Belagavi News In Kannada | News Belgaum

ಪ್ರೇಮ ವಿವಾಹ: ಚಿಕ್ಕಪ್ಪನ ಜೊತೆ ಸೇರಿ ಒಡಹುಟ್ಟಿದ ತಂಗಿಯನ್ನೇ ಕೊಲೆಗೈದ ಅಣ್ಣ

ಪ್ರೀತಿಸಿ ಮದುವೆಯಾಗಿದ್ದಕ್ಕಾಗಿ ಸಹೋದರನೊಬ್ಬ ತನ್ನ ಚಿಕ್ಕಪ್ಪನ ಜೊತೆ ಸೇರಿಕೊಂಡು ಒಡಹುಟ್ಟಿದ ತಂಗಿಯನ್ನೇ ಗುಂಡು ಹಾರಿಸಿ ಕೊಲೆಗೈದಿರವ ಘಟನೆ ಉತ್ತರ ಪ್ರದೇಶದ ಮೈನ್​​ಪುರಿಯಲ್ಲಿ ನಡೆದಿದೆ.

ಘಟನೆಯಲ್ಲಿ ಮಹಿಳೆಯ ಗಂಡ ಹಾಗೂ ತಾಯಿ ಸಹ ಗಾಯಗೊಂಡಿದ್ದಾರೆ. ಮೈನ್​​ಪುರಿಯ ಭರತ್ವಾಲ್ ನಿವಾಸಿ ಕೋಮಲ್ ಎಂಬ ಯುವತಿ ಕಳೆದ 6 ತಿಂಗಳ ಹಿಂದೆ ನೆರೆಮನೆಯಲ್ಲಿ ವಾಸವಾಗಿದ್ದ ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಪ್ರೇಮ ವಿವಾಹಕ್ಕೆ ಆಕೆಯ ಸಹೋದರ ಹಾಗೂ ಚಿಕ್ಕಪ್ಪ ವಿರೋಧ ವ್ಯಕ್ತಪಡಿಸಿದ್ದರು.