Belagavi News In Kannada | News Belgaum

ಉದ್ಯಮಭಾಗ 110 ಕೆವ್ಹಿ ಉಪಕೇಂದ್ರ: ಏ.30 ರಂದು ವಿದ್ಯುತ್ ಸ್ಥಗಿತ

ಉದ್ಯಮಭಾಗ 110 ಕೆವ್ಹಿ ಉಪಕೇಂದ್ರ: ಏ.30 ರಂದು ವಿದ್ಯುತ್ ಸ್ಥಗಿತ

 

ಬೆಳಗಾವಿ,ಏ.28  ಬೆಳಗಾವಿ 220 ಕೆವ್ಹಿ ಸ್ವೀಕರಣಾ ಕೇಂದ್ರದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಬೆಳಗಾವಿ ನಗರದ ಕೆಲವು ಪ್ರದೇಶಗಳಲ್ಲಿ ಶನಿವಾರ(ಏಪ್ರಿಲ್ 30) ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು:

110 ಕೆ.ವ್ಹಿ ಉದ್ಯಮಭಾಗ ಉಪಕೇಂದ್ರ ವಿದ್ಯುತ್ ವಿತರಣಾಕೇಂದ್ರದ ಮೇಲೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಿಲದೆ. 1.ಎಫ್-1 ಚೆಂಬರ್ ಆಫ್ ಕಾಮರ್ಸ:- ಖಾನಾಪೂರ ರಸ್ತೆ, ಉದ್ಯಮಬಾಗ, ಇಂಡಸ್ಟ್ರೀಯಲ್ ಎರಿಯಾ, 2.ಎಫ್-4 ಗುರುಪ್ರಸಾದ ಕಾಲೋನಿ: ರಾಣಿ ಚನ್ನಮ್ಮಾ ನಗರ, 3ನೇ ಗೇಟ್, ವಸಂತ ವಿಹಾರ ನಗರ, ಸುಭಾಸ್‍ಚಂದ್ರ ಕಾಲೋನಿ, ಉತ್ಸವ ಹೊಟೇಲ್, 3.ಎಫ್-5 ಡಚ್ ಇಂಡಸ್ಟ್ರೀಯಲ್: ಇಂಡಸ್ಟ್ರೀಯಲ್ ಎರಿಯಾ, 4.ಎಫ್-6 ಬೇಮಕೋ ಇಂಡಸ್ಟ್ರೀಯಲ್: ಇಂಡಸ್ಟ್ರೀಯಲ್ ಎರಿಯಾ, 5.ಎಫ್-7 ಅಶೋಕ ಐರನ್ ಇಂಡಸ್ಟ್ರೀಯಲ್: ಇಂಡಸ್ಟ್ರೀಯಲ್ ಎರಿಯಾ, 6.ಎಫ್-10 ಅರುಣ ಇಂಜಿನೀರಿಂಗ್ : ಇಂಡಸ್ಟ್ರೀಯಲ್ ಎರಿಯಾ, 7.ಎಫ್-12 ಎ.ಕೆ.ಪಿ :- ಇಂಡಸ್ಟ್ರೀಯಲ್ ಎರಿಯಾ, 8.ಎಫ್-13 ಗೆಲೆಕ್ಸಿ : ಇಂಡಸ್ಟ್ರೀಯಲ್ ಎರಿಯಾ, 9.ಎಫ್-14 ಜೆ.ಆಯ್.ಟಿ :- ಜೆ.ಆಯ್.ಟಿ. ದೇವಂದ್ರ ನಗರ, ಮಾಹಾವೀರ ನಗರ, ಖಾನಾಪೂರ ರಸ್ತೆ, ಉದ್ಯಮಬಾಗ, 10.ಎಫ್-15 ಶಾಂತಿ ಐರನ್:- ಇಂಡಸ್ಟ್ರೀಯಲ್ ಎರಿಯಾ, 11.ಎಫ್-16 ಜೈತನ ಮಾಳ: ಸಮೇದ ನಗರ ಜ್ಞಾನಪ್ರಮೋದ ಶಾಲೆ ಹತ್ತಿರ, 12.ಎಫ್-17 ಭವಾನಿ ನಗರ:- ಗುರುಪ್ರಸಾದ ಕಾಲೋನಿ, ಮಂಡೋಳಿ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರ, ವಿಶ್ವಕರ್ಮ ಕಾಲೋನಿ, ಸ್ವಾಮಿನಾಥ ಕಾಲೋನಿ, ನಿತ್ಯನಂದ ಕಾಲೋನಿ, ಡಿಪ್ಹೆನ್ಸ್ ಕಾಲೋನಿ, ವಾಟವೆ ಕಾಲೋನಿ, ಜೈತನ ಮಾಳ ಏರಿಯಾ ಇಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಏಪ್ರಿಲ್ 30 ರಂದು (ಶನಿವಾರ) ವಿದ್ಯುತ್ ನಿಲುಗಡೆ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಳಗಾವಿ ನಗರ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಉದ್ಯಮಶೀಲತಾಭಿವೃದ್ಧಿ ತರಬೇತಿ: ಮೇ ತಿಂಗಳಲ್ಲಿ

 

ಬೆಳಗಾವಿ,ಏ.28  : ಕೌಶಲ್ಯಾಭಿವೃದ್ಧಿ ಉದ್ಯಮಶೀ¯ತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿಕೇಂದ್ರ (ಸಿಡಾಕ್) ಇವರು ಸ್ವಂತ ಉದ್ಯೋಗ ಕೈಗೊಳ್ಳುವವರಿಗಾಗಿ 2022ರ ಮೇ ತಿಂಗಳಲ್ಲಿ ಜಿಲ್ಲೆಯ ಕಿತ್ತೂರಿನಲ್ಲಿ ಹತ್ತು ದಿನಗಳ ಕಾಲ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸ್ವಂತ ಉದ್ಯಮ ಸ್ಥಾಪನೆಗಾಗಿ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು/ಪ್ರೋತ್ಸಾಹ, ಮುಂದೆ ಕೈಗೊಳ್ಳಲಾಗುವ ಉದ್ಯಮಶೀಲತಾಭಿವೃದ್ಧಿ ತರಬೇತಿ ಇತ್ಯಾದಿ ವಿಷಯಗಳ ಕುರಿತು ಮಾಹಿತಿಯನ್ನು ನೀಡಲಾಗುವುದು.
ಆಸಕ್ತಿ ಇರುವ ಪರಿಶಿಷ್ಟ ಜಾತಿಯ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಭಾಗವಹಿಸುವವರು ವರ್ಷಗಳ ವಯಸ್ಸಿನವರಾಗಿರಬೇಕು ಹಾಗೂ ಓದಲು/ಬರೆಯಲು ಬರುತ್ತಿರಬೇಕು.
ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಮತ್ತು ಆಧಾರ ಕಾರ್ಡ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.././/

 

ಉದ್ಯಮಭಾಗ 110 ಕೆವ್ಹಿ ಉಪಕೇಂದ್ರ: ಏ.30 ರಂದು ವಿದ್ಯುತ್ ಸ್ಥಗಿತ

 

ಬೆಳಗಾವಿ,ಏ.28  ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವ್ಹಿ ಉಚಗಾಂವ ಉಪ ಕೇಂದ್ರ ಮತ್ತು 110 ಕೆವ್ಹಿ ಉದ್ಯಮಭಾಗ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಈ ಕೇಂದ್ರ ವ್ಯಾಪ್ತಿಯಲ್ಲಿ ಎಪ್ರಿಲ್ 29ರಂದು ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

110 ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ ವಿತರಣೆಯಾಗುವ ಬಿಜಗರ್ಣಿ, ಬೋಕಮೂರ, ಕವಳೇವಾಡಿ, ಬೆಳವಟ್ಟಿ, ಬಾಕನೂರ, ಬೆಳಗುಂದಿ, ಸೋನೋಲಿ, ಎಳೆಬೈಲ, ರಾಕಸಕೊಪ್ಪ, ಕುದ್ರೇಮನಿ, ಕಲ್ಲೇಹೋಳ, ಬೆಳಗುಂದಿ ಇಂಡಸ್ಟ್ರೀಯಲ್ ಏರಿಯಾ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕೋಣೇವಾಡಿ, ಬಾಚಿ, ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ, ಹಿಂಡಲಗಾ, ಅಂಗಡಿ ಕಾಲೇಜ್, ಗಣೇಶಪೂರ, ಮಹಾಲಕ್ಷ್ಮೀನಗರ, ಆರ್ಮಿ ಕಾಲನಿ, ಕೆ.ಎಚ್.ಬಿ. ಲೇಔಟ್, ಬೆನಕನಹಳ್ಳಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‍ಸೆಟ್‍ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110 ಕೆ.ವ್ಹಿ. ಉದ್ಯಮಬಾಗ ಉಪಕೇಂದ್ರದಿಂದ ವಿತರಣೆಯಾಗುವ ಪೀರಣವಾಡಿ, ಖಾದರವಾಡಿ, ಮಚ್ಛೆ, ಹುಂಚ್ಯಾನಟ್ಟಿ ಗ್ರಾಮಗಳಿಗೆ ಹಾಗೂ ಮಚ್ಛೆ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಳಗಾವಿ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಕಾರ್ಯ ನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಪದ್ಮಶ್ರೀ ಪಂಡಿತ್ ರಾಜೀವ ತಾರಾನಾಥಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಪ್ರದಾನ

ವಿವಿಯ ಘನತೆ ಹೆಚ್ಚಿದೆ: ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರಗೌಡ

 

ಬೆಳಗಾವಿ,ಏ.28  : ಸಂಗೀತ ಕ್ಷೇತ್ರದಲ್ಲಿ ಅವಿರತ ಸಾಧನೆಯ ಫಲವಾಗಿ ಇವತ್ತು ಪಂ. ರಾಜೀವ ತಾರಾನಾಥ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ಇದರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘನತೆ ಹೆಚ್ಚಿದೆ ಎಂದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರಾಮಚಂದ್ರಗೌಡ ಅವರು ಹೇಳಿದರು.

ಮೈಸೂರಿನ ಕುವೆಂಪುನಗರದ ಪಂಡಿತ್ ರಾಜೀವತಾರಾನಾಥ ಅವರ ನಿವಾಸದಲ್ಲಿ ಬುಧವಾರ(ಏ.27) ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಅಂತರಾಷ್ಟ್ರೀಯ ಖ್ಯಾತ ಸರೋದ್ ವಾದಕ ಪದ್ಮಶ್ರೀ ಪುರಸ್ಕøತ ಪಂಡಿತ್ ರಾಜೀವ ತಾರಾನಾಥ ಅವರಿಗೆ ಡಾಕ್ಟರೇಟ್ ಆಫ್ ಲೆಟರ್ಸ್ ಗೌರವ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಪಂ.ರಾಜೀವ ತಾರಾನಾಥ ಅವರು ಪದವಿ ಲಭಿಸಿದ್ದು ಹೆಮ್ಮೆ ಎನ್ನಿಸುತ್ತಿದೆ. ವಿಶ್ವ ವಿದ್ಯಾಲಯದ ಗೌರವಕ್ಕೆ ಆಭಾರಿ. ಇದು ನಮ್ಮ ಗುರುಗಳಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಿಗೆ ಸಲ್ಲಬೇಕು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ನಾಗೇಶ ವ್ಹಿ ಬೆಟಕೋಟೆ ಹಾಗೂ ಕುಲಸಚಿವರಾದ ಡಾ. ಟಿ.ಎಸ್. ದೇವರಾಜ, ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವರು (ಮೌಲ್ಯಮಾಪನ)ರಾದ ಪ್ರೊ. ವೀರನಗೌಡ ಬಿ. ಪಾಟೀಲ, ಹಣಕಾಸು ಅಧಿಕಾರಿಗಳಾದ ಪ್ರೊ. ಡಿ.ಎನ್. ಪಾಟೀಲ ಮತ್ತು ಸಿಂಡಿಕೇಟ್ ಸದಸ್ಯರಾದ ಶ್ರೀನಿವಾಸ ಶಾಸ್ತ್ರಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಇಂದೂಧರ ನಿರೋಡಿ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಲಸಚಿವ ಪೆÇ್ರ.ಬಸವರಾಜ ಪದ್ಮಶಾಲಿ ಅವರು ಸ್ವಾಗತಿಸಿದರು. ಕುಲಸಚಿವ (ಮೌಲ್ಯಮಾಪನ) ಪೆÇ್ರ.ವೀರನಗೌಡ ಪಾಟೀಲ ಭಿನ್ನವತ್ತಳೆ ಓದಿದರು. ಗಣೇಶ ಅಮೀನಗಡ ಕಾರ್ಯಕ್ರಮ ನಿರೂಪಿಸಿದರು.///

 

ಚಿಕ್ಕೋಡಿ ವಿಭಾಗದ ವೇಗದೂತ ಸಾರಿಗೆ: ಏ.29ರಿಂದ ಆರಂಭ

ಬೆಳಗಾವಿ,ಏ.28  : ಚಿಕ್ಕೋಡಿ ವಿಭಾಗದ ನಿಪ್ಪಾಣಿ, ಸಂಕೇಶ್ವರ, ಗೋಕಾಕ ಹಾಗೂ ಅಥಣಿ ಘಟಕಗಳಿಂದ ವೇಗದೂತ ತಡೆರಹಿತ ಸಾರಿಗೆಗಳನ್ನು ಏಪ್ರಿಲ್ 29 ರಿಂದ ಕಾರ್ಯಾಚರಣೆ ಮಾಡಲಾಗುವುದು.

ಗೋಕಾಕ-ಬೆಳಗಾವಿ, ಸಂಕೇಶ್ವರ-ಗೋಕಾಕ, ನಿಪ್ಪಾಣಿ-ಇಚಲಕರಂಜಿ ಮತ್ತು ಅಥಣಿ-ಮಿರಜ ಮಾರ್ಗಗಳಲ್ಲಿ ಒಂದು ತಾಲೂಕಾ ಸ್ಥಳದಿಂದ ಮತ್ತೊಂದು ತಾಲೂಕಾ ಸ್ಥಳಕ್ಕೆ ನೇರವಾಗಿ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ತಡೆರಹಿತ ಸಾರಿಗೆಗಳನ್ನು ಏಪ್ರಿಲ್ 29ರಿಂದ ಕಾರ್ಯಾಚರಣೆ ಪ್ರಾರಂಭಿಸಲಾಗುವುದು, ಸಾರ್ವಜನಿಕ ಪ್ರಯಾಣಿಕರು ಈ ತಡೆರಹಿತ ಸಾರಿಗೆಗಳ ಪ್ರಯೋಜನ ಪಡೆಯಬಹದು ಎಂದು ವಾ.ಕ.ರ.ಸಾ.ಸಂಸ್ಥೆಯ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ

ಗಾಂಧೀಜಿ ಕಂಡ ಕನಸು ನನಸಾಗಬೇಕು : ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ

ಬೆಳಗಾವಿ,ಏ.28   ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರು ಗ್ರಾಮಗಳ ಅಭಿವೃದ್ದಿ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಆಗಬೇಕು ಎಂಬ ಆಶಯ ಹೊಂದಿದ್ದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಗಾಂಧೀಜಿಯವರ ಕನಸನ್ನು ನನಸು ಮಾಡಬೇಕಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ, 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಂಏಂಒ ಅಂತೋದಯ ಕಾರ್ಯಕ್ರಮಕ್ಕೆ ನಗರದ ಕಾಂಗ್ರೆಸ್ ಬಾವಿ (ವೀರ ಸೌಧ) ಆವರಣದಲ್ಲಿ ಗುರುವಾರ (ಏ.28) ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಗಳ ಬೆಳವಣಿಗೆಯೇ ದೇಶದ ಬೆಳವಣಿಗೆ. ಗ್ರಾಮಗಳು ಬೆಳವಣಿಗೆ ಹೊಂದಬೇಕು, ರೈತರು, ಗುಡಿ ಕೈಗಾರಿಕೆಗಳು ಹಾಗೂ ಗ್ರಾಮೀಣ ವಿಭಾಗದಲ್ಲಿ ಶಿಕ್ಷಣಕ್ಕೆ ಮಹತ್ವವನ್ನು ನೀಡಬೇಕು. ಶಿಕ್ಷಣದಿಂದಲೇ ಹಳ್ಳಿಗಳ ಅಭಿವೃದ್ದಿ ಸಾಧ್ಯ ಆದ್ದರಿಂದ ಎಲ್ಲ ಅಧಿಕಾರಿಗಳು ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
90 ದಿನಗಳ ಕಾಲ ವಿವಿಧ 13 ಇಲಾಖೆಗಳ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಆಶಯಗಳನ್ನು ಈಡೇರಿಸುವುದು ಎಲ್ಲ ಇಲಾಖೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಸಚಿವರಾದ ಗೋವಿಂದ ಕಾರಜೋಳ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ್ ಅವರು, 75 ವರ್ಷಗಳ ಕಾಲಘಟ್ಟದಲ್ಲಿ ಹಲವಾರು ಮಹನೀಯರು ದೇಶಕ್ಕಾಗಿ ತಮ್ಮ ಬದುಕು ಸಮರ್ಪಣೆ ಮಾಡಿದ್ದಾರೆ, ಅವರ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದರು.
ನಂತರ ಂಏಂಒ ಅಂತೋದಯ ಕಾರ್ಯಕ್ರಮ ಅಡಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಇದಕ್ಕೂ ಮುಂಚೆ ವೀರ ಸೌಧದ ಆವರಣದಲ್ಲಿ ಗಾಂಧೀಜಿಯವರ ಪುತ್ಥಳಿಗೆ ಗಣ್ಯರು ಗೌರವ ಸಲ್ಲಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ದರ್ಶನ್ ಎಚ್.ವಿ, ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆಯ ಉಪ ಆಯುಕ್ತ(ಆಡಳಿತ)ರಾದ ಭಾಗ್ಯಶ್ರೀ ಹುಗ್ಗಿ ಹಾಗೂ 13 ಇಲಾಖೆಯ ಸಿಬ್ಬಂದಿ ಅಧಿಕಾರಿಗಳು ಉಪಸ್ಥಿತರಿದ್ದರು.///

 

ಅಕ್ರಮ ತಂಬಾಕು ಮಾರಾಟ: ದಾಳಿ ನಡೆಸಿ 43 ಪ್ರಕರಣ ದಾಖಲು

ಬೆಳಗಾವಿ,ಏ.28   ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಅಧಿಕಾರಿಗಳು ಬೆಳಗಾವಿಯ ಆಟೋ ನಗರದಲ್ಲಿ ಶಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ 43 ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

ಸದರಿ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಬಿ.ಎನ್. ತುಕ್ಕಾರ, ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ, ಸಮಾಜ ಕಾರ್ಯಕರ್ತೆ ಕವಿತಾ ರಾಜನ್ನವರ, ಆರೋಗ್ಯ ಇಲಾಖೆ ಸಿಬ್ಬಂದಿ ಉದಯ ಹೀರೆಮಠ ಹಾಗೂ ಪೊಲೀಸ್ ಸಿಬ್ಬಂದಿಗಳು ಕೆ.ಬಿ ಗ್ವಾರಾಜ್ ಭಾಗವಹಿಸಿದ್ದರು.//