Belagavi News In Kannada | News Belgaum

ಶಿವಮೊಗ್ಗದಲ್ಲಿ ಮತ್ತೆ ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಸಂಚು: ಮೂವರು ಅರೆಸ್ಟ್​

ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿದ್ದ ಮೂವರು ದುಷ್ಕರ್ಮಿಗಳನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮೆಹಬೂಬ್ ನಗರದ ಸಲ್ಮಾನ್, ಅಬ್ಬಾಸ್, ಉಸ್ಮಾನ್ ಗನಿ ಬಂಧಿತ ಆರೋಪಿಗಳು. ದುಷ್ಕರ್ಮಿಗಳು ಗಾಂಜಾ ನಶೆಯಲ್ಲಿ ಮಾರಕಾಸ್ತ್ರ ಹಿಡಿದು ಭಜರಂಗದಳ ಕಾರ್ಯಕರ್ತನನ್ನು ಹಿಂಬಾಲಿಸಿದ್ದರು. ಭಜರಂಗದಳದ ಕಾರ್ಯಕರ್ತ ಸಿಗದಿದ್ದಾಗ ಆತನ ತಮ್ಮನಿಗೆ ಲಾಂಗು, ಭರ್ಜಿ, ಚಾಕು ತೋರಿಸಿ ಧಮ್ಕಿ‌ ಹಾಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ದೊಡ್ಡಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರ

ಮೂವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಈ ವೇಳೆ ಮೂವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಂಧಿತರ ಮೇಲೆ ಸಮಾಜದಲ್ಲಿ ಶಾಂತಿಕದಡುವ ಯತ್ನ, ಕೊಲೆಗೆ ಸಂಚು ಹಾಗೂ ಗಾಂಜಾ ಸೇವನೆ ಬಗ್ಗೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.