲಾರದ ಸ್ವಗ್ರಾಮದಲ್ಲಿ ಎಸಿಪಿ ಜಯರಾಮ್ ಅಂತ್ಯಕ್ರಿಯೆ ನೆರವೇರಲಿದೆ.