Belagavi News In Kannada | News Belgaum

ಕೆಲಸದಿಂದ ವಜಾ ಮಾಡಿದ್ದಕ್ಕೆ ಯಜಮಾನಿಗೆ ಬೆಂಕಿ

ಪುಣೆ: ಕೆಲಸದಿಂದ ವಜಾ ಮಾಡಿದ್ದಕ್ಕೆ ಕೋಪಗೊಂಡ ನೌಕರ ಯಜಮಾನಿಗೆ ಬೆಂಕಿಹಚ್ಚಿದ್ದು, ಅವನನ್ನು ಬೆಂಕಿಯಲ್ಲಿ ಎಳೆದುಕೊಂಡಿದ್ದರಿಂದ ಇಬ್ಬರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಬಾಳ ನೋಯ ಜರ್ನಿ (32) ಮೃತ ಮಹಿಳೆ ಹಾಗೂ ಮಿಲಿಂದ್ ಗೋವಿಂದರಾವ್ ನಾಥಸಾಗರ್ ಮೃತ ನೌಕರ ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ವಡಗಾಂವ್ ಶೇರಿಯ ಸೋಮನಾಥ ನಗರದಲ್ಲಿ ಹೊಲಿಗೆ ಅಂಗಡಿ ನಡೆಸುತ್ತಿದ್ದಳು. ಕೆಲ ದಿನಗಳ ಹಿಂದೆ ಮನೆಗೆಲಸದಿಂದ ನೌಕರನನ್ನು ವಜಾ ಮಾಡಿದ್ದಳು. ಇದರಿಂದ ಕೋಪಗೊಂಡ ನೌಕರ, ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಆ ವೇಳೆ ಮಹಿಳೆ ಪಕ್ಕದಲ್ಲಿದ್ದ ನೌಕರನನ್ನು ಎಳೆದುಕೊಂಡ ಪರಿಣಾಮ ಇಬ್ಬರಿಗೂ ಬೆಂಕಿ ತಲುಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆಗೆ ಬೆಂಕಿ ಹಚ್ಚಿದ್ದ ನೌಕರ ಅದೇ ದಿನ ಸಾವನ್ನಪ್ಪಿದ್ದನು. ಇತ್ತ ಮಹಿಳೆ ಕೂಡ ಮರುದಿನ ಚಿಕಿತ್ಸೆಗೆ ಸ್ಪದಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಚಂದನನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.