Belagavi News In Kannada | News Belgaum

ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಪಾದಯಾತ್ರೆ

ಅಥಣಿ : ಪಟ್ಟಣದ ವಿವಿಧ ಬಡಾವಣೆ,ಗಲ್ಲಿಗಲ್ಲಿಯಲ್ಲಿ   ಬೆಳ್ಳಂಬೆಳಿಗೆ ೬.೩೦ ಗಂಟೆ ಯಿಂದ ೮.೩೦ ಗಂಟೆಯವರೆಗೆ ಗಚ್ಚಿನಮಠದ ಶಿವಬಸವ ಸ್ವಾಮೀಜಿಯವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.ಗಚ್ಚಿನಮಠದಿಂದ ಆರಂಭವಾದ ಪಾದಯಾತ್ರೆಯು ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರದ ಪೂಜೆಯೊಂದಿಗೆ ಬಸವಣ್ಣನವರ ವಚನಸಾಹಿತ್ಯದೊಂದಿಗೆ ಮನೆ ಮನೆಗೂ ಬಸವ ಪುರಾಣ ಮತ್ತು ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವದ ಕುರಿತು ಮಾಹಿತಿ ನೀಡುತ್ತಾ ಬಸವ ಜಯಘೋಷಗಳೊಂದಿಗೆ ಪೂಜ್ಯರು,ಯುವಕರು,ಮಹಿಳೆಯರು,ಹಿರಿಯರು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜನಜಾಗೃತಿ ಪಾದಯಾತ್ರೆ ಕೈಗೊಂಡರು.
ಈ ವೇಳೆ ಮಾತನಾಡಿದ ಶಿವಬಸವ ಸ್ವಾಮೀಜಿ ಬಸವಣ್ಣ ಎಂದರೆ ಸಮಾನತೆಯ ಬೆಳಕು,ಬದಲಾವಣೆ ದಿಕ್ಸೂಚಿ ಅಂತಹ ಬಸವಣ್ಣನವರ ಬಸವಪುರಾಣ ಗಚ್ಚಿನಮಠದಲ್ಲಿ ಹಮ್ಮಿಕೊಂಡಿರುವುದು ಎಲ್ಲ ಭಕ್ತರಿಗೆ ಆಧ್ಯಾತ್ಮಿಕ ರಸದೌತನ ಇದರ ಸದುಪಯೋಗ ಪಡೆದುಕೊಂಡು ಬದಕನ್ನ ಹಸನಾಗಿಸಿಕೊಳ್ಳಬಹುದು ಅದರಂತೆ ಈ ಪಾದಯಾತ್ರೆಯು ಪಟ್ಟಣದ ೨೭ ವಾರ್ಡುಗಳಲ್ಲಿ ಸಂಚರಿಸಿ ಎಲ್ಲ ಭಕ್ತರಿಗೆ ಮುರುಘೆಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಕ್ತವಾಗಿ ಆಹ್ವಾನ ನೀಡುವ ಜತೆಗೆ ಬಸವ ಸಂದೇಶವನ್ನ ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
  ಪಾದಯಾತ್ರೆಲ್ಲಿ ಪಾಲ್ಗೋಂಡ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ ಬಸವ ಕ್ರಾಂತಿ ಬದಲಾವಣೆಯ ತಂಗಾಳಿ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವವನ್ನ ಎಲ್ಲರೂ ಸೇರಿ ಯಶಸ್ವಿಗೊಳಿಸೊಣ ಭಕ್ತರ ಭಕ್ತಿ ಅಪಾರವಾಗಿದೆ ಬಸವ ಪುರಾಣ ಕೇಳುವ ಸೌಭಾಗ್ಯ ಒದಿಗೆ ಬಂದಿದೆ ಇದರ ಸದುಪಯೋಗವನ್ನ ತಾಲೂಕಿನ ಮತ್ತು ಪಟ್ಟಣದ ಜನತೆ ಪಡೆಯಬೇಕು ಅದರಂತೆ ಪಾದಯಾತ್ರೆಯು ಪ್ರತಿ ವಾರ್ಡಿನಲ್ಲಿ ನಿರಂತರವಾಗಿ ನಡೆದು ಜನಜಾಗೃತಿ ಮೂಡಿಸುವಲ್ಲಿ ಎಲ್ಲರೂ ಪಾಲ್ಗೋಳೋಣ ಎಂದರು.
ಉಪ್ಪಿನ ಬೇಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ ಮಾತನಾಡಿ ಇದು ಪರಿವರ್ತನೆಯ ಕಾಲವಾಗಿದೆ ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವ ನೆನಹಿನಲ್ಲಿ ಬಸವಪುರಾಣ,ಪಾದಯಾತ್ರೆ ಜನಜಾಗೃತಿ ಇದು ನಮ್ಮ ಬದುಕಿನಲ್ಲಿ ಹೊಸ ಚೈತನ್ಯ ತರಲಿದೆ ಇದರಲ್ಲಿ ಭಕ್ತಿ,ಶ್ರದ್ದೇಯಿಂದ ಪಾಲ್ಗೋಳಿ ಬದುಕು ಪಾವನವಾಗುತ್ತದೆ ಎಂದರು.
ಗಮನ ಸೆಳೆದ ಬಾಲಬಸವ: ೫ವರ್ಷದ ಪುಟಾಣಿ ಸೃಜನ ಗಾಲಿ ಬಸವಣ್ಣನ ವೇಷದಾರಿಯಾಗಿ ತಲೆಯಲ್ಲಿ ಕಿರಿಟ,ಕೊರಳಲ್ಲಿ ರುದ್ರಾಕ್ಷಿ,ಲಿಂಗ ಧರಿಸಿಕೊಂಡು ಪುಟ ಪುಟ ಹೆಜ್ಜೆಯಿಟು ಎಲ್ಲರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೋಂಡು ಗಮನ ಸೆಳೆದ ಈ ಬಾಲಕನ ಸೇವೆ ಕಂಡ ಪೂಜ್ಯರು,ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
  ಪೂಜ್ಯರಾದ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ವಿರೇಶ್ವರ ದೇವರು,ಸಿದ್ದಲಿಂಗ ದೇವರು,ಮಲ್ಲಿಕಾರ್ಜುನ ದೇವರು,ಚನ್ನಬಸವ ಸ್ವಾಮೀಜಿ,ತಿಪ್ಪೆರುದ್ರ ಸ್ವಾಮೀಜಿ, ಬಸವರಾಜ ದೇವರು. ಸಂಗೀತ ಕಲಾವಿದರಾದ ನಾಗರಾಜ ಹೂಗಾರ,ಸುರೇಶ ಕೊಡೆಕಲ್,ಗಿರಿಶ ಕೊಳಾಲ,ದುರ್ಗಾಮಾತಾ ದೌಡ ಕಾರ್ಯಕರ್ತರು,ಮಹಿಳಾ ಪದಾಧಿಕಾರಿಗಳು,ಯುವಕ ಸಂಘದವರು ಸೇರಿದಂತೆ ಮತ್ತಿತರರು ಇದ್ದರು./////