Belagavi News In Kannada | News Belgaum

ಮೆಗಾಸ್ಟಾರ್ ರೋಮ್ಯಾನ್ಸ್‌ಗೆ ನಾಚಿನೀರಾದ ಪೂಜಾ ಹೆಗ್ಡೆ: ವೀಡಿಯೋ ವೈರಲ್

ಟಾಲಿವುಡ್ ಸ್ಟಾರ್ ಚಿರಂಜೀವಿ ಮತ್ತು ರಾಮ್‌ಚರಣ್ ನಟನೆಯ `ಆಚಾರ್ಯ’ ಇದೇ ಏಪ್ರಿಲ್ 29ಕ್ಕೆ ತೆರೆಗೆ ಬರಲಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿ ಪೂಜಾ ಹೆಗ್ಡೆ ಫೋಟೋ ಕಿಕ್ಲಿಸಿಕೊಳ್ಳುವಾಗ ರೊಮ್ಯಾನ್ಸ್ ಮಾಡ್ತಿರೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

`ಆಚಾರ್ಯ’ ಚಿತ್ರ ತೆರೆಗೆ ಅಪ್ಪಳಿಸಲು ದಿನಗಣನೆ ಶುರುವಾಗಿದೆ. ಜೊತೆಗೆ ಚಿತ್ರತಂಡದ ಭರ್ಜರಿ ಪ್ರಮೋಷನ್ ಕೂಡ ಜೋರಗಿದೆ. ಇತ್ತೀಚೆಗೆ ನಡೆದ `ಆಚಾರ್ಯ’ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾಧ್ಯಮದ ಕ್ಯಾಮೆರಾ ಕಣ್ಣಿಗೆ ರಾಮ್‌ಚರಣ್, ಚಿರಂಜೀವಿ, ಪೂಜಾ ಹೆಗ್ಡೆ ಫೋಟೋ ಕ್ಲೀಕ್ ಮಾಡಿಸಿಕೊಳ್ತಿದ್ದರು. ನಂತರ ವೇದಿಕೆಯಿಂದ ಹೋಗುವಾಗ ಚಿರಂಜೀವಿ ಅವರು ಗಾಳಿಪಟದ ದಾರದ ರೀತಿಯಲ್ಲಿ ಸೀರೆ ಎಳೆಯುವಂತೆ ಕಾಣಿಸಿದೆ.  ನಟಿ ಪೂಜಾ ಮತ್ತೆ ನಗು ನಗುತ್ತಾ ಬರುವಾಗ ಮಗ ರಾಮ್‌ಚರಣ್‌ಗೆ ಹೋಗು ಅಂತಾ ಹೇಳಿರೋ ರೀತಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಹೀಗೆ ಸಹನಟಿ ಜೊತೆ ಮೆಗಾಸ್ಟಾರ್‌ ಚಿರಂಜೀವಿ ಮಾಡ್ತಿರೋ ವಿಡಿಯೋ ಬಾರೀ ವೈರಲ್ ಆಗಿದೆ.

ಈ ವಿಡಿಯೋಸ್ ರೀ-ಟ್ವೀಟ್ ಮಾಡಿ, ಸ್ವೀಟೇಷ್ಟ್ ಎವರ್ ಜೋಯಿವರ್ ಅಂತಾ ಟ್ವಿಟ್ ಮಾಡಿದ್ದಾರೆ. ಬೊಟ್ಟಬೊಮ್ಮ ಮತ್ತು ಮೆಗಾಸ್ಟಾರ್ ಆಫ್‌ಸ್ಕ್ರೀನ್‌ಗೆ ಪ್ರೇಂಡ್‌ಶಿಪ್ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ

ಇನ್ನು ಚಿತ್ರದ ಪೋಸ್ಟರ್ ಲುಕ್ ಮತ್ತು ಟ್ರೇಲರ್‌ನಿಂದ ಸಖತ್ ಸೌಂಡ್ ಮಾಡಿರೋ `ಆಚಾರ್ಯ’ ಸಿನಿಮಾ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರಕ್ಕಾಗಿ ಕಾಯ್ತಿದ್ದಾರೆ.