Belagavi News In Kannada | News Belgaum

ಏ.27 ರಂದು ಔಷಧಿ ಸಸ್ಯಗಳ ವಲಯದಲ್ಲಿ ಪಾಲುದಾರರ ಚಟುವಟಿಕೆಗಳ ಪರಿಶೀಲಿಸಲನಾ ಸಲಹಾ ಕಾರ್ಯಗಾರ 

ಬೆಳಗಾವಿ, ಏ.26: ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಹಾಗೂ ಬೆಳಗಾವಿಯ ಶ್ರೀ. ಎಂ. ಬಿ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಸಹಯೋಗದಲ್ಲಿ ಬುಧವಾರ (ಏ.27) ಕೆಎಲ್ಇ, ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 9.30 ಗಂಟೆಗೆ ಕರ್ನಾಟಕದಲ್ಲಿ ಔಷಧಿ ಸಸ್ಯಗಳ ವಲಯದಲ್ಲಿ ಪಾಲುದಾರರ ಚಟುವಟಿಕೆಗಳ ಪರಿಶೀಲಿಸಲನೆ ಮತ್ತು ಸಂಯೋಜಿಸುವ ಕುರಿತು ಬೆಳಗಾವಿಯ 2ನೇ ವಿಭಾಗ ಮಟ್ಟದ ಸಲಹಾ ಕಾರ್ಯಾಗಾರ ನಡೆಯಲಿದೆ.
ಬೆಳಗಾವಿ ಕೆಎಲ್ಇ ಅಕಾಡೆಮಿಯ ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಕುಲಪತಿಗಳಾದ ಪ್ರೊ. ಡಾ. ವಿವೇಕ ಸೋಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿಗಳಾದ ಅನಿತಾ ಅರೇಕಲ, ಬೆಳಗಾವಿ ಅರಣ್ಯ ವೃತ್ತದ  ಮುಖ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಚವಾಣ್, ಬೆಳಗಾವಿಯ ಐಸಿಎಂಆರ್ – ಎನ್ಐಟಿಎಂ ಡಾ. ಸುಬರ್ಣ ರಾಯ್, ಕೆಎಲ್ಇ ಅಕಾಡೆಮಿಯ ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಕುಲಸಚಿವರಾದ ಡಾ. ವಿ. ಎ ಕೋತಿವಾಲೆ ಉಪಸ್ಥಿತರಿರುವರು ಎಂದು  ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ಸುದರ್ಶನ್ ಜಿ. ಎ ಹಾಗೂ ಬೆಳಗಾವಿಯ ಶ್ರೀ. ಎಂ. ಬಿ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುಹಾಸ್ ಕುಮಾರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///