Belagavi News In Kannada | News Belgaum

ಡಾ. ರಾಜಕುಮಾರ ಇವರ 93ನೇ ಜನ್ಮದಿನಾಚರಣೆ

ನಗರದ ಕ್ರಾಂತಿ ಮಹಿಳಾ ಮಂಡಳ ಹಾಗು ಉಮಾ ಸಂಗೀತ ಪ್ರತಿಷ್ಠಾನ ಹಿಂದವಾಡಿ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ, ಹಿಂದವಾಡಿಯ ಆದರ್ಶ ನಗರದ ಸಂಜೀವಿನಿ ಫೌಂಡೇಶನ್‍ದಲ್ಲಿ ನಟ ಸಾರ್ವಭೌಮ ದಿವಂಗತ ಡಾ. ರಾಜಕುಮಾರ ಇವರ 93ನೇ ಜನ್ಮದಿನಾಚರಣೆ ನಿಮಿತ್ಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯ ಅಥಿತಿಗಳಾಗಿ ದಿವಂಗತ ಡಾ. ರಾಜಕುಮಾರ ಇವರ ಮೊಮ್ಮಗಳಾದ ಶ್ರೀಮತಿ ಸರಸ್ವತಿ ನಟರಾಜ ಕೋಸಗಿಯವರು ಆಗಮಿಸಿದ್ದರು. ಇವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನನ್ನ ತಾತ ಒಬ್ಬ ಸಹೃದಯಿ ನಟರಾಗಿದ್ದು ಇಂದಿಗೂ ಅಪಾರ ಕಲಾರಸಿಕರನ್ನು ಅಭಿಮಾನಿಗಳನ್ನು ಹೊಂದಿದ್ದು, ಈದಿನ ಅವರ ಜನ್ಮ ದಿನಾಚರಣೆಯನ್ನು ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನ ಆಯೋಜಿಸಿದ ಈ ಸಂಗೀತ ಕಾಂiÀರ್Àುಕ್ರದಲ್ಲಿ ಸಂಜೀವಿನಿ ಫೌಂಡೇಶನ್‍ದಲ್ಲಿ ವೃಧ ತಾಯಂದಿರರ ಜೊತೆಗೆ ಆಚರಿಸುತ್ತಿರುವದು ತುಂಬ ಸಂತೋಷವೆನಿಸುತ್ತದೆ ಎಂದರು. ಅಲ್ಲದೆ ದಿವಂಗತ ಪುನೀತ್ ರಾಜಕುಮಾರರನ್ನು ನೆನೆಸಿಕೊಳ್ಳುತ್ತ ಅವರ ಜೊತೆಗಿನ ದಿನಗಳನ್ನು ಅವರ ಸಮಾಜ ಸೇವೆಯನ್ನು ನೆನಪಿಸಿಕೊಂಡರು.

ಡಾ. ಸುನಿತಾ ಪಾಟೀಲ ವಿಶೇಷ ಅಥಿತಿಗಳಾಗಿ ಆಗಮಿಸಿದ್ದರು. ಸಂಜೀವಿನಿ ಫೌಂಡೇಶನ್ ಫೌಂಡರ ಮೆಂಬರ ಆದ ಸವಿತಾ ದೇಗಿನಾಳ ತಮ್ಮ ಸಂಸ್ಥೆಯ ಧ್ಯೇಯೋದ್ದೇಶ, ನಡೆದು ಬಂದ ಹಾದಿಯನ್ನು ವಿವರಿಸುತ್ತಾ ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನವು ಸಂಗೀತ ಕಾಂiÀರ್iಕ್ರಮದೊಂದಿಗೆ ದಿವಂಗತ ಡಾ. ರಾಜಕುಮಾರ ಇವರ 93ನೇ ಜನ್ಮದಿನಾಚರಣೆಯನ್ನು ಅವರ ಮೊಮ್ಮಗಳ ಜೊತೆಗೆ ಆಚರಿಸುತ್ತಿರುವದು ನಮ್ಮ ಸಂಸ್ಥೆಗೆ ಸಂದ ಅಭೂತಪೂರ್ವ ಗೌರವವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜಕ್ಕೆ ವಿಶೇಷ ಸೇವೆಗೈದ ಸಿಲ್ಪಾ ಪುಂಡೆ, ಅಂಜನಾ ಕಿತ್ತೂರ, ಸವಿತಾ ದೇಗಿನಾಳ ಇವರನ್ನು ಸನ್ಮಾನಿಸಲಾಯಿತು. ನಂತರದಲ್ಲಿ ಡಾ ಸುನಿತಾ ಪಾಟೀಲ, ನೈನಾ ಗಿರಿಗೌಡರ. ಶ್ರೀನಿಧಿ ಪುಂಡೆ, ಶ್ರೀದೇವಿ ದೇಸಾಯಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಸ್ವಪ್ನಾ ಚೌಗಲೆ, ನಿವರ್iಲಾ ದರಗಶೆಟ್ಟಿ, ಲೀಲಾ ಶೇರಿ, ಶೋಭಾ ಶೇರಿ, ವೀನಾ ಗಡತನ್ನವರÀ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷರಾದ ಮಂಗಲ ಮಠದ ಎಲ್ಲರನ್ನು ಸ್ವಾಗತಿಸಿದರು. ಉಮಾ ಸಂಗೀತ ಪ್ರತಿಷ್ಠಾನ ಹಾಗು ಕ್ರಾಂತಿ ಮಹಿಳಾ ಮಂಡಳದ ಧ್ಯೇಯೋದ್ದೇಶಗಳ ಕಿರು ಪರಿಚಯವನ್ನು ಕ್ರಾಂತಿ ಮಹಿಳಾ ಮಂಡಳದÀ ಸೆÀಕ್ರೆಟರಿಯಾದ ರತ್ನಶ್ರೀ ಗುಡೇರ ಮಾಡಿಕೊಟ್ಟರು. ಅಥಿತಿಗಳ ಪರಿಚಯವನ್ನು ಮಂದಾಕಿನಿ ನೆರ್ಲೆಕರ, ಸುನಿತಾ ಗುಳ್ಳ, ರಾಜೇಶ್ವರಿ ಗುರವ ಮಾಡಿದರು. ಮಂಜುಳಾ ಚುನಮರಿ ವಂದನೆಗಳನ್ನು ಸಮರ್ಪಿಸಿದರು. ಕಾರ್ಯಕ್ರಮವನ್ನು ದೀಪ್ತಿ ಕಾಗವಾಡ ನಿರೂಪಿಸಿದರು.