Belagavi News In Kannada | News Belgaum

ಶಿವರಾಜ ಅಶೋಕ ಪಾಟೀಲಗೆ ಪಿಹೆಚ್ ಡಿ ಪ್ರದಾನ

ಬೆಳಗಾವಿ: ಭೌತಶಾಸ್ತ್ರ ವಿಭಾಗದ ಸಂಶೋಧನಾ ಅಭ್ಯರ್ಥಿಯಾದ ಶಿವರಾಜ ಅಶೋಕ‌  ಪಾಟೀಲ ಇವರಿಗೆ, ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರ್ ಆಫ್‌ ಫಿಲಾಸಫಿ(ಪಿಎಚ್.ಡಿ) ಪದವಿ ಪ್ರದಾನ ಮಾಡಿದೆ.
ವಿಶ್ವವಿದ್ಯಾಲಯದ  ಭೌತಶಾಸ್ತ್ರ ವಿಭಾಗದ ವಿಜ್ಞಾನ ಮತ್ತು ತಂತ್ರಜ್ಞಾನ ನಿಖಾಯದಲ್ಲಿ ಸೈಕ್ಟ್ರೊಸ್ಕೋಪಿಕ್ ಸ್ಟಡಿ ಆಫ್ ಸಮ್ ಆರ್ಗ್ಯಾನಿಕ್ ಡೈಸ್ ಆ್ಯಂಡ ನ್ಯಾನೊ ಪಾರ್ಟಿಕಲ್” ಎಂಬ ವಿಷಯದಲ್ಲಿ ಶಿವರಾಜ ಅಶೋಕ‌ ಪಾಟೀಲ ಸಂಶೋಧನಾ‌ ಮಹಾ ಪ್ರಬಂಧವನ್ನು  ಸಾದರಪಡಿಸಿದ್ದರು.
ಇವರ ಸಂಶೋಧನೆಗೆ ಭೌತಶಾಸ್ತ್ರ ವಿಭಾಗದ ಡಾ. ಸಂಜೀವ ಆರ್ ಇನಾಮದಾರ ಇವರು ಮಾರ್ಗದರ್ಶನ ಮಾಡಿದ್ದರು. ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದವರಾದ ಶಿವರಾಜ ಪಾಟೀಲ, ಮೂಲ ವಿಜ್ಞಾನದಲ್ಲಿ ಇನ್ನೂ ಹೆಚ್ಚಿನ‌ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಲಿದ್ದಾರೆ.//////