Belagavi News In Kannada | News Belgaum

ಸ್ಥಳದಲ್ಲೇ ಮೂವರ ಸಾವು

ಬೆಳಗಾವಿ: ಎರಡು ಭೀಕರ ಅಪಘಾತಗಳಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಈ ಎರಡು ಅಪಘಾತಗಳು ಸಂಭವಿಸಿವೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಬೈಕ್​ ಹಾಗೂ ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪುಂಡಲೀಕ ಜಟಗುಂಡಿ (28) ಹಾಗೂ ಶಿವಾನಂದ ಗಲಗಲಿ (30) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ರಾಯಭಾಗದ ಮೊರಬ ಗ್ರಾಮದ ಬಳಿ ಸವಾರನ ನಿಯಂತ್ರಣ ತಪ್ಪಿ ಬೈಕ್​ ವಿದ್ಯುತ್ ಕಂಬಕ್ಕ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಮಾರುತಿ ಕದಮ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈ ಎರಡು ಅಪಘಾತಗಳ ಸಂಬಂಧ ರಾಯಭಾಗ ಹಾಗೂ ಹಾರೂಗೇರಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.