Belagavi News In Kannada | News Belgaum

ಹೊಸ ಐಷಾರಾಮಿ ಆಡಿ ಕಾರು ಖರೀದಿಸಿದ ಸರಿಗಮಪ ಹನುಮಂತ…ನೋಡಿ ಬೆಲೆ ಎಷ್ಟು

ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಪ್ರೆಕ್ಷಕರಿಗೆ ಮನರಂಜನೆ ನೀಡುವಲ್ಲಿ ಜೀಕನ್ನಡ ವಾಹಿನಿ ಸದಾ ಮುಂದಿದ್ದು ಸದಾ ಒಂದಲ್ಲ ಒಂದು ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಮೂಲಕ ಪ್ರೇಕ್ಷಕರ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಹೌದು ಕನ್ನಡ ಕಿರುತೆರೆ ಲೋಕದಲ್ಲಿ ಮನರಂಜನೆ ನೀಡುವ ವಾಹಿನಿಗಳಲ್ಲಿ ಜೀ ವಾಹಿನಿ ಮುಂದಿದ್ದು ಅದರಲ್ಲಿಯೂ ಅತಿಹೆಚ್ಚು ವೀಕ್ಷಕರನ್ನು ಗಳಿಸಿರುವ ಕಾರ್ಯಕ್ರಮಗಳಲ್ಲಿ ಪ್ರಮುಖವಾದದ್ದು ಸರಿಗಮಪ ಸಿಂಗಿಗ್ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮವನ್ನು ಕರ್ನಾಟಕದ ಪ್ರತಿ ಮನೆಯಲ್ಲೂ ಕೂಡ ಜನರು ಬಹಳ ಇಷ್ಟಪಟ್ಟು ನೋಡುತ್ತಾರೆ ಎಂಬುವುದು ಕೂಡ ಅಷ್ಟೆ ಸತ್ಯ. ಇನ್ನು ಸರಿಗಮಪ ಸಿಂಗಿಗ್ ಕಾರ್ಯಕ್ರಮದಲ್ಲಿ ಸಂಗೀತ ಲೋಕದ ನಾದಬ್ರಹ್ಮ ಹಂಸಲೇಖ ಅವರು ಅತಿಮುಖ್ಯವಾದ ಆಕರ್ಷಣೆಯಾಗಿದ್ದು ಇವರ ಜೊತೆಯಲ್ಲಿ ಗಾಯಕರಾದ ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ. ಸಂಗೀತ ಲೋಕದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಅದೆಷ್ಟೋ ಜನರಿಗೆ ಈ ಕಾರ್ಯಕ್ರಮ ಬಹಳ ಮುಖ್ಯವಾದ ವೇದಿಕೆ ಆಗಿದ್ದು ಸಾಕಷ್ಟು ಮಂದಿ ತಮ್ಮ ಬದುಕನ್ನು ಕೂಡ ಕಟ್ಟಿಕೊಂಡಿದ್ದಾರೆ.

ಈಗಾಗಲೇ ಸರಿಗಮಪ 16 ನೇ ಸೀಸನ್ ಮುಗಿಸಿ ಸರಿಗಮಪ ಚಾಂಪಿಯನ್ ಶಿಪ್ ಕೂಡ ಪ್ರಸಾರವಾಗಿದೆ. ಇನ್ನು ಈ 16 ಸೀಸನ್ ಗಳಲ್ಲಿಯೂ ಕೂಡ ಅದೆಷ್ಟೋ ಯುವಪ್ರತಿಭೆಗಳಿಗೆ ಹೊಸ ಕೆರಿಯರ್ ಕಂಡುಕೊಂಡಿದ್ದು ಕನಸು ಹೊತ್ತ ಹಲವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಿಂಗರ್ ಆಗುವ ಅವಕಾಶ ಸಿಕ್ಕಿದ್ದು ಹಾಗೆಯೇ ಸರಿಗಮಪ ಕಾರ್ಯಕ್ರಮದಿಂದ ಜನಪ್ರಿಯತೆ ಪಡೆದ ಸ್ಪರ್ಧಿಗಳಲ್ಲಿ ಒಬ್ಬರು ಸರಿಗಮಪ ಸೀಸನ್ 15ರ ಸ್ಪರ್ಧಿ ಹನುಮಂತಣ್ಣ ಎನ್ನಬಹುದು. ಒಂದು ಸಣ್ಣ ಹಳ್ಳಿಯಿಂದ ಬಂದು ಅದ್ಭುತವಾದ ಗಾಯನದಿಂದ ಕರ್ನಾಟಕದ ಜನತೆಯ ಮನಗೆದ್ದವರು ಹನುಮಂತಣ್ಣ ರವರು ಸರಿಗಮಪ ಕಾರ್ಯಕ್ರಮದಲ್ಲಿ ಮುಗ್ಧತೆಯಿಂದ ಜನಪ್ರಿಯತೆ ಪಡೆದುಕೊಂಡ ಸ್ಪರ್ಧಿಯಾಗಿದ್ದಾರೆ.

ಇನ್ನು ಕಿರುತೆರೆ ಲೋಕದ ನಂಬರ್ ವನ್ ನಿರೂಪಕಿ ಅನುಶ್ರೀ ನಡುವಿನ ಸಂಭಾಷಣೆಗಳು ವೀಕ್ಷಕರಿಗೆ ಬಹಳ ಮನರಂಜನೆ ನೀಡುತ್ತಿದ್ದು ಸರಿಗಮಪ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರಿಗೆ ಬಹಳ ಹತ್ತಿರವಾಗಿದ್ದಾರೆ ಆಂಕರ್ ಅನುಶ್ರೀ. ಹೌದು ಸಾಮಾಜಿಕ ಜಾಲತಾಣದಲ್ಲಿ ಹನುಮಂತ ಅವರು ಬಹಳ ಫೇಮಸ್ ಆಗಿದ್ದು ಇದೀಗ ಚಾಪಿಯನ್ ಶಿಪ್ ನಲ್ಲೂ ಕೂಡ ಭಾಗವಹಿಸಿದ್ದಾರೆ. ಇತ್ತೀಚೆಗೆ ಹನುಮಂತ ದುಬಾರಿಯಾದ ಆಡಿ ಕಾರ್ ನಲ್ಲಿ ಓಡಾಡುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದ ಜನ ಹನುಮಂತ ಐಷಾರಾಮಿ ಆಡಿ ಕಾರ್ ತಗೊಂಡಿದ್ದಾರ ಎಂದು ಕೇಳುತ್ತಿದ್ದಾರೆ. ಅಷ್ಟಕ್ಕೂ ಈ ಸುದ್ದಿ ಸತ್ಯವೇ?

ಹನುಮಂತ ಪಾಲ್ಗೊಂಡಿದ್ದ ಸರಿಗಮಪ ಸೀಸನ್ ಮುಗಿದು 2 ವರ್ಷ ಕಳೆದಿದ್ದರೂ ಕೂಡ ಹನುಮಂತನನ್ನು ಜನ ಮರೆತಿರಲಿಲ್ಲ.ಇನ್ನು ಅನುಶ್ರೀ ಜೊತೆ ಬೆಂಗಳೂರಿನಲ್ಲಿ ಜಾಲಿ ರೈಡ್ ಗೆ ಹೋಗಿ ಕಾಫಿ ಡೇ ನಲ್ಲಿ ಸಖತ್ ಎಂಜಾಯ್ ಮಾಡಿದ್ದ ಹನುಮಂತ ಆಡಿ ಕಾರ್ ನಲ್ಲಿ ಓಡಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಳಿ ಬಹಳಾನೇ ವೈರಲ್ ಆಗಿತ್ತು. ಆದರೆ ಅಸಲಿ ಸತ್ಯವೆಂದರೆ ಹನುಮಂತಣ್ಣ ಅವರು ಐಷಾರಾಮಿ ಆಡಿ ಕಾರ್ ಖರೀದಿಸಿಲ್ಲ ಒಂದು ಕಾರ್ಯಕ್ರಮದ ನಿಮಿತ್ತ ಆಡಿ ಕಾರ್ ನಲ್ಲಿ ಬಂದು ಇಳಿದಿದ್ದು ಹನುಮಂತನ ಬಳಿ ಯಾವುದೇ ಆಡಿ ಕಾರ್ ಇಲ್ಲ ಎಂಬುದು ಅಸಲಿ ಸತ್ಯ. ಆದರೆ ಮುಂದಿನ ದಿನಗಳಲ್ಲಿ ಆಡಿ ಕಾರ್ ಖರೀದಿ ಮಾಡುವಷ್ಟು ಎತ್ತರಕ್ಕೆ ಹನುಮಂತ ಬೆಳೆಯಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ನಿಮ್ಮ ಅನಿಸಿಕೆ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.