Belagavi News In Kannada | News Belgaum

ಮತ್ತೊಬ್ಬ ಗುತ್ತಿಗೆದಾರನಿಂದ ಪರ್ಸೆಂಟೇಜ್ ಆರೋಪ: ಪ್ರಧಾನಿ ಮೋದಿಗೆ ಪತ್ರ

ಕೊಪ್ಪಳ: ಸಚಿವ ಈಶ್ವರಪ್ಪ ವಿರುದ್ಧ ಶೇ.40ರಷ್ಟು ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಮತ್ತೊಬ್ಬ ಗುತ್ತಿಗೆದಾರ ಕಾಮಗಾರಿ ಬಿಲ್‌ ಪಾವತಿಗೆ ಲಂಚ ಕೇಳುತ್ತಿದ್ದಾರೆಂದು ಆರೋಪಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಕೊಪ್ಪಳದ ಕುಂಟೋಜಿ ಗ್ರಾಮದ ಗುತ್ತಿಗೆದಾರ ಎರ್ರಿಸ್ವಾಮಿ ಎನ್ನುವವರು ಪ್ರಧಾನಿಗೆ ಪತ್ರ ಬರೆದಿದು, ಕಮಿಷನ್‌ ನೀಡುವಂತೆ ಕಿರುಕುಳ ನೀಡ್ತಿದ್ದಾರೆಂದು ಆರೋಪ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಮಾಡಲಾಗಿದ್ದು, ಘಟಕದ ಬಿಲ್‌ ಪಾವತಿಗೆ ಕಮಿಷನ್‌ ಕೇಳಿದ್ದಾರೆಂದು ಆರೋಪ ಮಾಡಿದ್ದಾರೆ. ಇನ್ನು ಭ್ರಷ್ಟರನ್ನು ರಕ್ಷಿಸಲು ಕೊಪ್ಪಳ ಜಿ.ಪಂ ಸಿಇಒ ಮುಂದಾಗಿದ್ದಾರೆಂದು ಪತ್ರ ಬರೆದಿದ್ದು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರಧಾನಿ ಕಚೇರಿಗೆ ಪತ್ರ ಬರೆಯಲಾಗಿದೆ.‌/////