Belagavi News In Kannada | News Belgaum

ಏಷ್ಯಾ ಚಾಂಪಿಯನ್‌ಶಿಪ್ ನಲ್ಲಿ ಸಿಂಧುಗೆ ಕಂಚು

ಮುಂಬೈ ; ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ 2022 ರ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಹಾಲಿ ಚಾಪಿಯನ್‌ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೋಲು ಅನುಭವಿಸಿದ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಶನಿವಾರ ನಡೆದ ಸೆಮೀಸ್‌ ಪಂದ್ಯದಲ್ಲಿ ವಿಶ್ವದ ನಂ.2 ಆಟಗಾರ್ತಿ ಯಮಗುಚಿ ವಿರುದ್ಧ ಒಂದು ಗಂಟೆ ಆರು ನಿಮಿಷಗಳ ಹೋರಾಡಿದ ಸಿಂಧು 13-21, 21-19, 16-21 ಸೆಟ್‌ ಗಳಲ್ಲಿ ವೀರೋಚಿತ ಸೋಲು ಕಂಡರು. ಕಾಂಟಿನೆಂಟಲ್ ಈವೆಂಟ್‌ನಲ್ಲಿ ಸಿಂಧುಗೆ ಇದು ಎರಡನೇ ಕಂಚಿನ ಪದಕವಾಗಿದೆ.
ಸಿಂಧು ಹೆಚ್ಚಿನ ಸವಾಲಿಲ್ಲದೆ ಮೊದಲ ಸೆಟ್‌ ಅನ್ನು ಗೆದ್ದರು. ಎರಡನೇ ಸೆಟ್‌ ವಿರಾಮದ ವೇಳೆಗೆ ಸಿಂಧು 11-6ರಲ್ಲಿ ಮುನ್ನಡೆ ಸಾಧಿಸಿದರು. ಆದರೆ ಸಿಂಧು ಪಾಯಿಂಟ್‌ಗಳ ನಡುವೆ ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕಾಗಿ ಪಾಯಿಂಟ್ ಪೆನಾಲ್ಟಿ ನೀಡಲಾಯಿತು. ಈ ವೇಳೆ ಕ್ರೀಡಾಂಗಣದಲ್ಲಿ ರೆಫರಿಯೊಂದಿಗಿನ ವಾಗ್ವಾದಕ್ಕೂ ಕಾರಣವಾಗಿತ್ತು. ಇದರಿಂದಾಗಿ ಸಿಂಧು ಹಿನ್ನೆಡೆ ಅನುಭವಿಸಿದರು. ಅಂತಿಮ ಗೇಮ್‌ನಲ್ಲಿ ಸಿಂಧು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಯಮಗುಚಿ ಐದು ಮ್ಯಾಚ್ ಪಾಯಿಂಟ್‌ ಅಂತರದಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಈ ಪಂದ್ಯದ ಸೋಲಿನ ಮೂಲಕ ಸಿಂಧು ಮತ್ತು ಯಮಗುಚಿ ನಡುವಿನ ಮುಖಾಮುಖಿಯು ಈಗ 13-9 ಆಗಿದೆ. ಸಿಂಧು ಸೋಲಿನಿಂದಾಗಿ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ./////